ತುಮಕೂರು: ಪತ್ನಿ ಆತ್ಮಹತ್ಯೆಗೆ ಕಾರಣವಾಗಿದ್ದ ಪತಿಗೆ ತುಮಕೂರು 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಜೈಲು ಶಿಕ್ಷೆ ತೀರ್ಪು ನೀಡಿದೆ. ವರದಕ್ಷಿಣೆ ಕಿರುಕುಳ ನೀಡಿ ಪತ್ನಿ ಸಾವಿಗೆ ಕಾರಣವಾಗಿದ್ದ ಅಪರಾಧಿ ಅಲೀಂ ಪಾಷಾಗೆ 8 ವರ್ಷ ಕಠಿಣ ಜೈಲು ಶಿಕ್ಷೆ ನೀಡಿ ಕೋರ್ಟ್ ತೀರ್ಪು ನೀಡಿದೆ. ಪತ್ನಿ ಆಶಾಳನ್ನ ಪ್ರೀತಿಸಿ ಮದುವೆಯಾಗಿದ್ದ ಅಲೀಂ ಪಾಷಾ, ವರದಕ್ಷಿಣೆ ತರುವಂತೆ ಪತ್ನಿಗೆ ದಿನನಿತ್ಯ ಚಿತ್ರಹಿಂಸೆ ಕೊಡುತ್ತಿದ್ದ. ಹೀಗಾಗಿ ಆಶಾ ತವರು ಮನೆಯಿಂದ 2.30 ಲಕ್ಷ ಹಣ ತಂದು ಕೊಟ್ಟಿದ್ದಳು. ಮತ್ತೆ 3 ಲಕ್ಷ ಹಣ ತರುವಂತೆ ಅಲೀಂ ಪಾಷಾ ಪೀಡಿಸಿದ್ದ. ಪತಿ ಕಿರುಕುಳ ತಾಳಲಾರದೆ ಆಶಾ ಆತ್ಮಹತ್ಯೆ ಮಾಡಿಕೊಂಡಿದ್ದಳು. 2018 ಸೆಪ್ಟೆಂಬರ್ 21ರಂದು ಆಶಾ ಆತ್ಮಹತ್ಯೆಗೆ ಶರಣಾಗಿದ್ದಳು. ತುಮಕೂರು ನಗರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಧೀಶರಾದ H.S.ಮಲ್ಲಿಕಾರ್ಜುನ ಸ್ವಾಮಿ 8 ವರ್ಷ ಕಠಿಣ ಜೈಲು ಶಿಕ್ಷೆ ತೀರ್ಪು ನೀಡಿದ್ದಾರೆ.
ಪತ್ನಿ ಆತ್ಮಹತ್ಯೆಗೆ ಕಾರಣವಾಗಿದ್ದ ಪತಿಗೆ ಜೈಲು ಶಿಕ್ಷೆ ಆದೇಶಿದ ಘಟನೆ ನಡೆದಿದೆ. ದಂಪತಿ ತುಮಕೂರು ನಗರದ ಪಿಜಿ ಲೇಔಟ್ ನಲ್ಲಿ ವಾಸವಿದ್ದರು ಎನ್ನಲಾಗಿದೆ. ಕಳೆದ 2018 ರಲ್ಲಿ ಸೆಪ್ಟೆಂಬರ್ 21 ರಂದು ಆಶಾ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು, ಈ ವೇಳೆ ಮನೆಯವರು ಗಮನಿಸಿ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರು.ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಶಾ ಸಾವನ್ನಪ್ಪಿದ್ದರು. ಈ ಬಗ್ಗೆ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪತಿ ಆಲಿಂಪಾಷ ಹಾಗೂ ಆಶಾ ಎನ್ನುವರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು, ಮದುವೆ ಬಳಿಕ ಕೂಡ ತವರು ಮನೆಯಿಂದ ಆಲಿಂಪಾಷ ಪದೇ ಪದೇ ವರದಕ್ಷಿಣೆ ತಂದುಕೊಡು ಅಂತಾ ಕಿರುಕುಳ ನೀಡ್ತಿದ್ದನಂತೆ. 2.30 ಲಕ್ಷ ರೂ ತಂದು ಕೊಟ್ಟರೂ ಮತ್ತೆ ಮೂರು ಲಕ್ಷ ತರುವಂತೆ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ಮನನೊಂದು 2018 ರ ಸೆಪ್ಟೆಂಬರ್ 21 ರಂದು ಆತ್ಮಹತ್ಯೆ ಗೆ ಶರಣಾಗಿದ್ದರು.ಸದ್ಯ ಆರೋಪ ಸಾಭಿತಾದ ಹಿನ್ನೆಲೆ ತುಮಕೂರು ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಚ್ ಎಸ್ ಮಲ್ಲಿಕಾರ್ಜುನ ಸ್ವಾಮಿ ರಿಂದ ಶಿಕ್ಷೆ ಪ್ರಕಟ.8 ವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿ ಆದೇಶ ಮಾಡಿದ್ದಾರೆ.
ಇದನ್ನೂ ಓದಿ: ತುಮಕೂರಿನಲ್ಲಿ ಸಿಡಿಲು ಬಡಿದು 20 ಕುರಿಗಳು ಸ್ಥಳದಲ್ಲೇ ದುರ್ಮರಣ; ಬಾಗಲಕೋಟೆಯಲ್ಲಿ ಸಾವಿರಾರು ಕೋಳಿಗಳು ಸಾವು
Akshay Kumar: ಅಭಿಮಾನಿಗಳಲ್ಲಿ ಸಿನಿಮಾ ಟೈಟಲ್ ಸೂಚಿಸಿ ಎಂದ ಅಕ್ಷಯ್ ಕುಮಾರ್; ಯಾವ ಚಿತ್ರಕ್ಕೆ?