ಶಿಕ್ಷಕರ ಅರ್ಹತಾ ಪರೀಕ್ಷೆ: ಕಠಿಣ ನಿಯಮಗಳಿಗೆ ಹಾವೇರಿಯಲ್ಲಿ ಪರೀಕ್ಷಾರ್ಥಿಗಳು ಕಂಗಾಲು
ರಾಜ್ಯಾದ್ಯಂತ ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಕಠಿಣ ನಿಯಮಾವಳಿಗಳನ್ನು ವಿಧಿಸಿದ್ದರಿಂದ ಪರೀಕ್ಷಾರ್ಥಿಗಳು ತೀವ್ರ ತೊಂದರೆ ಅನುಭವಿಸಿದ್ದಾರೆ. ಹಾವೇರಿಯ ಪಿಯು ಮಹಿಳಾ ಕಾಲೇಜಿನಲ್ಲಿ ಪರೀಕ್ಷಾ ಸಿಬ್ಬಂದಿ ಗಾಜಿನ ಬಳೆ, ಕಿವಿ ಓಲೆ, ಹಾಗೂ ಮಹಿಳೆಯರ ಚೈನ್ ತೆಗೆಸಿ ನಂತರ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಿದರು. ಪರೀಕ್ಷಾ ಲೋಪಗಳನ್ನು ತಪ್ಪಿಸಲು ಈ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಹಾವೇರಿ, ಡಿಸೆಂಬರ್ 07: ರಾಜ್ಯಾದ್ಯಂತ ಶಿಕ್ಷಕರ ಅರ್ಹತಾ ಪರೀಕ್ಷೆ ಕಠಿಣ ನಿಯಮಾವಳಿಗಳೊಂದಿಗೆ ನಡೆದ ಪರಿಣಾಮ ಪರೀಕ್ಷಾರ್ಥಿಗಳು ತೀವ್ರ ಗೊಂದಲ ಮತ್ತು ತೊಂದರೆ ಅನುಭವಿಸಿದರು. ಹಾವೇರಿಯ ಪಿಯು ಮಹಿಳಾ ಕಾಲೇಜಿನಲ್ಲಿ ಪರೀಕ್ಷಾರ್ಥಿಗಳು ಧರಿಸಿದ್ದ ಗಾಜಿನ ಬಳೆಗಳು, ಕಿವಿ ಓಲೆಗಳು ಮತ್ತು ಚೈನ್‌ಗಳನ್ನು ಪರೀಕ್ಷಾ ಕೊಠಡಿಯೊಳಗೆ ಪ್ರವೇಶಿಸುವ ಮುನ್ನ ಸಿಬ್ಬಂದಿ ತೆಗೆಸಿದ ಪ್ರಸಂಗ ನಡೆದಿದೆ. ಪರೀಕ್ಷಾರ್ಥಿಗಳು ತಾವು ಧರಿಸಿದ್ದ ಆಭರಣಗಳನ್ನು ತೆಗೆದ ನಂತರವೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಈ ಕಟ್ಟುನಿಟ್ಟಿನ ನಿಯಮಗಳ ಬಗ್ಗೆ ಅನೇಕ ಪರೀಕ್ಷಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರೂ ಪರೀಕ್ಷಾ ಕೇಂದ್ರದ ಸಿಬ್ಬಂದಿಗಳು ಮಾತ್ರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿರೋದು ಕಂಡುಬಂತು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Dec 07, 2025 12:17 PM
