ಹಾವೇರಿಯಲ್ಲಿ ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರಿಂದ ಪ್ರತಿಭಟನೆ; ಪರಿಹಾರಕ್ಕೆ ಆಗ್ರಹಿಸಿ ಸಿಎಂ ನಿವಾಸದವರೆಗೆ ಪಾದಯಾತ್ರೆ
ರಾಣೆಬೆನ್ನೂರು ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಡಾ.ಪಿ.ಶಾಂತ ಎಂಬುವವರು ಶಸ್ತ್ರಚಿಕಿತ್ಸಕರಾಗಿದ್ದರು. ಆಸ್ಪತ್ರೆಗೆ ಹೊಟ್ಟೆನೋವು ಅಂತ ಬಂದರೆ ಗರ್ಭಕೋಶ ಶಸ್ತ್ರಚಿಕಿತ್ಸೆ ಮಾಡುತ್ತಿದ್ದರಂತೆ.
ಹಾವೇರಿ: ಹೊಟ್ಟೆ ನೋವು ಅಂತ ಆಸ್ಪತ್ರೆಗೆ ಹೋದರೆ ವೈದರೊಬ್ಬರು ಗರ್ಭಕೋಶ ಶಸ್ತ್ರಚಿಕಿತ್ಸೆ (Uterus Operation) ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆಯರು (Women) ನಿನ್ನೆಯಿಂದ (ಏಪ್ರಿಲ್ 25) ಪಾದಾಯಾತ್ರೆ ನಡೆಸುತ್ತಿದ್ದಾರೆ. ರಾಣೆಬೆನ್ನೂರು ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದ ಡಾ.ಪಿ.ಶಾಂತ 1,522 ಮಹಿಳೆಯರಿಗೆ ಗರ್ಭಕೋಶ ಶಸ್ತ್ರಚಿಕಿತ್ಸೆ ಚಿಕಿತ್ಸೆ ಮಾಡಿದ್ದಾರಂತೆ. ನಂತರ ಹಲವು ರೀತಿಯ ತೊಂದರೆಗೆ ಸಿಲುಕಿದ ಮಹಿಳೆಯರು ಸರ್ಕಾರ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸುವಂತೆ ಹೋರಾಟ ಮಾಡುತ್ತಿದ್ದಾರೆ. ಬಿಸಿಲನ್ನೂ ಲೆಕ್ಕಿಸದೆ ತಲೆ ಮೇಲೆ ಬಟ್ಟೆ, ಊಟದ ಗಂಟು ಇಟ್ಕೊಂಡು ಸಿಎಂ ಮನೆಗೆ ಮಹಿಳೆಯರ ದಂಡು ಪಾದಯಾತ್ರೆ ಹೊರಟಿದೆ.
ರಾಣೆಬೆನ್ನೂರು ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಡಾ.ಪಿ.ಶಾಂತ ಎಂಬುವವರು ಶಸ್ತ್ರಚಿಕಿತ್ಸಕರಾಗಿದ್ದರು. ಆಸ್ಪತ್ರೆಗೆ ಹೊಟ್ಟೆನೋವು ಅಂತ ಬಂದರೆ ಗರ್ಭಕೋಶ ಶಸ್ತ್ರಚಿಕಿತ್ಸೆ ಮಾಡುತ್ತಿದ್ದರಂತೆ. ನಂತರ ಹಲವು ರೀತಿಯ ಆರೋಗ್ಯ ಸಮಸ್ಯೆಗೆ ಒಳಗಾದ ಮಹಿಳೆಯರು ಸಂಘಟಿತರಾಗಿ ಡಾ.ಶಾಂತ ವಿರುದ್ಧ ಆರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಒಮ್ಮೆ ಮಹಿಳೆಯರ ಅನುಕೂಲಕ್ಕೆ ಅಂತಾ ನಲ್ವತ್ತು ಕೋಟಿ ಹಣವನ್ನ ಸರಕಾರ ಬಿಡುಗಡೆ ಮಾಡಿತ್ತಂತೆ. ಆಗ ತಾಲೂಕು ಮತ್ತು ಜಿಲ್ಲೆಯ ಆರೋಗ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗರ್ಭಕೋಶ ಶಸ್ತ್ರಚಿಕಿತ್ಸೆ ಬಗ್ಗೆ ದೃಢೀಕರಣ ಪತ್ರ ಸಿಗದಿದ್ದಕ್ಕೆ ಹಣ ವಾಪಸ್ ಹೋಗಿದೆಯಂತೆ. ನಂತರ ಮಹಿಳೆಯರು ಹೋರಾಟದ ಮೂಲಕ ಗರ್ಭಕೋಶ ಶಸ್ತ್ರಚಿಕಿತ್ಸೆ ಆಗಿರುವ ಬಗ್ಗೆ ಆರೋಗ್ಯ ಇಲಾಖೆಯಿಂದ ದೃಢೀಕರಣ ಪತ್ರ ಪಡೆದುಕೊಂಡಿದ್ದಾರೆ. ಆದರೆ ಪರಿಹಾರ ಮಾತ್ರ ಸಿಕ್ಕಿಲ್ಲ. ಹೀಗಾಗಿ ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರು ರಾಜ್ಯದ ರೆ ಸಿಎಂ ಬಸವರಾಜ ಬೊಮ್ಮಾಯಿಯವರ ಶಿಗ್ಗಾಂವಿ ನಿವಾಸದವರೆಗೆ ಪಾದಯಾತ್ರೆ ಹೊರಟಿದ್ದಾರೆ.
ನಿನ್ನೆಯಿಂದ ನಡೆಯುತ್ತಿರುವ ಈ ಪಾದಯಾತ್ರೆ ನಾಳೆವರೆಗೆ ಇರುತ್ತದೆ. ಒಟ್ಟು ಎಪ್ಪತ್ತೈದು ಕಿಲೋಮೀಟರ್ ದೂರದ ಪಾದಯಾತ್ರೆ ಇದಾಗಿದ್ದು, ಪ್ರತಿದಿನ ಇಪ್ಪತ್ತೈದು ಕಿ.ಮೀ ದೂರ ನಡೆಯಲಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯ ಶಾಂತ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇತ್ತ ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರು ಹೆಚ್ಚು ಕೆಲ ಮಾಡಲು ಆಗದೆ ಪರದಾಡುತ್ತಿದ್ದಾರೆ.
ಬಿಸಿಲು ಹೆಚ್ಚಾದರೆ ಮತ್ತು ರಾತ್ರಿಯಾದರೆ ಕಣ್ಣಿನ ಸಮಸ್ಯೆ ಕಾಡುತ್ತದೆ. ಬಹುತೇಕ ಎಲ್ಲರೂ ದಿನದ ಕೂಲಿ ಕೆಲಸವನ್ನೆ ನಂಬಿದವರಾಗಿದ್ದಾರೆ. ಹೀಗಾಗಿ ತಮಗೆ ವಿಶೇಷ ಆರ್ಥಿಕ ನೆರವು ನೀಡುವಂತೆ ಆಗ್ರಹಿಸಿ ಪಾದಯಾತ್ರೆ ಹೊರಟಿದ್ದಾರೆ.
ಬಿಗಿ ಪೊಲೀಸ್ ಬಂದೋಬಸ್ತ್: ಇಂದು ಎರಡನೆ ದಿನದ ಪಾದಯಾತ್ರೆ ನಡೆಯುತ್ತಿದೆ. ಛತ್ರ ಗ್ರಾಮದಿಂದ ಎರಡನೇ ದಿನದ ಪಾದಯಾತ್ರೆ ಆರಂಭಿಸಿದ್ದಾರೆ. ಪಾದಯಾತ್ರೆ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ, ಹೆಚ್ಚುವರಿ ಎಸ್ಪಿ ವಿಜಯಕುಮಾರ ಸೇರಿದಂತೆ ವಿವಿಧ ಅಧಿಕಾರಿಗಳ ತಂಡ ಭೇಟಿ ನೀಡಿದೆ. ಅಧಿಕಾರಿಗಳು ಮಹಿಳೆಯರ ಬೇಡಿಕೆಗಳ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ. ಹಾವೇರಿ ತಾಲೂಕಿನ ತೋಟದಯಲ್ಲಾಪುರ ಗ್ರಾಮದ ಬಳಿ ಇರುವ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಾಲ್ಕರ ಬಳಿ ಮಾತುಕತೆ ನಡೆಸಿದ್ದಾರೆ. ಮುಂಜಾಗ್ರತೆಯಿಂದ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಇದನ್ನೂ ಓದಿ
Elon Musk: ಟ್ವಿಟರ್ ನನಗೆ ತುಂಬಾ ಇಷ್ಟ, ಇದಕ್ಕೆ ಎಷ್ಟು?: 2017 ರಲ್ಲಿ ಎಲಾನ್ ಮಸ್ಕ್ ಮಾಡಿದ ಟ್ವೀಟ್ ವೈರಲ್
Published On - 11:44 am, Tue, 26 April 22