Kannada Sahitya Sammelana 2023: ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ ವಿಶೇಷ ರೈಲು ಬಿಟ್ಟ ನೈರುತ್ಯ ರೇಲ್ವೆ ಇಲಾಖೆ: ಇಲ್ಲಿದೆ ವೇಳಾಪಟ್ಟಿ

86th Kannada Sahitya Sammelana Haveri: ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಲುವಾಗಿ ನೈರುತ್ಯ ರೇಲ್ವೆ ಇಲಾಖೆ ವಿಶೇಷ ರೈಲುಗಳನ್ನು ಬಿಟ್ಟಿದೆ

Kannada Sahitya Sammelana 2023: ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ ವಿಶೇಷ ರೈಲು ಬಿಟ್ಟ ನೈರುತ್ಯ ರೇಲ್ವೆ ಇಲಾಖೆ: ಇಲ್ಲಿದೆ ವೇಳಾಪಟ್ಟಿ
ರೈಲು, 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಲಾಂಛನ
Follow us
TV9 Web
| Updated By: ವಿವೇಕ ಬಿರಾದಾರ

Updated on:Jan 04, 2023 | 10:54 PM

ಹಾವೇರಿ: ಜನವರಿ 6 ರಿಂದ ಮೂರು ದಿನಗಳ ಕಾಲ ಏಲಕ್ಕಿ ನಗರಿ, ದಾಸ ಶ್ರೇಷ್ಠ ಕನಕದಾಸರ ನಾಡು ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (Akhila Bharat Kannada Sahitya Sammelana) ನಡೆಯಲಿದೆ. ಸಾಹಿತ್ಯ ಸಮ್ಮೇಳನಕ್ಕೆ ಈಗಾಗಲೆ ಬಹತೇಕ ಸಿದ್ದತೆಗಳು ಪೂರ್ಣಗೊಂಡಿದ್ದು, ಇನ್ನು ಎರಡು ದಿನಗಳಲ್ಲಿ ಸಾಹಿತ್ಯ ಸಮ್ಮೇಳನ ಪ್ರಾರಂಭವಾಗಲಿದೆ. ಸಾಹಿತ್ಯ ಸಮ್ಮೇಳನಕ್ಕೆಂದು ನೈರುತ್ಯ ರೇಲ್ವೆ ಇಲಾಖೆ ವಿಶೇಷ ರೈಲುಗಳನ್ನು ಬಿಟ್ಟಿದೆ. ಯಾವ ರೈಲು ಯಾವ ಸಮಯಕ್ಕಿದೆ, ಎಲ್ಲಿಂದ ಹೊರಡುತ್ತದೆ ಇಲ್ಲಿದೆ ವೇಳಾಪಟ್ಟಿ

ರೈಲು ವೇಳಾಪಟ್ಟಿ

  1. ರೈಲು ಸಂಖ್ಯೆ: 20653 ಕೆ.ಎಸ್ ಆರ್ ಬೆಂಗಳೂರು-ಬೆಳಗಾವಿ ಮಾರ್ಗವಾಗಿ ಜನವರಿ 5 ರಿಂದ 9 ರವರೆಗೆ ಸಂಚರಿಸಲಿದೆ. ಈ ರೈಲು ಬೆಳಿಗ್ಗೆ 2:28 ನಿಮಿಷಕ್ಕೆ ಹಾವೇರಿ ರೈಲು ನಿಲ್ದಾಣ ತಲಪುತ್ತದೆ.
  2. ರೈಲು ಸಂಖ್ಯೆ: 20654 ಬೆಳಗಾವಿ-ಕೆ.ಎಸ್.ಆರ್ ಬೆಂಗಳೂರು ಮಾರ್ಗವಾಗಿ ಜನವರಿ 5 ರಿಂದ 9 ರವರೆಗೆ ಸಂಚರಿಸಲಿದೆ. ಈ ರೈಲು ರಾತ್ರಿ 11:50 ನಿಮಿಷಕ್ಕೆ ಹಾವೇರಿ ರೈಲು ನಿಲ್ದಾಣ ತಲಪುತ್ತದೆ.
  3. ರೈಲು ಸಂಖ್ಯೆ: 22685 ಜನವರಿ 7 ಕ್ಕೆ ಮಾತ್ರ ಯಶವಂತಪುರ (ಬೆಂಗಳೂರು)-ಚಂದಿಗಡ ಮಾರ್ಗದ ರೈಲು ಸಾಯಂಕಾಲ7:18 ನಿಮಿಷಕ್ಕೆ ಹಾವೇರಿ ರೈಲು ನಿಲ್ದಾಣ ತಲಪುತ್ತದೆ.
  4. ರೈಲು ಸಂಖ್ಯೆ: 22686 ಜನವರಿ 7 ರಂದು ಮಾತ್ರ ಚಂದಿಗಡ-ಯಶವಂತಪುರ (ಬೆಂಗಳೂರು) ಮಾರ್ಗದ ರೈಲು ರಾತ್ರಿ 11:18 ನಿಮಿಷಕ್ಕೆ ಹಾವೇರಿ ರೈಲು ನಿಲ್ದಾಣ ತಲಪುತ್ತದೆ.
  5. ರೈಲು ಸಂಖ್ಯೆ: 22498 ತಿರುಚನಪಲ್ಲಿ-ಗಂಗಾನಗರ ರೈಲು ಮಾರ್ಗವಾಗಿ ಜನವರಿ 6 ರಂದು ಮಾತ್ರ ಸಂಚರಿಸಲಿದೆ. ಈ ರೈಲು ಸಾಯಂಕಾಲ 5:58 ನಿಮಿಷಕ್ಕೆ ಹಾವೇರಿ ರೈಲು ನಿಲ್ದಾಣ ತಲಪುತ್ತದೆ.
  6. ರೈಲು ಸಂಖ್ಯೆ: 16587 ಯಶವಂತಪುರ (ಬೆಂಗಳೂರು)-ಬಿಕನೇರ ಮಾರ್ಗವಾಗಿ ರೈಲು ಜನವರಿ 6 ರಿಂದ 8 ರಂದು ಮಾತ್ರ ಸಂಚರಿಸಲಿದೆ. ಈ ರೈಲು ಸಾಯಂಕಾಲ 4:50 ನಿಮಿಷಕ್ಕೆ ಹಾವೇರಿ ರೈಲು ನಿಲ್ದಾಣ ತಲಪುತ್ತದೆ.
  7. ರೈಲು ಸಂಖ್ಯೆ: 14806 ಬರ್ಮಾರ-ಯಶವಂತಪುರ (ಬೆಂಗಳೂರು) ಮಾರ್ಗವಾಗಿ ರೈಲು ಜನವರಿ 5 ರಂದು ಮಾತ್ರ ಸಂಚರಿಸಲಿದೆ. ಈ ರೈಲು ಬೆಳಿಗ್ಗೆ 9:30 ನಿಮಿಷಕ್ಕೆ ಹಾವೇರಿ ರೈಲು ನಿಲ್ದಾಣ ತಲಪುತ್ತದೆ.

ಸಾಹಿತ್ಯ ಸಮ್ಮೇಳನಕ್ಕೆಂದು ವಿಶೇಷವಾಗಿ ಬಿಡಲಾದ ರೈಲು

  1. ರೈಲು ಸಂಖ್ಯೆ: 06501/06502 ಯಶವಂತಪುರ (ಬೆಂಗಳೂರು) – ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣ (SSS)ಹುಬ್ಬಳ್ಳಿ ಮಾರ್ಗದ ವಿಶೇಷ ಎಕ್ಸಪ್ರೆಸ್​​ ರೈಲು, ಜನವರಿ 5 ರಂದು ರಾತ್ರಿ 11:50ಕ್ಕೆ ಯಶವಂತಪುರದಿಂದ ಹೊರಟು ಮರುದಿನ 6 ನೇ ತಾರೀಕಿನಂದು ಬೆಳಿಗ್ಗೆ 7:50 ಕ್ಕೆ ಎಸ್​ಎಸ್​ಎಸ್​​ ತಲುಪಲಿದೆ.
  2. ಇದೇ ರೈಲು 06502 ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣ- ಯಶವಂತಪುರ (ಬೆಂಗಳೂರು) ಮಾರ್ಗದ ವಿಶೇಷ ಎಕ್ಸಪ್ರೆಸ್​​ ರೈಲು ಜನವರಿ 6 ರಂದು ಬೆಳಿಗ್ಗೆ 11:30 ಹೊರಟು ಸಾಯಂಕಾಲ 7:30 ಕ್ಕೆ ಯಶವಂತಪುರ ರೈಲು ನಿಲ್ದಾಣ ತಲುಪಲಿದೆ.
  3. ರೈಲು ಸಂಖ್ಯೆ: 06505 / 06506 ಯಶವಂತಪುರ (ಬೆಂಗಳೂರು) – ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣ (SSS)ಹುಬ್ಬಳ್ಳಿ ಮಾರ್ಗದ ವಿಶೇಷ ಎಕ್ಸಪ್ರೆಸ್​​ ರೈಲು 6 ರಂದು ರಾತ್ರಿ 10:30ಕ್ಕೆ ಯಶವಂತಪುರದಿಂದ ಹೊರಟು ಮರುದಿನ 7 ನೇ ತಾರೀಕಿನಂದು ಬೆಳಿಗ್ಗೆ 5:30 ಕ್ಕೆ ಎಸ್​ಎಸ್​ಎಸ್​​ ತಲುಪಲಿದೆ.
  4. ಇದೇ ರೈಲು 06506 06502 ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣ- ಯಶವಂತಪುರ (ಬೆಂಗಳೂರು) ಮಾರ್ಗದ ವಿಶೇಷ ಎಕ್ಸಪ್ರೆಸ್​​ ರೈಲು ಜನವರಿ 7 ರಂದು ಬೆಳಿಗ್ಗೆ 8:30 ಹೊರಟು ಸಾಯಂಕಾಲ 5:00 ಕ್ಕೆ ಯಶವಂತಪುರ ರೈಲು ನಿಲ್ದಾಣ ತಲುಪಲಿದೆ.
  5. ರೈಲು ಸಂಖ್ಯೆ: 06507 ಯಶವಂತಪುರ (ಬೆಂಗಳೂರು) – ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣ (SSS)ಹುಬ್ಬಳ್ಳಿ ಮಾರ್ಗದ ವಿಶೇಷ ಎಕ್ಸಪ್ರೆಸ್​​ ರೈಲು ಜನವರಿ 7 ರಂದು ರಾತ್ರಿ 09:50ಕ್ಕೆ ಯಶವಂತಪುರದಿಂದ ಹೊರಟು ಮರುದಿನ 8 ನೇ ತಾರೀಕಿನಂದು ಬೆಳಿಗ್ಗೆ 5:20 ಕ್ಕೆ ಎಸ್​ಎಸ್​ಎಸ್​​ ತಲುಪಲಿದೆ.
  6. ರೈಲು ಸಂಖ್ಯೆ: 06508 ಶ್ರೀ ಸಿದ್ಧಾರೂಢ ರೈಲು ನಿಲ್ದಾಣ (SSS)ಹುಬ್ಬಳ್ಳಿ-ಮಹದೇವಪ್ಪ ಮೈಲಾರ್ ರೈಲು ನಿಲ್ದಾಣ ಹಾವೇರಿ ಮಾರ್ಗದ ವಿಶೇಷ ಎಕ್ಸಪ್ರೆಸ್​​ ರೈಲು ಜನವರಿ 8 ರಂದು ಸಾಯಂಕಾಲ 06:00ಕ್ಕೆ ಎಸ್​ಎಸ್​ಎಸ್​ನಿಂದ ಹೊರಟು ಅದೇ ದಿನ ಸಾಯಂಕಾಲ 7:40 ಕ್ಕೆ ಎಸ್​ಎಸ್​ಎಮ್​​​ ತಲುಪಲಿದೆ.
  7. ರೈಲು ಸಂಖ್ಯೆ: 06517 ಮಹದೇವಪ್ಪ ಮೈಲಾರ್ ರೈಲು ನಿಲ್ದಾಣ ಹಾವೇರಿ-ಯಶವಂತಪುರ (ಬೆಂಗಳೂರು) ಮಾರ್ಗದ ವಿಶೇಷ ಎಕ್ಸಪ್ರೆಸ್​​ ರೈಲು ಜನವರಿ 8 ರಂದು ರಾತ್ರಿ 11:00ಕ್ಕೆ ಎಸ್​ಎಸ್​ಎಮ್​ ನಿಂದ ಹೊರಟು ಮರು ದಿನ ಬೆಳಿಗ್ಗೆ 5:20 ಕ್ಕೆ ಯಶವಂತಪುರ (ಬೆಂಗಳೂರು) ​​ತಲುಪಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:50 pm, Wed, 4 January 23