ಬಕ್ರೀದ್ ಹಬ್ಬದಂದು ಗೋಹತ್ಯೆ ತಡೆಯಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ -ಪಶುಸಂಗೋಪನಾ ಸಚಿವ ಚೌಹಾಣ್‌

ಜುಲೈ 10 ರಂದು ಬಕ್ರೀದ್ ಇದೆ, ಅಂದು ಗೋಹತ್ಯೆ ಆಗುವುದನ್ನು ತಡೆಯುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದೇನೆ. ಪೊಲೀಸ್ ಅಧಿಕಾರಿಗಳ ಜೊತೆ ಫೋನ್ ಮೂಲಕ ಮಾತನಾಡಿದ್ದೀನಿ, ಗೃಹ ಸಚಿವರ ಜೊತೆ ಮೀಟಿಂಗ್ ಮಾಡಿದ್ದೀನಿ.

ಬಕ್ರೀದ್ ಹಬ್ಬದಂದು ಗೋಹತ್ಯೆ ತಡೆಯಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ -ಪಶುಸಂಗೋಪನಾ ಸಚಿವ ಚೌಹಾಣ್‌
ಪ್ರಭು ಚೌಹಾಣ್
TV9kannada Web Team

| Edited By: Ayesha Banu

Jun 27, 2022 | 10:06 PM

ಹಾಸನ: ಬಕ್ರೀದ್ ಹಬ್ಬದಂದು(Bakrid Festival) ಗೋಹತ್ಯೆ ತಡೆಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ಹಾಸನದಲ್ಲಿ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್(Minister of Animal Husbandry prabhu Chauhan) ಹೇಳಿದ್ದಾರೆ. ಗೋಹತ್ಯೆ ನಿಷೇಧ ಬಳಿಕ 18 ಸಾವಿರ ಜಾನುವಾರು ರಕ್ಷಿಸಲಾಗಿದೆ. 700ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸಲಾಗುತ್ತಿದೆ. ಈ ಬಾರಿಯ ಬಕ್ರೀದ್ ಹಬ್ಬದಂದು ಗೋಹತ್ಯೆ ಎಲ್ಲೂ ನಡೆಯದಂತೆ ನೋಡಿಕೊಳ್ಳಲಾಗುತ್ತದೆ ಎಂದಿದ್ದಾರೆ.

ಪ್ರತಿ ಜಿಲ್ಲೆಯಲ್ಲೂ ಗೋಶಾಲೆ ಹಾಗೂ ಆತ್ಮನಿರ್ಭರ್ ಗೋಶಾಲೆ ತೆರೆಯಲಾಗುವುದು. ಪದೇ ಪದೇ ಸರ್ಕಾರದಿಂದ ಹಣ ಕೇಳಬಾರದು. ಅದಕ್ಕಾಗಿ ಉತ್ತರಪ್ರದೇಶ, ಗುಜರಾತ್, ಮಹಾರಾಷ್ಟ್ರ ರಾಜ್ಯಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿ ಗೋಮೂತ್ರ ಮತ್ತು ಸಗಣಿಯಿಂದ 32 ರೀತಿಯ ಉತ್ಪನ್ನಗಳನ್ನು ತಯಾರಿಸುತ್ತಿದ್ದು ಮಾರ್ಕೆಟ್‌ನಲ್ಲಿ ಸೇಲ್ ಆಗುತ್ತಿದೆ. ಈ ರೀತಿ ನಮ್ಮ ರಾಜ್ಯದಲ್ಲಿ ಮಾಡುವ ಸಂಕಲ್ಪವಿದೆ. ಗೋಹತ್ಯೆ ನಿಷೇಧದ ನಂತರ 18 ಸಾವಿರ ಜಾನುವಾರುಗಳನ್ನು ರಕ್ಷಣೆ ಮಾಡಿಲಾಗಿದೆ. 700 ಕ್ಕೂ ಹೆಚ್ಚು ಕೇಸ್‌ಗಳನ್ನು ದಾಖಲು ಮಾಡಲಾಗಿದೆ. ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸಲಾಗುತ್ತಿದೆ. ಇದನ್ನೂ ಓದಿ: ಮಹತ್ವದ ನಿರ್ಧಾರಗಳ ಬಗ್ಗೆ ಚರ್ಚಿಸಲು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಜೋಡಿಗೆ ಬುಲಾವ್ ನೀಡಿದ ಹೈಕಮಾಂಡ್

ಜಾನುವಾರುಗಳು ಕಸಾಯಿ ಖಾನೆಗೆ ಹೋಗಬಾರದು; ಇದಕ್ಕಾಗಿ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದೇನೆ ಜುಲೈ 10 ರಂದು ಬಕ್ರೀದ್ ಇದೆ, ಅಂದು ಗೋಹತ್ಯೆ ಆಗುವುದನ್ನು ತಡೆಯುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದೇನೆ. ಪೊಲೀಸ್ ಅಧಿಕಾರಿಗಳ ಜೊತೆ ಫೋನ್ ಮೂಲಕ ಮಾತನಾಡಿದ್ದೀನಿ, ಗೃಹ ಸಚಿವರ ಜೊತೆ ಮೀಟಿಂಗ್ ಮಾಡಿದ್ದೀನಿ. ಗೋಹತ್ಯೆ ನಿಷೇಧ ಕಾನೂನು ಸಂಪೂರ್ಣ ಜಾರಿಯಾಗಬೇಕು. ಜಾನುವಾರುಗಳು ಕಸಾಯಿ ಖಾನೆಗೆ ಹೋಗಬಾರದು. ಇದಕ್ಕಾಗಿ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದೇನೆ. ಆದರು ಗೋಹತ್ಯೆ ನಡೆಯುತ್ತಿದೆ. ಹನ್ನೆರಡು ವರ್ಷದ ನಂತರ ಪಶು ಸಂಗೋಪನೆ ಇಲಾಖೆಗೆ 400 ಹುದ್ದೆ ಭರ್ತಿ ಮಾಡಲಾಗಿದೆ. ಕರ್ನಾಟಕ ಇತಿಹಾಸದಲ್ಲಿ ಮೊದಲಭಾರಿಗೆ 250 ಕಿರಿಯ ಪಶು ವೈದ್ಯಕೀಯ ಪರಿಷ್ಕಕರ ನೇಮಕ ಮಾಡಿಕೊಳ್ಳಲಾಗವುದು. 275 ಪಶು ಸಂಜೀವಿನಿ ಅಂಬ್ಯುಲೆನ್ಸ್ ಬಿಡುಗಡೆ ಮಾಡಲಾಗಿದೆ. ದೇಶ ಇತಿಹಾಸದಲ್ಲಿ ಪ್ರಾಣಿ ಸಹಾಯವಾಣಿ ಕೇಂದ್ರಕ್ಕೆ ಚಾಲನೆ ನೀಡಿದ್ದೇವೆ. ಎಂಟು, ಒಂಭತ್ತು ತಿಂಗಳಿನಲ್ಲಿ ಒಂದು ಲಕ್ಷ ಕರೆ ಬಂದಿದೆ. ಶೀಘ್ರದಲ್ಲಿಯೇ ಪುಣ್ಯಕೋಟಿ ದತ್ತಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು.

ಹಂದಿ ಸಾಕಾಣಿಕೆ ಉತ್ತೇಜನಕ್ಕೆ ಹಂದಿ ಫಾರ್ಮ್ ತೆರೆಯಲಾಗುವುದು. 2020 ಮಾರ್ಚ್‌ ತಿಂಗಳಿನಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಾಯಿತು. ಗೋಶಾಲೆಗಾಗಿ ಗೋಮಾಳ ಜಮೀನು ಆಯ್ಕೆ ಮಾಡಲು ಆರು ತಿಂಗಳಾಯ್ತು. ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ತೆರೆಯಲು ಜಾಗ ಗುರುತಿಸಲಾಗಿದೆ. ಐದಾರು ಜಿಲ್ಲೆಯಲ್ಲಿ ಗೋಶಾಲೆ ಕಾಮಗಾರಿ ಪ್ರಗತಿಯಲ್ಲಿದೆ. 30 ಗೋಶಾಲೆಗಳ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು. ಮುಖ್ಯಮಂತ್ರಿಗಳು ಹೊಸದಾಗಿ 75 ತಾಲೂಕು ಕೇಂದ್ರಗಳಿಗೆ ಗೋಶಾಲೆ ಘೋಷಣೆ ಮಾಡಿದ್ದಾರೆ. ರೈತರಲ್ಲಿ ನಾನು ವಿನಂತಿ ಮಾಡುತ್ತಿದ್ದೇನೆ. ಗಂಡು ಕರುಗಳನ್ನು ಕೆಲಕಾಲ ಪೋಷಣೆ ಮಾಡಿ ಎಂದು, ಅವರು ಪಾಲನೆ ಮಾಡುತ್ತಿಲ್ಲ, ಅದಕ್ಕಾಗಿ ಗೋಶಾಲೆ ಪ್ರಾರಂಭ ಮಾಡುತ್ತಿದ್ದೇನೆ. ರೈತರು ಗಂಡು ಹಾಗೂ ವಯಸ್ಸಾದ ಜಾನುವಾರುಗಳನ್ನು ಸಾಕಲು ಆಗದಿದ್ದರೆ ಗೋಶಾಲೆಗೆ ಬಿಡಿ ಎಂದರು. ಇದನ್ನೂ ಓದಿ: ಈ ಮೀನು ಮಾರಾಟವಾಗಿದ್ದು ಬರೋಬ್ಬರಿ 13 ಲಕ್ಷ ರೂಪಾಯಿಗೆ! ಇದರ ದರ ಯಾಕಿಷ್ಟು ದುಬಾರಿ? ಇಲ್ಲಿದೆ ಮಾಹಿತಿ

ಹಾಸನದ ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವಾರ್ನಿಂಗ್ ಪಶು ಸಂಗೋಪನೆ ಸಚಿವರಿಂದ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆದಿದ್ದು ಸರಿಯಾಗಿ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಸಚಿವ ಪ್ರಭು ಚೌಹಾಣ್ ಗರಂ ಆಗಿದ್ದಾರೆ. ನಾನು ಪಶು ಸಂಗೋಪನೆ ಸಚಿವನಾದ ಮೇಲೆ ಯಾವ್ಯಾವ ಯೋಜನೆಗಳನ್ನು ಜಾರಿಗೆ ತಂದಿದ್ದೀನಿ ಎಂದು ಪ್ರಗತಿಯ ಬಗ್ಗೆ ಸಚಿವರು ಮಾಹಿತಿ ಕೇಳಿದ್ರು. ಆದ್ರೆ ಅಧಿಕಾರಿಗಳು ಸಭೆಯಲ್ಲಿ ಸರಿಯಾಗಿ ಮಾಹಿತಿ ನೀಡದಿದ್ದಕ್ಕೆ ಕೋಪಗೊಂಡ ಸಚಿವ ಪ್ರಭು ಚೌಹಾಣ್, ಯೋಜನೆಯ ಬಗ್ಗೆ ಯಾರೂ ಸರಿಯಾಗಿ ಅಧ್ಯಯನ ಮಾಡಿಲ್ಲ. ಯೋಜನೆ ಜಾರಿಗೊಳಿಸುವ ಬಗ್ಗೆ ಖಡಕ್ ಆಗಿ ಸೂಚನೆ ಕೊಟ್ಟಿದ್ದೇನೆ. ಸಹಾಯಕ ನಿರ್ದೇಶಕರುಗಳಿಗೆ ಅದರ ಬಗ್ಗೆ ಗೊತ್ತಿಲ್ಲದಿದ್ದರೆ ಹೇಗೆ ಕೆಲಸ ಮಾಡುತ್ತೀರಿ. ರೈತರಿಗೆ ಯಾವ ರೀತಿ ಯೋಜನೆ ತಲುಪಿಸುತ್ತೀರಾ. ನಮ್ಮ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ನೋವಾಗುತ್ತಿದೆ. ಯೋಜನ ಬಗ್ಗೆ ಸರಿಯಾಗಿ ತಿಳಿದುಕೊಂಡಿಲ್ಲ. ರೈತರಿಗೆ ಸರಿಯಾಗಿ ಸ್ಪಂದಿಸಲ್ಲ, ಅವರ ಫೋನ್ ಕರೆಗಳನ್ನು ಸ್ವೀಕರಿಸುತ್ತಿಲ್ಲ. ನಾನು ಮೂರನೇ ಭಾರಿ ಹಾಸನ ಜಿಲ್ಲೆಗೆ ಬರುತ್ತಿದ್ದೀನಿ. ಇಲ್ಲಿಯವರೆಗೂ ಏನು ಬದಲಾವಣೆ ಆಗಿಲ್ಲ, ಹಾಗೆಯೇ ಇದೆ. ನೀವೆ ಹೀಗಾದರೆ ಪಶು ವೈದ್ಯರು ಏನು ಮಾಡುತ್ತಾರೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada