ಈ ಮೀನು ಮಾರಾಟವಾಗಿದ್ದು ಬರೋಬ್ಬರಿ 13 ಲಕ್ಷ ರೂಪಾಯಿಗೆ! ಇದರ ದರ ಯಾಕಿಷ್ಟು ದುಬಾರಿ? ಇಲ್ಲಿದೆ ಮಾಹಿತಿ
ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರದಲ್ಲಿ ಮೀನುಗಾರು ಅಪರೂಪದ ಸುಮಾರು 55 ಕೆಜಿ ತೂಕದ ಬೃಹತ್ "ಟೆಲಿಯಾ ಭೋಲಾ" ಮೀನನ್ನು ಹಿಡದಿದ್ದು, ಮೀನನ್ನು ಹರಾಜಿನಲ್ಲಿ ಕಂಪನಿಯೊಂದು ಪ್ರತಿ ಕೆಜಿಗೆ 26 ಸಾವಿರ ರೂಪಾಯಿಗೆ ಖರೀದಿಸಿದೆ.
ಕೊಲ್ಕತ್ತ: ಪಶ್ಚಿಮ ಬಂಗಾಳದ (West Bengal) ಪೂರ್ವ ಮಿಡ್ನಾಪುರದಲ್ಲಿ ಮೀನುಗಾರು (Fisherman) ಅಪರೂಪದ ಸುಮಾರು 55 ಕೆಜಿ ತೂಕದ ಬೃಹತ್ “ಟೆಲಿಯಾ ಭೋಲಾ” (Telia Bhola Fish) ಮೀನನ್ನು ಹಿಡದಿದ್ದು, ಮೀನನ್ನು ಹರಾಜಿನಲ್ಲಿ ಕಂಪನಿಯೊಂದು ಪ್ರತಿ ಕೆಜಿಗೆ 26 ಸಾವಿರ ರೂಪಾಯಿಗೆ ಖರೀದಿಸಿದೆ. ಮೀನು ಒಟ್ಟು 13 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಟೆಲಿಯಾ ಭೋಲಾ ಮೀನಿನ ವೈಶಿಷ್ಟ್ಯವೆಂದರೆ ಅದು ಬಹಳಷ್ಟು ಮಾವ್ (Maw) ಅನ್ನು ಹೊಂದಿರುತ್ತದೆ, ಇದರಿಂದ ಔಷಧಿಗಳನ್ನು ತಯಾರಿಸಲಾಗುತ್ತದೆ. ವರದಿಗಳ ಪ್ರಕಾರ ಈ ಮೀನಿನ ಮಾವನ್ನು ವಿದೇಶದಲ್ಲೂ ಮಾರಾಟ ಮಾಡಲಾಗುತ್ತದೆ.
ಔಷಧಿಗಳನ್ನು ತಯಾರಿಸಲು ಈ ಮೀನಿನ ಮಾವ್ ಅನ್ನು ಬಳಸಲಾಗುತ್ತದೆ. ಆದ್ದರಿಂದ ಈ ಮೀನನ್ನು ಖರೀದಿಸಲು ವಿದೇಶಿ ನಿಗಮವು ದೊಡ್ಡ ಮೊತ್ತವನ್ನು ನೀಡಿತು. ಈ ಮೀನು ಹೆಣ್ಣು ಮೀನಾಗಿದ್ದರಿಂದ ಇದರಲ್ಲಿ ಹೆಚ್ಚು ಮಾವ್ ಇರಲಿಲ್ಲ. ಆರು ದಿನಗಳ ಹಿಂದೆ ಒಂದು ಗಂಡು ಟೆಲಿಯಾ ಭೋಲಾ ಮೀನನ್ನು ಮಾರಾಟ ಮಾಡಲಾಗಿದ್ದು, ಈ ಮೀನು 9 ಲಕ್ಷ ರೂಪಾಯಿಗೆ ಮಾರಾಟವಾಗಿತ್ತು. ಇಂದು (ಜೂನ್ 27) ಮಾರಾಟವಾದ ಈ ಮೀನನ್ನು ನೋಡಲು ಅಪಾರ ಸಂಖ್ಯೆ ಜನರು ಜಮಾಯಿಸಿದ್ದರು. ಮೀನಿನ ಒಟ್ಟು ತೂಕ 55 ಕೆ.ಜಿ ಇದ್ದು 5 ಕೆಜಿ ಮೊಟ್ಟೆಗಳನ್ನು ಹೊರತುಪಡಿಸಿದರೇ, ಮೀನಿನ ಒಟ್ಟು ತೂಕ 50 ಕೆಜಿ ಇದೆ.
ಇದನ್ನು ಓದಿ: ಅಸ್ಸಾಂನಲ್ಲಿ ಪ್ರವಾಹದ ಮಟ್ಟ ಕೊಂಚ ಇಳಿಕೆ; 127 ಜನ ಸಾವು, ಸಂಕಷ್ಟದಲ್ಲಿ 22 ಲಕ್ಷ ಜನ
ಸ್ಥಳೀಯ ಮೀನುಗಾರರ ಪ್ರಕಾರ, ಈ ಮೀನು ಟೆಲಿಯಾ ಭೋಲಾ ಎಂಬ ಹೈಬ್ರಿಡ್ ಆಗಿದೆ. ಗಂಡು ಮತ್ತು ಹೆಣ್ಣು ಹೊರತುಪಡಿಸಿ, ಎರಡೂ ಲಿಂಗಗಳು ಈ ಜಾತಿಯ ಮೀನಿನಲ್ಲಿವೆ. ಈ ಮೀನಿನ ಸ್ಥಳೀಯ ಹೆಸರು ಖಚ್ಚರ್ ಭೋಲಾ. ಈ ಮೀನಿನ ಹೊಟ್ಟೆಯಲ್ಲಿರುವ ಮಾವ್ ಬಹು ಬೇಡಿಕೆಯ ಅಂಗವಾಗಿದೆ. ಈ ದೈತ್ಯ ಟೆಲಿಯಾ ಭೋಲಾ ಮೀನುಗಳು ವರ್ಷದಲ್ಲಿ ಎರಡು ಅಥವಾ ಮೂರು ಬಾರಿ ಬರುತ್ತವೆ.
Published On - 9:28 pm, Mon, 27 June 22