AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ನೋಡಿಲ್ಲದ ಅಹಿಂದಾನಾ?: ಹೆಚ್​ಡಿಡಿ ಗುಡುಗಿದ್ದು ಯಾರ ಮೇಲೆ ಗೊತ್ತಾ

ರಾಮನಗರ: ಯಾರೋ ಒಬ್ಬರು ಹೇಳ್ತಾರೆ ಅಹಿಂದ ಅಹಿಂದ ಅಂತಾ, ಏನ್ ಅಹಿಂದನೋ.. ನಾನು ನೋಡಿಲ್ಲದ ಅಹಿಂದನಾ? ಅಹಿಂದದಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಲಾಭ ಇದೆ ಅಂತ ಹೊರಗಿಡ್ತೇನೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್​ ವರಿಷ್ಠ ಹೆಚ್​.ಡಿ.ದೇವೇಗೌಡ ಗುಡುಗಿದ್ದಾರೆ. ನಾನು ಒಂದು ಜಾತಿಗೆ ಸೀಮಿತವಾದ ರಾಜಕಾರಣ ಮಾಡಿಲ್ಲ. ಯಾವುದೇ ಜಾತಿಯನ್ನ ವಿರೋಧಿಸಲು ಇಷ್ಟಪಡಲ್ಲ. ಕಾಲ ಬಂದಾಗ ಎಲ್ಲವನ್ನೂ ಹೇಳುತ್ತೇನೆ ಎಂದು ಮಾಗಡಿಯಲ್ಲಿ ಹೆಚ್​.ಡಿ.ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.  ಬೈಎಲೆಕ್ಷನ್​ನಲ್ಲಿ ಮೈತ್ರಿ ಇಲ್ಲ: ಮುಂದಿನ ಉಪಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಜೊತೆ ಹೊಂದಾಣಿಕೆ […]

ನಾನು ನೋಡಿಲ್ಲದ ಅಹಿಂದಾನಾ?: ಹೆಚ್​ಡಿಡಿ ಗುಡುಗಿದ್ದು ಯಾರ ಮೇಲೆ ಗೊತ್ತಾ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Nov 07, 2019 | 7:01 PM

Share

ರಾಮನಗರ: ಯಾರೋ ಒಬ್ಬರು ಹೇಳ್ತಾರೆ ಅಹಿಂದ ಅಹಿಂದ ಅಂತಾ, ಏನ್ ಅಹಿಂದನೋ.. ನಾನು ನೋಡಿಲ್ಲದ ಅಹಿಂದನಾ? ಅಹಿಂದದಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಲಾಭ ಇದೆ ಅಂತ ಹೊರಗಿಡ್ತೇನೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್​ ವರಿಷ್ಠ ಹೆಚ್​.ಡಿ.ದೇವೇಗೌಡ ಗುಡುಗಿದ್ದಾರೆ.

ನಾನು ಒಂದು ಜಾತಿಗೆ ಸೀಮಿತವಾದ ರಾಜಕಾರಣ ಮಾಡಿಲ್ಲ. ಯಾವುದೇ ಜಾತಿಯನ್ನ ವಿರೋಧಿಸಲು ಇಷ್ಟಪಡಲ್ಲ. ಕಾಲ ಬಂದಾಗ ಎಲ್ಲವನ್ನೂ ಹೇಳುತ್ತೇನೆ ಎಂದು ಮಾಗಡಿಯಲ್ಲಿ ಹೆಚ್​.ಡಿ.ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ. 

ಬೈಎಲೆಕ್ಷನ್​ನಲ್ಲಿ ಮೈತ್ರಿ ಇಲ್ಲ: ಮುಂದಿನ ಉಪಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಎಲ್ಲ ಕ್ಷೇತ್ರಗಳಲ್ಲೂ ಜೆಡಿಎಸ್​ ಪಕ್ಷ ಸ್ಪರ್ಧೆ ಮಾಡುತ್ತೆ. ನಾವೇ ಹೋರಾಟ ಮಾಡಿ ಪಕ್ಷ ತಂದ ಯೋಜನೆಗಳನ್ನು ಜನರ ಮುಂದಿಟ್ಟು ಉಪ ಚುನಾವಣೆ ಎದುರಿಸ್ತೇವೆ. ಮಹಾ ಜನತೆ ತೀರ್ಪು ಕೊಡ್ತಾರೆ ಎಂದರು.

ಮೈತ್ರಿ ಸರ್ಕಾರ ಹೋದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ನಾನು ಈಗ ಚರ್ಚೆ ಮಾಡಲ್ಲ, ಬೇರೆ ಸಂದರ್ಭದಲ್ಲಿ ಮಾತನಾಡುತ್ತೇನೆ. ಕಾಂಗ್ರೆಸ್​, ಜೆಡಿಎಸ್​​ ಮೈತ್ರಿ ಸರ್ಕಾರ ಯಾರಿಂದ ಹೋಯ್ತು? ಬಿ.ಎಸ್​​.ಯಡಿಯೂರಪ್ಪ ಯಾರಿಂದ ಮುಖ್ಯಮಂತ್ರಿ ಆದರು ಎಂಬುದನ್ನು ಬೇರೆ ಸಂದರ್ಭದಲ್ಲಿ ಮಾತನಾಡುತ್ತೇನೆ ಎಂದರು.

Follow Us
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಹೈದರಾಬಾದ್ ಮೆಟ್ರೋದಲ್ಲಿ 'ಟಾಕ್ಸಿಕ್' ಹವಾ; ಯಶ್ ಸಿನಿಮಾಗೆ ಭರ್ಜರಿ ಪ್ರಚಾರ
ಹೈದರಾಬಾದ್ ಮೆಟ್ರೋದಲ್ಲಿ 'ಟಾಕ್ಸಿಕ್' ಹವಾ; ಯಶ್ ಸಿನಿಮಾಗೆ ಭರ್ಜರಿ ಪ್ರಚಾರ
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್