‘ನವೀನ್ ನಿವಾಸ’ ಗೃಹಪ್ರವೇಶ: ಸದಾ ಮಗನ ನೆರಳಲ್ಲಿ ಇರುತ್ತೇವೆಂದು ಭಾವುಕರಾದರು ಉಕ್ರೇನ್ ಯುದ್ಧದಲ್ಲಿ ಬಲಿಯಾಗಿದ್ದ ವೈದ್ಯ ವಿದ್ಯಾರ್ಥಿ ನವೀನನ ಅಪ್ಪಅಮ್ಮ

ನವೀನ್ ತಂದೆ ತಾಯಿ ಬಡತನದಲ್ಲಿ ಕಷ್ಟಪಟ್ಟು ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್ ಗೆ ತಮ್ಮ ಮಗನನ್ನು ಕಳುಹಿಸಿದ್ದರು. ಅದರೆ ಯುದ್ಧ ಸಂದರ್ಭದ ನವೀನನ್ನು ಬಲಿ ಪಡೆಯಿತು. ಕುಟುಂಬದ ಕನಸು ಕಮರುವಂತೆ ಮಾಡಿತು. ಆದರೆ ಈಗ ನೂತನ ಮನೆ ನಿರ್ಮಿಸಿ, ಮಗನ ನೆರಳಿನಲ್ಲಿ ತಂದೆತಾಯಿ ಜೀವನ ಮಾಡುತ್ತಿದ್ದಾರೆ.

'ನವೀನ್ ನಿವಾಸ’ ಗೃಹಪ್ರವೇಶ: ಸದಾ ಮಗನ ನೆರಳಲ್ಲಿ ಇರುತ್ತೇವೆಂದು ಭಾವುಕರಾದರು ಉಕ್ರೇನ್ ಯುದ್ಧದಲ್ಲಿ ಬಲಿಯಾಗಿದ್ದ ವೈದ್ಯ ವಿದ್ಯಾರ್ಥಿ ನವೀನನ ಅಪ್ಪಅಮ್ಮ
'ನವೀನ್ ನಿವಾಸ’ ಗೃಹಪ್ರವೇಶ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 17, 2023 | 1:22 PM

ರಷ್ಯಾ ಮತ್ತು ಉಕ್ರೇನ್ ಯುದ್ಧದಲ್ಲಿ ಎಂಬಿಬಿಎಸ್ ವಿದ್ಯಾರ್ಥಿ (Medical Student) ಕನ್ನಡಿಗ ನವೀನ ಬಲಿಯಾಗಿದ್ದ. ಈ ಘಟನೆಯಿಂದ ನಮ್ಮ ದೇಶ ಹಾಗೂ ಕರುನಾಡಿಗೆ ಬರಸಿಡಿಲು ಬಡಿದಂತಾಗಿತ್ತು. ಈಗ ನವೀನ ಕಂಡ ಒಂದು ಕನಸನ್ನ ತಂದೆ ತಾಯಿ ನನಸು ಮಾಡಿದ್ದಾರೆ. ಆತನ ಹೆಸರಿನಲ್ಲಿ ನೂತನ ಮನೆ ನಿರ್ಮಿಸಿದ್ದು, ಮಗನ ಹೆಸರನ್ನ ನಾಮಕರಣ ಮಾಡಿದ್ದಾರೆ (House Warming Ceremony). ಈ ಕುರಿತು ಒಂದು ವರದಿ ಇಲ್ಲಿದೆ. ಅದು ಮಾರ್ಚ್ 1 2022 ರಂದು ಉಕ್ರೇನ್ ಮತ್ತು ರಷ್ಯಾ ಯುದ್ದದಲ್ಲಿ ಕನ್ನಡಿಗ ನವೀನ ಬಲಿಯಾಗಿದ್ದ. ಇದರಿಂದ ಕರುನಾಡಿಗೆ ಬರಸಿಡಿಲು ಬಡಿದಂತಾಗಿತ್ತು. ಯಾಕಂದ್ರೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಹಾವೇರಿ (Haveri) ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನಿವಾಸಿ ನವೀನ ಗ್ಯಾನಗೌಡರ ಎಂಬಾತ ಮೃತಪಟ್ಟಿದ್ದ. ಮೃತ ನವೀನ ಉಕ್ರೇನ್ ನಲ್ಲಿ ಎಂಬಿಬಿಎಸ್ ನಾಲ್ಕನೆ ಸೆಮಿಸ್ಟರ್ ನಲ್ಲಿ ಓದುತ್ತಿದ್ದ. ನವೀನ (Naveen Gyanagoudar) ಮೃತಪಟ್ಟ ಸುದ್ದಿ ಆತನ ಕುಟುಂಬದವರಿಗೆ ಬರಸಿಡಿಲು ಬಡಿದಂತಾಗಿತ್ತು.

ನವೀನ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಜ್ಯಪಾಲರು, ಸಿ.ಎಂ. ಬಸವರಾಜ ಬೊಮ್ಮಾಯಿ, ಮಾಜಿ ಸಿ.ಎಂ.ಯಡಿಯೂರಪ್ಪ, ವಿರೋಧ ಪಕ್ಷದ ನಾಯಕರು ಸೇರಿದಂತೆ ಎಲ್ಲರೂ ಆ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಆದರೆ ನವೀನ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ವೇಳೆ ತಂದೆ ತಾಯಿಗೆ ಮಾತು ಕೊಟ್ಟಿದ್ದನಂತೆ. ನಾನು ವೈದ್ಯನಾದ ಬಳಿಕ ಮನೆ ಕಟ್ಟಿಸುತ್ತೇನೆ. ಈಗ ಇರುವ ಮನೆಯಲ್ಲಿ ಕ್ಲಿನಿಕ್ ನಡೆಸುತ್ತೇನೆ ಅಂತಾ ಮಾತುಕೊಟ್ಟಿದ್ದ. ಈಗ ಮಗನ ಆಸೆಯಂತೆ ತಂದೆ ತಾಯಿ ನೂತನ ಮನೆಯನ್ನ ಕಟ್ಟಿಸಿದ್ದಾರೆ. ಮಗನ ಹೆಸರನ್ನೇ ಮನೆಗೆ ನಾಮಕರಣ ಮಾಡಿದ್ದಾರೆ. ಮಗನ ನೆರಳಿನಲ್ಲಿ ಸದಾ ಇರುತ್ತೇವೆ ಅಂತಾ ಕೆಲಕಾಲ ಭಾವುಕರಾದರು ನವೀನ್ ತಂದೆ ಶೇಖರಗೌಡ ಗ್ಯಾನಗೌಡರ.

ಸುಮಾರು 27 ಲಕ್ಷ ರೂಪಾಯಿ ಖರ್ಚು ಮಾಡಿ ಮನೆಯನ್ನ ಕಟ್ಟಿಸಿದ್ದಾರೆ. ತಂದೆ ಶೇಖರಗೌಡ, ತಾಯಿ ವಿಜಯಲಕ್ಷ್ಮಿ ಮತ್ತು ಸಹೋದರ ಹರ್ಷ, ಮೃತ ನವೀನನ ಕನಸು ನನಸು ಮಾಡಿದ್ದಾರೆ. ‘ನವೀನ್ ನಿವಾಸ’ (Naveen Nivas) ಎಂದು ನಾಮಕರಣ ಮಾಡಿದ್ದು, ಮನೆಯ ಮುಂಭಾಗದಲ್ಲಿಯೇ ನವೀನನ ಭಾವಚಿತ್ರವನ್ನ ಗ್ರಾನೈಟ್ ಕಲ್ಲಿನಲ್ಲಿ ಕೆತ್ತಿಸಿ ಹಾಕಲಾಗಿದೆ. ಇಂದು ಶುಕ್ರವಾರ ಗೃಹಪ್ರವೇಶ ಮಾಡಲಿದ್ದಾರೆ. ಡಾಕ್ಟರ್ ಆಗಿ ಬರ್ತೆನಿ ಅಂತ ಹೋಗಿದ್ದ ಮಗ ಹೆಣವಾಗಿ ಮನೆಗೆ ಬಂದ ಕಹಿ ಘಳಿಗೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಆತನಿಗೆ ಎರಡು ಕನಸುಗಳಿದ್ದವು. ತಾನು ಡಾಕ್ಟರ್ ಆಗಬೇಕು… ಡಾಕ್ಟರ್ ಆಗಿ, ಆರ್ ಸಿ ಸಿ ಮನೆ ಕಟ್ಟಿಸಬೇಕು. ಆದ್ರೆ ಮಗನ ಅರ್ಧ ಆಸೆ ಅಷ್ಟೇ ಈಡೇರಿದೆ ಎಂದು ಮಗನ ತಾಯಿ ವಿಜಯಲಕ್ಷ್ಮಿ ಭಾವುಕರಾದರು.

ನವೀನ್ ತಂದೆ ತಾಯಿ ಬಡತನದಲ್ಲಿ ಕಷ್ಟಪಟ್ಟು ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್ ಗೆ ತಮ್ಮ ಮಗನನ್ನು ಕಳುಹಿಸಿದ್ದರು. ಅದರೆ ಉಕ್ರೇನ್ ಮತ್ತು ರಷ್ಯಾ ವಾರ್ ನಮ್ಮ ಕನ್ನಡದ ಕುವರ ನವೀನನ್ನು ಬಲಿ ಪಡೆಯಿತು. ಆ ಕುಟುಂಬದ ಕನಸು ಕಮರುವಂತೆ ಮಾಡಿತು. ಈಗ ಮಗನ ಕನಸು ನನಸು ಮಾಡಿ ನೂತನ ಮನೆ ನಿರ್ಮಿಸಿ, ಮನೆಗೆ ನವೀನ್ ನಿವಾಸ ನಾಮಕರಣ ಮಾಡಿ ಮಗನ ನೆರಳಿನಲ್ಲಿ ತಂದೆತಾಯಿ ಜೀವನ ಮಾಡುತ್ತಿದ್ದಾರೆ.

ವರದಿ: ಸೂರಜ್ ಉತ್ತೂರೆ, ಟಿವಿ 9, ಹಾವೇರಿ

Published On - 12:59 pm, Fri, 17 February 23

ಜಯನಗರ ಶಾಸಕರು ಬೆಂಗಳೂರಿನ ಆಧೋಗತಿಯನ್ನು ತೋರಿಸಬೇಕು: ಡಿಕೆಶಿ ಸವಾಲ್
ಜಯನಗರ ಶಾಸಕರು ಬೆಂಗಳೂರಿನ ಆಧೋಗತಿಯನ್ನು ತೋರಿಸಬೇಕು: ಡಿಕೆಶಿ ಸವಾಲ್
ಬಿಗ್ ಬಾಸ್ ಮನೆಗೆ ಕಾಲಿಡುತ್ತಲೇ ವಿಶೇಷ ಅಧಿಕಾರ ಪಡೆದ ರಜತ್, ಶೋಭಾ ಶೆಟ್ಟಿ
ಬಿಗ್ ಬಾಸ್ ಮನೆಗೆ ಕಾಲಿಡುತ್ತಲೇ ವಿಶೇಷ ಅಧಿಕಾರ ಪಡೆದ ರಜತ್, ಶೋಭಾ ಶೆಟ್ಟಿ
ಗೋದಾವರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ ರಕ್ಷಿಸಿದ ಪತ್ರಕರ್ತರು
ಗೋದಾವರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ ರಕ್ಷಿಸಿದ ಪತ್ರಕರ್ತರು
ನನ್ನಂತೆ ಬಸವರಾಜ ಬೊಮ್ಮಾಯಿ ಸಹ ಮಧುಮೇಹದಿಂದ ಬಳಲುತ್ತಿದ್ದಾರೆ: ಸಿದ್ದರಾಮಯ್ಯ
ನನ್ನಂತೆ ಬಸವರಾಜ ಬೊಮ್ಮಾಯಿ ಸಹ ಮಧುಮೇಹದಿಂದ ಬಳಲುತ್ತಿದ್ದಾರೆ: ಸಿದ್ದರಾಮಯ್ಯ
ಉಗ್ರಂ ಮಂಜು-ಮೋಕ್ಷಿತಾ ನಡುವೆ ದುಷ್ಮನಿ; ತೊಡೆ ತಟ್ಟಿದ ತ್ರಿವಿಕ್ರಮ್
ಉಗ್ರಂ ಮಂಜು-ಮೋಕ್ಷಿತಾ ನಡುವೆ ದುಷ್ಮನಿ; ತೊಡೆ ತಟ್ಟಿದ ತ್ರಿವಿಕ್ರಮ್
ಕೋವಿಡ್ ಹಗರಣ: ಕೆಲ ಅಂತೆ-ಕಂತೆಗಳಿಗೆ ತೆರೆ ಎಳೆದ ಡಾ ಸಿಎನ್​ ಮಂಜುನಾಥ್
ಕೋವಿಡ್ ಹಗರಣ: ಕೆಲ ಅಂತೆ-ಕಂತೆಗಳಿಗೆ ತೆರೆ ಎಳೆದ ಡಾ ಸಿಎನ್​ ಮಂಜುನಾಥ್
ನಮ್ಮ ಸರ್ಕಾರದ ವಿರುದ್ಧ ಯಾವುದೇ ಆರೋಪ ಸಾಬೀತಾಗಿಲ್ಲ: ಚಲುವರಾಯಸ್ವಾಮಿ
ನಮ್ಮ ಸರ್ಕಾರದ ವಿರುದ್ಧ ಯಾವುದೇ ಆರೋಪ ಸಾಬೀತಾಗಿಲ್ಲ: ಚಲುವರಾಯಸ್ವಾಮಿ
ಬಾಗಲಕೋಟೆ: ಸ್ನೇಹಿತನ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ವಿದೇಶಿಗರು
ಬಾಗಲಕೋಟೆ: ಸ್ನೇಹಿತನ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ವಿದೇಶಿಗರು
ಕುಮಾರಸ್ವಾಮಿ ವಿರುದ್ಧ ಸಾವಿರಾರು ಕೋಟಿ ರೂ. ಗಿಫ್ಟ್​ ಆರೋಪ
ಕುಮಾರಸ್ವಾಮಿ ವಿರುದ್ಧ ಸಾವಿರಾರು ಕೋಟಿ ರೂ. ಗಿಫ್ಟ್​ ಆರೋಪ
ಚನ್ನಪಟ್ಟಣ ಜೊತೆ ದೇವೇಗೌಡರ ನಂಟು, ಮತ್ತೊಮ್ಮೆ ಇಸವಿ ತಪ್ಪು ಹೇಳಿದ ನಿಖಿಲ್
ಚನ್ನಪಟ್ಟಣ ಜೊತೆ ದೇವೇಗೌಡರ ನಂಟು, ಮತ್ತೊಮ್ಮೆ ಇಸವಿ ತಪ್ಪು ಹೇಳಿದ ನಿಖಿಲ್