AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

SSLC, 2nd PUC Exam 2026 TimeTable: ಎಸ್​ಎಸ್​ಎಲ್​​ಸಿ, ಪಿಯು ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

ಕರ್ನಾಟಕ SSLC, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ಅಂತಿಮ ವೇಳಾಪಟ್ಟಿ: ಕರ್ನಾಟಕ ದ್ವಿತೀಯ ಪಿಯು ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ 1 ಮತ್ತು 2ರ ಅಂತಿಮ ವೇಳಾಪಟ್ಟಿ ವೇಳಾಪಟ್ಟಿ ಪ್ರಕಟವಾಗಿದೆ. ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಇಂದು (ನವೆಂಬರ್ 05) ಪ್ರಕಟಿಸಿದೆ. ಹಾಗಾದ್ರೆ, ದ್ವಿತೀಯ ಪಿಯುಸಿ ಹಾಗೂ ಎಸ್​ಎಸ್​ಎಸ್​(10ನೇ ತರಗತಿ) ಪರೀಕ್ಷೆಗಳು ಯಾವಾಗಿನಿಂದ ಆರಂಭವಾಗಿ ಯಾವಾಗ ಮುಗಿಯಲಿವೆ ಎನ್ನುವ ವೇಳಾಪಪಟ್ಟಿ ಕೆಳಗಿನಂತಿದೆ.

SSLC, 2nd PUC Exam 2026 TimeTable: ಎಸ್​ಎಸ್​ಎಲ್​​ಸಿ, ಪಿಯು ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ
Sslc Puc
TV9 Web
| Edited By: |

Updated on:Nov 05, 2025 | 4:54 PM

Share

ಬೆಂಗಳೂರು, (ನವೆಂಬರ್ 05): ದ್ವಿತೀಯ ಪಿಯು ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ. SSLC, ದ್ವಿತೀಯ PU ಪರೀಕ್ಷೆ-1 ಮತ್ತು 2ರ ಅಂತಿಮ ವೇಳಾಪಟ್ಟಿಯನ್ನು ಅಂತಿಮಗೊಳಿಸಿ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಇಂದು (ನವೆಂಬರ್ 05) ಪ್ರಕಟಿಸಿದ್ದು,   ಎಸ್​​ಎಸ್​ಎಲ್​ಸಿ ಪರೀಕ್ಷೆ-1 ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ  ನಡೆಯುಲಿದ್ದು,  ಇನ್ನು  ಪಿಯುಸಿ ಪರೀಕ್ಷೆ-1ರ ಪರೀಕ್ಷೆಗಳು 2026ರ ಫೆಬ್ರವರಿ 28ರಿಂದ  ಮಾರ್ಚ್ 17ರ ವರೆಗೆ ನಡೆಯಲಿ. ಹಾಗೆ ಪಿಯುಸಿ ಪರೀಕ್ಷೆ-2  ಏಪ್ರಿಲ್ 25ರಿಂದ ಮೇ9ರವರೆಗೂ ನಡೆಯಲಿವೆ.

2026ನೇ ಸಾಲಿನ ಎಸ್​ಎಸ್​ಎಲ್​​ಸಿ ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆ-1 ಮತ್ತು ಪರೀಕ್ಷೆ-2 ರ ಅಂತಿಮ ವೇಳಾಪಟ್ಟಿಯನ್ನು ಮಂಡಲಿಯ ಜಾಲತಾಣದಲ್ಲಿ ಇಂದು (ನವೆಂಬರ್ 05) ಪ್ರಕಟಿಸಲಾಗಿದೆ. ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರುಗಳು ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರು ತಮ್ಮ ಶಾಲಾ, ಕಾಲೇಜುಗಳ ಪ್ರಕಟಣಾ ಫಲಕದಲ್ಲಿ (ನೋಟಿಸ್ ಬೋರ್ಡ್​​) ವೇಳಾಪಟ್ಟಿಯನ್ನು ಪ್ರಕಟಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ತಿಳಿಸಿದೆ ಪರೀಕ್ಷಾ ಮಂಡಳಿ ತಿಳಿಸಿದೆ.

ಇದನ್ನೂ ಓದಿ: PU ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್: ಮಕ್ಕಳ ದಿನಾಚರಣೆಯಂದೇ ಬಂಪರ್ ಗಿಫ್ಟ್

  • 2026ರ ಮಾರ್ಚ್​ 18ರಿಂದ ಏ.2ರವರೆಗೆ SSLC ಪರೀಕ್ಷೆ-1.
  • ಮೇ 18ರಿಂದ ಮೇ 25ವರೆಗೆ ನಡೆಯಲಿರುವ SSLC ಪರೀಕ್ಷೆ-2
  • ಫೆಬ್ರವರಿ 28ರಿಂದ ಮಾರ್ಚ್ ​17ವರೆಗೆ ದ್ವೀತಿಯ PUC ಪರೀಕ್ಷೆ-1
  • ಏಪ್ರಿಲ್ 25ರಿಂದ ಮೇ 9ರವರೆಗೆ ದ್ವೀತಿಯ PUC ಪರೀಕ್ಷೆ-2

ಎಸ್​ಎಸ್​ಎಲ್​ಸಿ  ಪರೀಕ್ಷೆ ವೇಳಾಪಟ್ಟಿ

  • ಮಾರ್ಚ್ 18 (ಪ್ರಥಮ ಭಾಷೆ)- ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಸಂಸ್ಕೃತ
  • ಮಾರ್ಚ್ 23– ವಿಜ್ಞಾನ, ರಾಜ್ಯಶಾಸ್ತ್ರ,  ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ.
  • ಮಾರ್ಚ್ 25 (ದ್ವಿತೀಯ ಭಾಷೆ)– ಇಂಗ್ಲೀಷ್,  ಕನ್ನಡ
  • ಮಾರ್ಚ್ 28– ಗಣಿತ, ಸಮಾಜಶಾಸ್ತ್ರ
  • ಮಾರ್ಚ್ 30)ತೃತೀಯ ಭಾಷೆ)–  ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮರಾಠಿ.
  • ಏಪ್ರಿಲ್ 01– ಅರ್ಥಶಾಸ್ತ್ರ, ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರ್,  ಎಲಿಮೆಂಟ್ಸ್ ಆಫ್ ಮೆಕ್ಯಾನಕಲ್ ಇಂಜಿನಿಯರ್,
  • ಏಪ್ರಿಲ್ 2- ಸಮಾಜ ವಿಜ್ಞಾನ.

ಪಿಯುಸಿ ಪರೀಕ್ಷೆ 1 ರ ವೇಳಾಪಟ್ಟಿ

  • 28-2-2026- ಕನ್ನಡ, ಅರಬಿಕ್
  • 2-3-26-ಭೂಗೋಳಶಾಸ್ತ್ರ, ಮನಶಾಸ್ತ್ರ, ಸಂಖ್ಯಾಶಾಸ್ತ್ರ.
  • 3-3-26- ಇಂಗ್ಲೀಷ್.
  • 4-3-26- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್.
  • 5 -3-26- ಇತಿಹಾಸ.
  • 6-3-26-ಭೌತಶಾಸ್ತ್ರ
  • 7-3-26-ಐಚ್ಛಿಕ ಕನ್ನಡ,  ವ್ಯವಹಾರ ಅಧ್ಯಯನ, ಭೂಗರ್ಭಶಾಸ್ತ್ರ
  • 9-3-26- ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲಗಣಿತ.
  • 10-3-26- ಅರ್ಥಶಾಸ್ತ್ರ.
  • 11-3-26- ತರ್ಕಶಾಸತ್ರ, ವಿದ್ಯುನ್ಮಾನ ಶಾಸ್ತ್ರ, ಗೃಹವಿಜ್ಞಾನ.
  • 12-3-26-ಹಿಂದಿ.
  • 13-3-26-ರಾಜ್ಯಶಾಸ್ತ್ರ.
  • 14-3-26- ಲೆಕ್ಕಶಾಸ್ತ್ರ, ಗಣಿತ,
  • 16-3-26- ಸಮಾಜಶಾಸ್ತ್ರ, ಜೀವಶಾಸ್ತ್ರ, ಗಣಕವಿಜ್ಞಾನ.
  • 17-3-26- ಹಿಂದೂಸ್ಥಾನಿ ಸಂಗೀತ, ಆಟೋಮೊಬೈಲ್, ಆರೋಗ್ಯ ರಕ್ಷಣೆ, ಬ್ಯೂಟಿ ಅಂಡ್ ವೆಲ್​ನೆಸ್​​.

ಪಿಯುಸಿ ಪರೀಕ್ಷೆ 2 ರ ವೇಳಾಪಟ್ಟಿ

  • ಏಪ್ರಿಲ್ 25-2026: ಕನ್ನಡ, ಅರಬಿಕ್
  • ಏಪ್ರಿಲ್ 27-2026: ಐಚ್ಚಿಕ ಕನ್ನಡ, ತರ್ಕಶಾಸ್ತ್ರ, ಲೆಕ್ಕಶಾಸ್ತ್ರ, ಜೀವಶಾಸ್ತ್ರ
  • ಏಪ್ರಿಲ್ 28-2026: ರಾಜ್ಯಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ
  • ಏಪ್ರಿಲ್ 29: ಗಣಿತ, ಗೃಹ ಗಣಿತ, ಮೂಲ ವಿಜ್ಞಾನ
  • ಏಪ್ರಿಲ್ 30: ಅರ್ಥಶಾಸ್ತ್ರ
  • ಮೇ 2: ಇತಿಹಾಸ, ರಸಾಯನಶಾಸ್ತ್ರ
  • ಮೇ 4: ಇಂಗ್ಲಿಷ್
  • ಮೇ 5: ಹಿಂದಿ
  • ಮೇ 6: ವ್ಯವಹಾರ ಅಧ್ಯಯನ, ಭೌತಶಾಸ್ತ್ರ,  ಶಿಕ್ಷಣ ಶಾಸ್ತ್ರ.
  • ಮೇ 7– ಸಮಾಜ ಶಾಸ್ತ್ರ, ಸಂಖ್ಯಾಶಾಸ್ತ್ರ
  • ಮೇ 8– ಮನಶಾಸ್ತ್ರ, ಭೂಗೋಳ ಶಾಸ್ತ್ರ, ಭೂಗರ್ಭ ಶಾಸ್ತ್ರ
  • ಮೇ 9–  ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು. ಸಂಸ್ಕೃತ, ಫ್ರೆಂಚ್.

Published On - 3:52 pm, Wed, 5 November 25

Follow Us
ಬಿಡದಿ ಟೌನ್‌ಶಿಪ್ ಯೋಜನೆ ಪರ ರೈತರಿಂದ ಭೂ ಪರಿಹಾರಕ್ಕೆ ಅರ್ಜಿ ಸಲ್ಲಿಕೆ
ಬಿಡದಿ ಟೌನ್‌ಶಿಪ್ ಯೋಜನೆ ಪರ ರೈತರಿಂದ ಭೂ ಪರಿಹಾರಕ್ಕೆ ಅರ್ಜಿ ಸಲ್ಲಿಕೆ
ಉಳ್ಳಾಲ ಕಡಲತೀರಕ್ಕೆ ಅಪ್ಪಳಿಸಿದ ಲಕ್ಷಾಂತರ ಬೂತಾಯಿ ಮೀನಿನ ರಾಶಿ
ಉಳ್ಳಾಲ ಕಡಲತೀರಕ್ಕೆ ಅಪ್ಪಳಿಸಿದ ಲಕ್ಷಾಂತರ ಬೂತಾಯಿ ಮೀನಿನ ರಾಶಿ
ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಕರ್ತವ್ಯ
ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಕರ್ತವ್ಯ
ದೇವೇಗೌಡರ ಪತ್ನಿ ಚೆನ್ನಮ್ಮ ಸ್ಥಿತಿ ಗಂಭೀರ: ಆಸ್ಪತ್ರೆಗೆ ಧಾವಿಸಿದ HDK
ದೇವೇಗೌಡರ ಪತ್ನಿ ಚೆನ್ನಮ್ಮ ಸ್ಥಿತಿ ಗಂಭೀರ: ಆಸ್ಪತ್ರೆಗೆ ಧಾವಿಸಿದ HDK
SIR ಮುಗಿದ ತಕ್ಷಣ ಜಿಬಿಎ ಎಲೆಕ್ಷನ್ ಎಂದ ಕೃಷ್ಣಬೈರೇಗೌಡ
SIR ಮುಗಿದ ತಕ್ಷಣ ಜಿಬಿಎ ಎಲೆಕ್ಷನ್ ಎಂದ ಕೃಷ್ಣಬೈರೇಗೌಡ
ಡಿಕೆಶಿ ಸಚಿವ ಸಂಪುಟ ವಿಸ್ತರಣೆ: ಹೊಸ ಮುಖಗಳಿಗೆ ಹೈಕಮಾಂಡ್​​ ಮಣೆ?
ಡಿಕೆಶಿ ಸಚಿವ ಸಂಪುಟ ವಿಸ್ತರಣೆ: ಹೊಸ ಮುಖಗಳಿಗೆ ಹೈಕಮಾಂಡ್​​ ಮಣೆ?
ಮುಗಿಲು ಮುಟ್ಟಿದ ಲಾವಣ್ಯ ತಾಯಿಯ ಆಕ್ರಂದನ
ಮುಗಿಲು ಮುಟ್ಟಿದ ಲಾವಣ್ಯ ತಾಯಿಯ ಆಕ್ರಂದನ
ಚಿತ್ರೀಕರಣದಲ್ಲಿ ಆದ ಕಷ್ಟಗಳನ್ನು ವಿವರಿಸಿದ ನಟ ತಬಲಾ ನಾಣಿ: ವಿಡಿಯೋ
ಚಿತ್ರೀಕರಣದಲ್ಲಿ ಆದ ಕಷ್ಟಗಳನ್ನು ವಿವರಿಸಿದ ನಟ ತಬಲಾ ನಾಣಿ: ವಿಡಿಯೋ
ಅರಬ್ಬಿ ಸಮುದ್ರದಲ್ಲಿ ಮಗುಚಿದ ನಾಡದೋಣಿ: ನಾಲ್ವರು ಮೀನುಗಾರರು ಪಾರು
ಅರಬ್ಬಿ ಸಮುದ್ರದಲ್ಲಿ ಮಗುಚಿದ ನಾಡದೋಣಿ: ನಾಲ್ವರು ಮೀನುಗಾರರು ಪಾರು
ಸದ್ಯಕ್ಕಿಲ್ಲ ಜಿಬಿಎ ಚುನಾವಣೆ: ಡಿ. 31ರ ಡೆಡ್​ಲೈನ್ ನಿಗದಿಪಡಿಸಿದ ಸುಪ್ರೀಂ
ಸದ್ಯಕ್ಕಿಲ್ಲ ಜಿಬಿಎ ಚುನಾವಣೆ: ಡಿ. 31ರ ಡೆಡ್​ಲೈನ್ ನಿಗದಿಪಡಿಸಿದ ಸುಪ್ರೀಂ