
ರಾಮನಗರ: ಯಾರೋ ಒಬ್ಬರು ಹೇಳ್ತಾರೆ ಅಹಿಂದ ಅಹಿಂದ ಅಂತಾ, ಏನ್ ಅಹಿಂದನೋ.. ನಾನು ನೋಡಿಲ್ಲದ ಅಹಿಂದನಾ? ಅಹಿಂದದಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಲಾಭ ಇದೆ ಅಂತ ಹೊರಗಿಡ್ತೇನೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಗುಡುಗಿದ್ದಾರೆ.
ನಾನು ಒಂದು ಜಾತಿಗೆ ಸೀಮಿತವಾದ ರಾಜಕಾರಣ ಮಾಡಿಲ್ಲ. ಯಾವುದೇ ಜಾತಿಯನ್ನ ವಿರೋಧಿಸಲು ಇಷ್ಟಪಡಲ್ಲ. ಕಾಲ ಬಂದಾಗ ಎಲ್ಲವನ್ನೂ ಹೇಳುತ್ತೇನೆ ಎಂದು ಮಾಗಡಿಯಲ್ಲಿ ಹೆಚ್.ಡಿ.ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.
ಬೈಎಲೆಕ್ಷನ್ನಲ್ಲಿ ಮೈತ್ರಿ ಇಲ್ಲ:
ಮುಂದಿನ ಉಪಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಎಲ್ಲ ಕ್ಷೇತ್ರಗಳಲ್ಲೂ ಜೆಡಿಎಸ್ ಪಕ್ಷ ಸ್ಪರ್ಧೆ ಮಾಡುತ್ತೆ. ನಾವೇ ಹೋರಾಟ ಮಾಡಿ ಪಕ್ಷ ತಂದ ಯೋಜನೆಗಳನ್ನು ಜನರ ಮುಂದಿಟ್ಟು ಉಪ ಚುನಾವಣೆ ಎದುರಿಸ್ತೇವೆ. ಮಹಾ ಜನತೆ ತೀರ್ಪು ಕೊಡ್ತಾರೆ ಎಂದರು.
ಮೈತ್ರಿ ಸರ್ಕಾರ ಹೋದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ನಾನು ಈಗ ಚರ್ಚೆ ಮಾಡಲ್ಲ, ಬೇರೆ ಸಂದರ್ಭದಲ್ಲಿ ಮಾತನಾಡುತ್ತೇನೆ. ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಯಾರಿಂದ ಹೋಯ್ತು? ಬಿ.ಎಸ್.ಯಡಿಯೂರಪ್ಪ ಯಾರಿಂದ ಮುಖ್ಯಮಂತ್ರಿ ಆದರು ಎಂಬುದನ್ನು ಬೇರೆ ಸಂದರ್ಭದಲ್ಲಿ ಮಾತನಾಡುತ್ತೇನೆ ಎಂದರು.