ಬೈಎಲೆಕ್ಷನ್ನಲ್ಲಿ ಸ್ಪರ್ಧೆಗೆ ಸಿದ್ಧ: ಡಿಸಿಎಂ ಸವದಿ ಘೋಷಣೆ
ಬೆಂಗಳೂರು: ಚುನಾವಣೆಯಲ್ಲಿ ಸೋತಿದ್ದರೂ ಡಿಸಿಎಂ ಪಟ್ಟ ಅಲಂಕರಿಸಿರುವ ಲಕ್ಷ್ಮಣ ಸವದಿ ವಿರುದ್ಧ ಸ್ವಪಕ್ಷೀಯರು ಸೇರಿದಂತೆ ಹಲವರಿಂದ ಆಕ್ರೋಶಗಳು ವ್ಯಕ್ತವಾಗಿದ್ದವು. ಆದ್ರೆ ಇದೀಗ ರಾಜ್ಯದಲ್ಲಿ ಉಪಚುನಾವಣೆ ಎದುರಾಗಿದ್ದು, ಅಥಣಿ ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ಧನಿದ್ದೇನೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. ನಾನು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷ ಏನು ಹೇಳುತ್ತದೋ ಅದರಂತೆ ನಡೆದುಕೊಳ್ಳುತ್ತೇನೆ ಎಂದಿದ್ದಾರೆ. ಇದೇ ವೇಳೆ ಅನರ್ಹರ ಬಗ್ಗೆ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ, ಅನರ್ಹ ಶಾಸಕರ ಬಗ್ಗೆ ನಮ್ಮ ಯಾವುದೇ ತಕರಾರು ಇಲ್ಲ. ಅನರ್ಹ ಶಾಸಕರ […]

ಬೆಂಗಳೂರು: ಚುನಾವಣೆಯಲ್ಲಿ ಸೋತಿದ್ದರೂ ಡಿಸಿಎಂ ಪಟ್ಟ ಅಲಂಕರಿಸಿರುವ ಲಕ್ಷ್ಮಣ ಸವದಿ ವಿರುದ್ಧ ಸ್ವಪಕ್ಷೀಯರು ಸೇರಿದಂತೆ ಹಲವರಿಂದ ಆಕ್ರೋಶಗಳು ವ್ಯಕ್ತವಾಗಿದ್ದವು. ಆದ್ರೆ ಇದೀಗ ರಾಜ್ಯದಲ್ಲಿ ಉಪಚುನಾವಣೆ ಎದುರಾಗಿದ್ದು, ಅಥಣಿ ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ಧನಿದ್ದೇನೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ನಾನು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷ ಏನು ಹೇಳುತ್ತದೋ ಅದರಂತೆ ನಡೆದುಕೊಳ್ಳುತ್ತೇನೆ ಎಂದಿದ್ದಾರೆ. ಇದೇ ವೇಳೆ ಅನರ್ಹರ ಬಗ್ಗೆ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ, ಅನರ್ಹ ಶಾಸಕರ ಬಗ್ಗೆ ನಮ್ಮ ಯಾವುದೇ ತಕರಾರು ಇಲ್ಲ. ಅನರ್ಹ ಶಾಸಕರ ವಿಚಾರ ಈಗಾಗಲೇ ಕೋರ್ಟ್ನಲ್ಲಿದೆ. ಅನರ್ಹ ಶಾಸಕರು ನಮ್ಮ ಪಕ್ಷಕ್ಕೆ ಸೇರ್ಪಡೆಯಾದರೆ ಸ್ವಾಗತಿಸುತ್ತೇವೆ. ಅವರ ಬೇಡಿಕೆಗಳಿಗೆ ಸಂಬಂಧಪಟ್ಟಂತೆ ಪಕ್ಷದ ವರಿಷ್ಠರು ನಿರ್ಧರಿಸ್ತಾರೆ ಎಂದರು.




