AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾವೇರಿ ನಗರದಲ್ಲಿ ಪಾದಚಾರಿ ರಸ್ತೆಗಳಲ್ಲಿ ತಳ್ಳುಗಾಡಿ ಕ್ಯಾಂಟೀನ್​​ಗಳ ಹಾವಳಿ, ಪಾದಚಾರಿಗಳ ಸಂಚಾರಕ್ಕೆ ಅಡ್ಡಗಲ್ಲುಗಳಾಗಿವೆ!

City Municipal Council, Haveri: ಹಾವೇರಿ ಸಿಎಂಸಿ ಆಯುಕ್ತ ಪರಶುರಾಮ್ ಚಲವಾದಿ ಅವರು ರಸ್ತೆ ಬದಿ ಕ್ಯಾಂಟೀನ್‌ಗಳಿಗೆ ಸಂಬಂಧಿಸಿದಂತೆ ದೂರುಗಳು ಬಂದಿವೆ ಎಂದು ತಿಳಿಸಿದ್ದಾರೆ. ಆಡಳಿತ ಸಂಸ್ಥೆ ಅಧಿಕಾರಕ್ಕೆ ಬಂದ ನಂತರ ನಾವು ಈ ಮೊಬೈಲ್ ಕ್ಯಾಂಟೀನ್‌ಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಹಾವೇರಿ ನಗರದಲ್ಲಿ ಪಾದಚಾರಿ ರಸ್ತೆಗಳಲ್ಲಿ  ತಳ್ಳುಗಾಡಿ ಕ್ಯಾಂಟೀನ್​​ಗಳ ಹಾವಳಿ, ಪಾದಚಾರಿಗಳ ಸಂಚಾರಕ್ಕೆ ಅಡ್ಡಗಲ್ಲುಗಳಾಗಿವೆ!
ಹಾವೇರಿ ನಗರದಲ್ಲಿ ತಳ್ಳುಗಾಡಿ ಕ್ಯಾಂಟೀನ್​​ಗಳ ಹಾವಳಿ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Nov 30, 2023 | 11:50 AM

Share

ಹಾವೇರಿ ನಗರದಲ್ಲಿ (Haveri) ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ (traffic problems) ಹೆಚ್ಚುತ್ತಿದೆ. ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಬಹುತೇಕ ರಸ್ತೆಗಳಲ್ಲಿ ಪಾದಚಾರಿ  ಮಾರ್ಗಗಳಲ್ಲಿ ರಸ್ತೆ ಬದಿ ಮೊಬೈಲ್​​ ಕ್ಯಾಂಟೀನ್‌ಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿದ್ದು, ಬೆಳಗ್ಗೆಯಿಂದ ತಡ ರಾತ್ರಿಯವರೆಗೆ ಕಾರ್ಯನಿರ್ವಹಿಸುತ್ತಿವೆ. ಸಂಚಾರಿ ಕ್ಯಾಂಟೀನ್‌ಗಳು (mobile canteens) ಹೆಚ್ಚಿನ ರಸ್ತೆಗಳಾದ ಎನ್‌ಎಚ್-48, ಮುನ್ಸಿಪಲ್ ಹೈಸ್ಕೂಲ್ ರಸ್ತೆ, ಡಿಸಿ ಕಚೇರಿ ರಸ್ತೆ, ಗುತ್ತಲ್ ರಸ್ತೆ ಮತ್ತು ಇತರ ಒಳ ರಸ್ತೆಗಳನ್ನು ಆಕ್ರಮಿಸಿಕೊಂಡಿವೆ. ಈ ಕ್ಯಾಂಟೀನ್‌ಗಳನ್ನು ಪಾರ್ಕಿಂಗ್‌ಗೆ ಮೀಸಲಾದ, ಜನ ಓಡಾಟದ ಜಾಗದಲ್ಲಿ ಸ್ಥಾಪಿಸಿರುವುದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗಿದೆ (City Municipal Council, Haveri).

ಇದಲ್ಲದೆ, ಈ ರಸ್ತೆ ಬದಿಯ ಈ ತಳ್ಳುಗಾಡಿ ಕ್ಯಾಂಟೀನ್​​ಗಳು ತ್ಯಾಜ್ಯವನ್ನು ರಸ್ತೆಯ ಮೇಲೆಯೇ ಎಸೆದು ಹೋಗುತ್ತವೆ. ತಳ್ಳುಗಾಡಿ ಕ್ಯಾಂಟೀನ್ ಹೊರಸೂಸುವ ಅಡುಗೆ ಹೊಗೆ ವಾಯು ಮಾಲಿನ್ಯ ಹೆಚ್ಚಿಸುತ್ತಿದೆ. ಇನ್ನು ತಳ್ಳುಗಾಡಿ ಕ್ಯಾಂಟೀನ್ ಅವರು ಆಹಾರ ಬೇಯಿಸುವಾಗ ಮತ್ತು ಪಾತ್ರೆಗಳ ತೊಳೆಯುವಾಗ, ವ್ಯಾಪಾರ ಮಾಡುವಾಗ ನಿರಂತರ ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತಿದೆ.

ಅಕ್ಕಪಕ್ಕದ ಅಂಗಡಿಯವರು, ಸ್ಥಳೀಯ ನಿವಾಸಿಗಳು ಎದುರಿಸುತ್ತಿರುವ ದೊಡ್ಡ ಸಮಸ್ಯೆಯೆಂದರೆ ಅವರ ವಾಹನಗಳ ನಿಲುಗಡೆಗೆ ಸ್ಥಳಳಳಾವಕಾಆಶಶ ಸಸಿಗದೆ ಪರದಾಡುತ್ತಿದ್ದಾರೆ. ಆದರೆ ತಳ್ಳುಗಾಡಿ ಕ್ಯಾಂಟೀನ್​​ಗಳ ಅಕ್ರಮಣದಿಂದಾಗಿ ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನಗಳನ್ನು ಮುಖ್ಯ ರಸ್ತೆಗಳಲ್ಲಿ ಅಪಾಯಕಾರಿಯಾಗಿ ನಿಲುಗಡೆ ಮಾಡುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಜೊತೆಗೆ ಟ್ರಾಫಿಕ್ ನಿಯಂತ್ರಣಕ್ಕಾಗಿ ಮತ್ತು ಇನ್ನಿತರೆ ಅಂಗಡಿಗಳ ಮುಂಭಾಗದ ಜಾಗವನ್ನು ನಿರ್ಬಂಧಿಸುವುದರಿಂದ ವ್ಯಾಪಾರಿಗಳು ಇಲ್ಲಿ ವ್ಯಾಪಾರ ಮಾಡಲು ಸಾಧ್ಯವಾಗುತ್ತಿಲ್ಲ ಎಂದು timesofindia.indiatimes.com ವರದಿ ಮಾಡಿದೆ.

ಇದನ್ನೂ ಓದಿ: ಜಯನಗರ ಶಾಪಿಂಗ್​ ಕಾಂಪ್ಲೆಕ್ಸ್ ಬಳಿ ಫುಟ್‌ಪಾತ್‌ ವ್ಯಾಪಾರ ಅಂಗಡಿಮುಂಗಟ್ಟು ತೆರವುಗೊಳಿಸಲಿರುವ ಬಿಬಿಎಂಪಿ, ಏನಿದೆ ಸದ್ಯದ ಚಿತ್ರಣ

ಮುನ್ಸಿಪಲ್ ಹೈಸ್ಕೂಲ್ ರಸ್ತೆಯಲ್ಲಿ ಮಾಂಸಾಹಾರಿ ಕ್ಯಾಂಟೀನ್​​ಗಳು ಅವ್ಯವಸ್ಥೆಯ ಆಗರವಾಗಿವೆ ಎಂದು ಇಲ್ಲಿನ ನಿವಾಸಿ ಅಶೋಕ್ ಬೋಗಾರ್ timesofindia.indiatimes.com ತಿಳಿಸಿದ್ದಾರೆ. ಸ್ವಚ್ಛತೆ ಎಂಬುದು ಈ ತಳ್ಳುಗಾಡಿ ಕ್ಯಾಂಟೀನ್​​ಗಳ ಆದ್ಯತೆಗಳಲ್ಲಿ ಕನಿಷ್ಠವಾಗಿದೆ. “ಅಳಿದುಳಿದ ಮಾಂಸಾಹಾರ ಮತ್ತು ತ್ಯಾಜ್ಯವನ್ನು ಸಾಮಾನ್ಯವಾಗಿ ರಸ್ತೆಗಳಲ್ಲಿ ಎಸೆದಿರುತ್ತಾರೆ. ಅದಕ್ಕಾಗಿ ಬೀದಿ ನಾಯಿಗಳು ಜಗಳವಾಡುತ್ತವೆ. ಅದು ಅಹಿತಕರ ವಾತಾವರಣವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಮತ್ತು ನಾಯಿಗಳ ನಿರಂತರ ಬೊಗಳುವಿಕೆ ಅಸಹನೀಯವಾಗಿರುತ್ತದೆ ಎಂದು ಅವರು ಕಿಡಿಕಾರಿದ್ದಾರೆ.

ನಮ್ಮ ಗ್ರಾಹಕರು ಮುಖ್ಯ ರಸ್ತೆಯಿಂದ ನಮ್ಮ ಅಂಗಡಿಗಳ ಕಡಡೆಗೆ ಬರಲು ಸಾಧ್ಯವಾಗದ ಕಾರಣ ರಸ್ತೆ ಬದಿಯ ಕ್ಯಾಂಟೀನ್‌ಗಳು ವಾಆಸ್ತವದ ನೆಲೆಗಟ್ಟಿನಲ್ಲಿ ನಮ್ಮ ವ್ಯಾಪಾರಕ್ಕೆ ಬಹುದೊಡ್ಡ ಅಡಚಣೆಯಾಗಿದೆ. ಈ ಮೊಬೈಲ್ ಕ್ಯಾಂಟೀನ್‌ಗಳಿಂದ ಗ್ರಾಹಕರು ನಮ್ಮ ಅಂಗಡಿಗಳ ಕಡೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹಳೆಯ ರಾಷ್ಟ್ರೀಯ ಹೆದ್ದಾರಿ-48 ರ ಬಸ್ ಟರ್ಮಿನಲ್ ಬಳಿಯ ಅಂಗಡಿಯವರೊಬ್ಬರು ತಮ್ಮ ಆತಂಕವನ್ನು ಹಂಚಿಕೊಂಡಿದ್ದಾರೆ.

ಹಾವೇರಿ ನಗರ ವಾಸಿಗಳಿಗೆ ಕುಡಿಯುವ ನೀರಿನ ಜಲಮೂಲ ಅಕ್ಕಮಹಾದೇವಿ ಕೊಳವಾಗಿದೆ. ಇಲ್ಲಿ ಸಣ್ಣ ಕ್ಯಾಂಟೀನ್‌ಗಳಿದ್ದು, ಅವುಗಳ ಆವರಣದಲ್ಲಿ ಆಹಾರ ಸೇವೆ ಒದಗಿಸಲು, ಆಹಾರ ಸೇವಿಸಲು ಸಾಕಷ್ಟು ಸ್ಥಳಾವಕಾಶವಿಲ್ಲ. ಜನರು ತಮ್ಮ ವಾಹನಗಳನ್ನು ರಸ್ತೆಗಳಲ್ಲಿಯೇ ನಿಲ್ಲಿಸಿ ಆಹಾರ ಸೇವಿಸುತ್ತಾರೆ. ಇದರಿಂದ ಪಾದಚಾರಿಗಳು ಮತ್ತು ವಾಹನ ಸವಾರರ ಸಂಚಾರಕ್ಕೆ ತೊಡಕುಂಟಾಗುತ್ತದೆ. ಕೆರೆಗೆ ತ್ಯಾಜ್ಯ ಸುರಿಯುವ ಮೂಲಕವೂ ಸಹ ಕೆರೆಯನ್ನು ಕಲುಷಿತಗೊಳಿಸುತ್ತಿದ್ದಾರೆ ಎಂದು ಹಾವೇರಿಯ ಜೆಡಿಎಸ್‌ ಮುಖಂಡ ಮಾಂತೇಶ ಬೇವಿನಹಿಂಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ
ಅಂಗನವಾಡಿಯಲ್ಲಿ‌ ಸೊಳ್ಳೆ ಪರದೆ ಹಾಕಿಕೊಂಡು ಮಲಗಿದ ಮಕ್ಕಳು: ಸಚಿವ ಆಶ್ಚರ್ಯ
ಅಂಗನವಾಡಿಯಲ್ಲಿ‌ ಸೊಳ್ಳೆ ಪರದೆ ಹಾಕಿಕೊಂಡು ಮಲಗಿದ ಮಕ್ಕಳು: ಸಚಿವ ಆಶ್ಚರ್ಯ
ಎಇಇ 16 ದಿನದಿಂದ ನಾಪತ್ತೆ: ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ತಂದೆ
ಎಇಇ 16 ದಿನದಿಂದ ನಾಪತ್ತೆ: ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ತಂದೆ
ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ
ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ
ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್​​​ಗೆ​​ 14 ದಿನ ನ್ಯಾಯಾಂಗ ಬಂಧನ
ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್​​​ಗೆ​​ 14 ದಿನ ನ್ಯಾಯಾಂಗ ಬಂಧನ
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ
‘ಬಿಗ್ ಬಾಸ್​ಗೆ ಮೂರು ಬಿಟ್ಟು ಬರ್ತಾರೆ ಅಂದುಕೊಂಡಿರಲಿಲ್ಲ’; ವೈಷ್ಣವಿ
‘ಬಿಗ್ ಬಾಸ್​ಗೆ ಮೂರು ಬಿಟ್ಟು ಬರ್ತಾರೆ ಅಂದುಕೊಂಡಿರಲಿಲ್ಲ’; ವೈಷ್ಣವಿ