ಜಿಲ್ಲೆಯಾಗಿ 25 ವರ್ಷಗಳಾದರೂ ಹಾವೇರಿಯಲ್ಲಿಲ್ಲ ಒಂದು ಕೈಗಾರಿಕಾ ಕಾರಿಡಾರ್

| Updated By: ವಿವೇಕ ಬಿರಾದಾರ

Updated on: Dec 11, 2023 | 10:45 PM

ಹಾವೇರಿ ಜಿಲ್ಲೆಯಾಗಿ 25 ವರ್ಷಗಳಾದರೂ, ಜಿಲ್ಲೆಗೆ ಒಂದು ಕೈಗಾರಿಕಾ ಕಾರಿಡಾರ್​​ ಇಲ್ಲ. ಹೌದು ಇಡೀ ಜಿಲ್ಲೆಗೆ ಇರುವುದು ಇಜಾರಿಲಕಮಾಫುರದ ಬಳಿಯ ಸಣ್ಣದೊಂದು ಕೈಗಾರಿಕಾ ಪ್ರದೇಶ. ಹೀಗಾಗಿ ಕೈಗಾರಿಕಾ ಕಾರಿಡಾರ್​​​ ನಿರ್ಮಾಣಕ್ಕೆ ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಕಾರಿಡಾರ್​ ನಿರ್ಮಾಣಕ್ಕೆ ನಿರ್ಧರಿಸಿತ್ತು. ಮುಂದೇನಾಯ್ತು ಈ ಸ್ಟೋರಿ ಓದಿ...

ಜಿಲ್ಲೆಯಾಗಿ 25 ವರ್ಷಗಳಾದರೂ ಹಾವೇರಿಯಲ್ಲಿಲ್ಲ ಒಂದು ಕೈಗಾರಿಕಾ ಕಾರಿಡಾರ್
ಹಾವೇರಿ
Follow us on

ಹಾವೇರಿ, ಡಿಸೆಂಬರ್​ 11: ಹಾವೇರಿ (Haveri) ಜಿಲ್ಲೆಯಾಗಿ 25 ವರ್ಷಗಳಾದರೂ, ಜಿಲ್ಲೆಗೆ ಒಂದು ಕೈಗಾರಿಕಾ ಕಾರಿಡಾರ್​​ ಇಲ್ಲ. ಹೌದು ಇಡೀ ಜಿಲ್ಲೆಗೆ ಇರುವುದು ಇಜಾರಿಲಕಮಾಫುರದ ಬಳಿಯ ಸಣ್ಣದೊಂದು ಕೈಗಾರಿಕಾ ಪ್ರದೇಶ (Industrial area). ಹೀಗಾಗಿ ಕೈಗಾರಿಕಾ ಕಾರಿಡಾರ್​​​ ನಿರ್ಮಾಣಕ್ಕೆ ಹಿಂದಿನ ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದ ಸರ್ಕಾರ ಕಾರಿಡಾರ್​ ನಿರ್ಮಾಣಕ್ಕೆ ನಿರ್ಧರಿಸಿತ್ತು. ಹೀಗಾಗಿ ಅಂದಿನ ಸರ್ಕಾರ ರೈತರ ಜಮೀನನ್ನು ವಶಪಡಿಸಿಕೊಂಡಿತ್ತು. ಆದರೆ ಬ್ಯಾಡಗಿ ತಾಲೂಕಿನ ರೈತರು ಭೂಮಿ ನೀಡಲು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಸರಕಾರ ಕಾರಿಡಾರ್ ನಿರ್ಧಾರದಿಂದ ಹಿಂದೆ ಸರಿದಿತ್ತು.

ಬಸವರಾಜ ಬೊಮ್ಮಯಿಯವರ ಸರಕಾರ ಹಾವೇರಿ ತಾಲುಕಿನ ಗಣಜೂರ ಬಳಿ 402 ಎಕರೆ ಭೂಮಿ ಸ್ವಾದಿನಪಡಿಸಿಕೊಂಡಿತ್ತು. ಇದರಲ್ಲಿ 372 ಎಕರೆ ಜಮೀನು ರೈತರದಾಗಿದ್ದು, 30 ಎಕರೆ ಜಮೀನು ಸರ್ಕಾರಕ್ಕೆ ಸೇರಿದ್ದಾಗಿತ್ತು. ರೈತರ ಜಮೀನಿಗೆ ಸರಕಾರ ಪ್ರತಿ ಎಕರೆಗೆ 29.5 ಲಕ್ಷ ರೂ. ನಿಗದಿಪಡಿಸಿ 290 ಕೃಷಿಕರ ಖಾತೆಗೆ ಹಣ ಜಮವಾಣೆ ಮಾಡಿದೆ.

ಇದನ್ನೂ ಓದಿ: ಹಾವೇರಿ ಜಿಲ್ಲಾಸ್ಪತ್ರೆಗೆ ಬರುವ ನೂರಾರು ಜನರಿಗೆ ಪ್ರತಿ ದಿನ ಅನ್ನಸಂತರ್ಪಣೆ; ತಂದೆಯ ಸ್ಮರಣಾರ್ಥ ಬಡವರ ಹಸಿವು ನೀಗಿಸುತ್ತಿರುವ ಮಗ

ತೋಟಗಾರಿಕೆ ಬೇಳೆ ಬೇಳೆದ ರೈತರ ವಿರೋಧ

ತೋಟಗಾರಿಕೆ ಬೇಳೆಯಾದ ಚಿಕ್ಕು, ಫೆರಲ, ತೆಂಗು ಮತ್ತು ಅಡಕೆ ಬೇಳೆಗಳಿಗೆ ಹೆಚ್ಚುವರಿ ಪರಿಹಾರ ನೀಡಬೇಕು ಎಂದು ಗಣಜೂರ, ಕೋಳುರ ಗ್ರಾಮದ 12 ಜನ ರೈತರು ಒತ್ತಾಯಿಸಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಬೇಡಿಕೆ ಈಡೆರಿಕೆಗಾಗಿ ಅಗತ್ಯ ಕ್ರಮ ಕೈಗೊಂಡು ಸಾವಿರಾರು ಉದ್ಯೋಗ ಸೃಷ್ಟಿಗೆ ಮುಂದಾಗಬೇಕು ಎಂದು ಹಾವೇರಿ ಜಿಲ್ಲೆಯ ಉದ್ಯಮಿಗಳು ಒತ್ತಾಯಿಸಿದ್ದಾರೆ.

2023 ರ ಜೂನ್ 24 ರಂದು ಗಣಜೂರ ಕೈಗಾರಿಕಾ ಕಾರಿಡಾರ್ ಭೂಮಿ ಪೂಜೆಗೆ ದಿನಾಂಕ ನಿಗದಿಯಾಗಿತ್ತು. ಆದರೆ ಕೇಲ ರೈತರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೊನೆಯ ಕ್ಷಣದಲ್ಲಿ ಕಾರ್ಯಕ್ರಮ ರದ್ದಾಗಿದೆ.

ರವಿ ಹೂಗಾರ,  ಟಿವಿ9 ಹಾವೇರಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:27 pm, Mon, 11 December 23