ಇಡೀ ಕುಟುಂಬ ಶೃಂಗೇರಿ ಸಂಸ್ಥಾನಕ್ಕೆ ಆಭಾರಿ, ದೇವೇಗೌಡ ಕಣ್ಣೀರು

ಹಾಸನ: ಇಂದು ಬೆಳಗ್ಗಿನಿಂದಲೂ ವಿವಿಧ ದೇವಾಲಯಗಳಿಗೆ ಭೇಟಿ ನೀಡಿರುವ ಹೆಚ್ ಡಿ ದೇವೇಗೌಡರ ಕುಟುಂಬ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿ ಈಶ್ವರ ದೇಗುಲದ ಕುಂಭಾಭಿಷೇಕದಲ್ಲಿ ಭಾಗಿಯಾಗಿದೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಚನ್ನಮ್ಮ, ಹೆಚ್ ಡಿ ರೇವಣ್ಣ, ಭವಾನಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಸೇರಿ ಕುಟುಂಬ ಸಮೇತರಾಗಿ ದೇವಾಲಯದ ದರ್ಶನ ಮಾಡಿದ್ದಾರೆ. ಶೃಂಗೇರಿ ಮಠದ ವಿಧುಶೇಖರ ಸ್ವಾಮಿಜೀ ಅವರು ನರಸಿಂಹಸ್ವಾಮಿ ದೇವರ ನೂತನ ದೇಗುಲದ ಉದ್ಘಾಟನೆ ನೆರವೇರಿಸಿದ್ದಾರೆ. ಹೆಚ್ ಡಿಡಿ ಕಣ್ಣೀರು: ದೇಗುಲ […]

ಇಡೀ ಕುಟುಂಬ ಶೃಂಗೇರಿ ಸಂಸ್ಥಾನಕ್ಕೆ ಆಭಾರಿ, ದೇವೇಗೌಡ ಕಣ್ಣೀರು
ಸಾಧು ಶ್ರೀನಾಥ್​

Updated on: Nov 14, 2019 | 3:00 PM

ಹಾಸನ: ಇಂದು ಬೆಳಗ್ಗಿನಿಂದಲೂ ವಿವಿಧ ದೇವಾಲಯಗಳಿಗೆ ಭೇಟಿ ನೀಡಿರುವ ಹೆಚ್ ಡಿ ದೇವೇಗೌಡರ ಕುಟುಂಬ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿ ಈಶ್ವರ ದೇಗುಲದ ಕುಂಭಾಭಿಷೇಕದಲ್ಲಿ ಭಾಗಿಯಾಗಿದೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಚನ್ನಮ್ಮ, ಹೆಚ್ ಡಿ ರೇವಣ್ಣ, ಭವಾನಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಸೇರಿ ಕುಟುಂಬ ಸಮೇತರಾಗಿ ದೇವಾಲಯದ ದರ್ಶನ ಮಾಡಿದ್ದಾರೆ. ಶೃಂಗೇರಿ ಮಠದ ವಿಧುಶೇಖರ ಸ್ವಾಮಿಜೀ ಅವರು ನರಸಿಂಹಸ್ವಾಮಿ ದೇವರ ನೂತನ ದೇಗುಲದ ಉದ್ಘಾಟನೆ ನೆರವೇರಿಸಿದ್ದಾರೆ.

ಹೆಚ್ ಡಿಡಿ ಕಣ್ಣೀರು:
ದೇಗುಲ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ‌ರು ನಾವು ಸಾಕಷ್ಟು ಕಷ್ಟ ಅನುಭವಿಸಿದ್ದೇವೆ, ಆದ್ರೆ ಏನೇ ಕಷ್ಟ ಆದ್ರೂ ನಾವು ಗುರುಗಳನ್ನ ಬಿಡಲಿಲ್ಲ. ಏನೇ ನೋವು ನಲಿವು ಬಂದರೂ ನಿಮ್ಮ ಆಶೀರ್ವಾದದಿಂದಲೇ ಎಲ್ಲವನ್ನೂ ಶ್ರದ್ಧೆ ಭಕ್ತಿಯಿಂದ ಸ್ವೀಕಾರ ಮಾಡಿದ್ದೇವೆ. ನಾನು ಯಾರನ್ನು ಮೆಚ್ಚಿಸಬೇಕಿಲ್ಲ. ಏನೇ ಕಷ್ಟ ಬಂದರೂ ನಿಮ್ಮನ್ನು ಬಿಟ್ಟು ಎಲ್ಲೂ ಹೋಗಲ್ಲ ಎಂದು ತಮ್ಮ ರಾಜಕೀಯ ಜೀವನದ ಕಷ್ಟದ ದಿನಗಳನ್ನ ನೆನೆದು ದೇವೇಗೌಡ‌ರು ಕಣ್ಣೀರು ಹಾಕಿದರು.

ವೇದಿಕೆಯ ಮೇಲೆ ವಿಧುಶೇಖರ್ ಭಾರತೀ ತೀರ್ಥರು ಆಸೀನರಾಗಿದ್ದರು. ವೇದಿಕೆ ಕೆಳಗೆ ಕುಳಿತಿದ್ದ ದೇವೇಗೌಡ‌ರು ಮಾತನಾಡುತ್ತಾ ಕಣ್ಣೀರಿಟ್ಟರು. ನಮ್ಮ ಇಡೀ ಕುಟುಂಬ ನಿಮ್ಮ ಸಂಸ್ಥಾನಕ್ಕೆ ಆಭಾರಿಯಾಗಿದೆ. ದೊಡ್ಡವರ ದರ್ಶನಕ್ಕೆ ಬರುತ್ತೇನೆ ಎಂದು ಭಾವಿಸಿರಲಿಲ್ಲ ಎಂದು ಸ್ವಾಮಿಜೀಯವರ ಕುರಿತು ಮಾತನಾಡುತ್ತ ಗದ್ಗದಿತರಾದರು.

Published On - 2:28 pm, Thu, 14 November 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us