ಹಾವೇರಿ: ಹವಾಮಾನ ವೈಪರಿತ್ಯದಿಂದ ನಷ್ಟ ಅನುಭವಿಸಿದ್ರು, ಸ್ವಾವಲಂಬಿಯಾಗಿ ತನ್ನ ಜೀವನ ಸಾಗಿಸುತ್ತಿರುವ ರೈತನಿಗೆ ಬೆನ್ನೆಲುಬಾಗಿರುವುದು ದನ ಕರುಗಳು. ಅವುಗಳಿಗೆ ಇದ್ದಲ್ಲಿಯೇ ಉತ್ತಮ ಗುಣ ಮಟ್ಟದ ಉಚಿತ ಚಿಕಿತ್ಸೆಯನ್ನು ನೀಡುವ ಸದುದ್ದೇಶದಿಂದ 2022 ರ ಜುಲೈ ನಲ್ಲಿ ಬಸವರಾಜ್ ಬೊಮ್ಮಾಯಿ(Basavaraj Bommai)ಯವರ ಸರ್ಕಾರ, ಪಶು ಅಂಬ್ಯುಲೆನ್ಸ್ ಯೋಜನೆ(Pashu Sanjeevini Ambulance)ಯನ್ನು ಜಾರಿಗೆ ತರಲಾಗಿತ್ತು. ಆದ್ರೆ, ಇದೀಗ ಪಶು ಆಂಬ್ಯುಲೆನ್ಸ್ಗಳನ್ನು ಹುಡುಕುವ ಪರಿಸ್ಥಿತಿ ಇದೆ. ಹಾವೇರಿ ಜಿಲ್ಲೆಯಲ್ಲಿ ಒಟ್ಟು 9 ಪಶು ಆಂಬ್ಯಲೆನ್ಸ್ಗಳಿದ್ದು, ಇಂದು ಒಂದೇ ಒಂದು ಅಂಬ್ಯಲೆನ್ಸ್ ಕೂಡ ಕಾರ್ಯ ನಿರ್ವಹಿಸುತ್ತಿಲ್ಲ. ಇನ್ನು ಈ ಅಂಬ್ಯಲೆನ್ಸ್ಗಳು ಕೇವಲ ನಾಲ್ಕೈದು ತಿಂಗಳಿಗೆ ಮಾತ್ರ ಕಾರ್ಯ ನಿರ್ವಹಿಸಿವೆ.
ಇನ್ನು ಈ ಕುರಿತು ಹಾವೇರಿ ಪಶು ಇಲಾಖೆ ಎಡಿ ಕಿರಣ ಸಂತಿಯವರು ಮಾತನಾಡಿ ‘ಪಶು ಅಂಬ್ಯಲೆನ್ಸ್ ಯೋಜನೆಯನ್ನು ಕಾರ್ಯ ನಿರ್ವಹಿಸಲು ಖಾಸಗಿ ಕಂಪನಿಗೆ ಟೆಂಡರ್ ಕೊಡಲಾಗಿದ್ದು, ಇದುವರೆಗೂ ಆ ಕಂಪನಿ ಕಾರ್ಯನಿರ್ವಹಿಸದೆ ಇರುವುದರಿಂದ ಈ ಯೋಜನೆಯ ಲಾಭ ರೈತರಿಗೆ ಸಿಗುತ್ತಿಲ್ಲ ಎಂದು ಹೇಳಿದರು. ಸರ್ಕಾರ ಯಾವುದೆ ಕಾರ್ಯಕ್ರಮ ಜಾರಿಗೆ ತರುವ ಮುನ್ನ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಂಡಿದ್ರೆ, ಇಂದು ಈ ಸಮಸ್ಯೆ ಆಗುತ್ತಿರಲಿಲ್ಲ.
ಸರ್ಕಾರ ಪ್ರಚಾರಕ್ಕೆಂದು ಕೊಟ್ಯಾಂತರ ರೂಪಾಯಿ ವೆಚ್ಚದ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತದೆ. ಆದ್ರೆ, ಯೋಜನೆಯ ಲಾಭ ಜನರಿಗೆ ಯಾವ ರೀತಿ ತಲುಪಿಸಬೇಕು, ಸಮರ್ಪಕ ಸಿಬ್ಬಂಧಿ ಇದ್ದಾರಾ? ಇಲ್ಲವ, ಎಂಬುವುದರ ಕನಿಷ್ಟ ಯೋಚನೆಯನ್ನು ಮಾಡದೆ, ರೈತರ ಹೆಸರಿನಲ್ಲಿ ಜಾರಿಗೆ ತರುವ ಯೋಜನೆಗಳನ್ನು ಮಾಡುವುದಾದ್ರೂ ಯಾಕೆ ಎಂದು ರೈತರು ಪ್ರಶ್ನಿಸಿದ್ದಾರೆ. ಈ ಸಮಸ್ಯೆ ಕೇವಲ ಹಾವೇರಿ ಜಿಲ್ಲೆಯದ್ದಷ್ಟೆ ಅಲ್ಲದೆ ಇಡಿ ರಾಜ್ಯದಲ್ಲೂ ಇದೆ ಸಮಸ್ಯೆ ಇದೆ. ಆದಷ್ಟು ಬೇಗ ಹೊಸ ಸಂಪುಟ ರಚನೆ ಮಾಡಿ, ಬಜೆಟ್ ಮಂಡನೆ ಮಾಡಿರುವ ಸರ್ಕಾರ ಇನ್ನಾದ್ರೂ, ಈ ಪಶು ಅಂಬ್ಯುಲೆನ್ಸ್ ಯೋಜನೆಯನ್ನು ಸಮರ್ಪವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತಾ ಅಥವಾ ಈ ಕಾರ್ಯಕ್ರಮವನ್ನು ಕೈ ಬಿಡುತ್ತಾ ಕಾದು ನೋಡಬೇಕಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ