ದೇವನಹಳ್ಳಿ: ಮುಂಬೈನಿಂದ ಮಂಡ್ಯಕ್ಕೆ ಮೃತದೇಹ ತಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ. ಮಂಡ್ಯ-ಮುಂಬೈ ಲಿಂಕ್ನಿಂದ ಮತ್ತೆ ಐವರಿಗೆ ಸೋಂಕು ಹರಡಿದೆ.
ಮಂಡ್ಯದಲ್ಲಿ ಅನಾಹುತ ಸೃಷ್ಟಿಸಲು ಸರ್ಕಾರ ಮುಂದಾಗಿದೆ. ರಾಮನಗರಕ್ಕೆ ಪಾದರಾಯನಪುರದ ಪುಂಡರನ್ನು ಕರೆದುಕೊಂಡು ಬಂದಿದ್ರು. ಆಗ ಒಂದಷ್ಟು ಆತಂಕ ಸೃಷ್ಟಿಮಾಡಿದ್ರು. ರಾಮನಗರ ಬಳಿಕ ಈಗ ಮಂಡ್ಯ ಟಾರ್ಗೆಟ್ ಆಗಿದೆ ಎಂದು ದೇವನಹಳ್ಳಿಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರ ಕಿಡಿಕಾರಿದ್ದಾರೆ.
ಮುಂಬೈನಿಂದ ಬಂದು ಮಂಡ್ಯದಲ್ಲಿ ಶವ ಸಂಸ್ಕಾರ ಮಾಡುವಾಗ ಜೊತೆ ಇದ್ದ ಐದು ಜನರಿಗೆ ಕೊರೊನಾ ಬಂದಿದೆ. ಶವಸಂಸ್ಕಾರಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದ್ದು ಯಾಕೆ? ಅಕ್ರಮ ದಾಖಲೆಗಳನ್ನು ಸೃಷ್ಟಿಸಿ ಶವ ತೆಗೆದುಕೊಂಡು ಬರಲಾಗಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಮುಂಬೈನಲ್ಲಿ ಮಂಡ್ಯದವರು 15 ಸಾವಿರಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ಸುಮಾರು ಏಳು ಸಾವಿರಕ್ಕೂ ಅಧಿಕ ಮಂದಿ ಮಂಡ್ಯಕ್ಕೆ ವಾಪಸಾಗಿದ್ದಾರೆ. ಸರ್ಕಾರ, ಜಿಲ್ಲಾಡಳಿತ ಕೂಡಲೇ ಇವರನ್ನು ಕೂಡ ಪರೀಕ್ಷೆಗೆ ಒಳಪಡಿಸಬೇಕು. ಸರ್ಕಾರ ಕೊರೊನಾ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ದ ಹೆಚ್ ಡಿಕೆ ವಾಗ್ದಾಳಿ ನಡೆಸಿದ್ದಾರೆ.
Published On - 12:24 pm, Fri, 1 May 20