FIR ಹಾಕಿದ್ರೂ ಬೆದರಬೇಡಿ‌: ನೈಸ್​ ರಸ್ತೆಯಲ್ಲಿ ಟೋಲ್​ ಕಟ್ಟದಂತೆ ಕುಮಾರಸ್ವಾಮಿ ಮತ್ತೆ ಕರೆ

ನೈಸ್ ರಸ್ತೆ ಟೋಲ್ ಪಾವತಿ ವಿಚಾರವಾಗಿ ವಾಹನ ಸವಾರರಲ್ಲಿ ಗೊಂದಲ ಉಂಟಾಗಿದೆ. ವಾಹನ ಸವಾರರು ನೈಸ್ ರಸ್ತೆ ಬಳಕೆಗೆ ಟೋಲ್ ಕಟ್ಟಬೇಡಿ ಎಂದು ಕೇಂದ್ರ ಸಚಿವ ಹೆಚ್​​​ಡಿ ಕುಮಾರಸ್ವಾಮಿ ಹೇಳಿದ್ದು, ಇದಾದ ಬಳಿಕ ಜನರು ಟೋಲ್ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಟೋಲ್ ಸಿಬ್ಬಂದಿ ಹಾಗೂ ವಾಹನ ಸವಾರರ ನಡುವೆ ನಿತ್ಯ ವಾಗ್ದಾದ , ಗಲಾಟೆಗಳು ನಡೆಯುತ್ತಿವೆ. ಇದರ ಮಧ್ಯೆ ಇದೀಗ ಮತ್ತೊಮ್ಮೆ ಕುಮಾರಸ್ವಾಮಿ, ಟೋಲ್ ಕಟ್ಟದಂತೆ ಕರೆ ನೀಡಿದ್ದಾರೆ.

FIR ಹಾಕಿದ್ರೂ ಬೆದರಬೇಡಿ‌: ನೈಸ್​ ರಸ್ತೆಯಲ್ಲಿ ಟೋಲ್​ ಕಟ್ಟದಂತೆ ಕುಮಾರಸ್ವಾಮಿ ಮತ್ತೆ ಕರೆ
ಹೆಚ್.ಡಿ.ಕುಮಾರಸ್ವಾಮಿ
Image Credit source: tv9 kannada
Edited By:

Updated on: Aug 21, 2026 | 5:26 PM

ಬೆಂಗಳೂರು, (ಆಗಸ್ಟ್ 21): ನೈಸ್ ರಸ್ತೆ ಟೋಲ್ (Nice Road Toll) ಗೊಂದಲಮಯವಾಗಿದೆ. ಮೊನ್ನೇ ಅಷ್ಟೇ ಕೇಂದ್ರ ಸಚಿವ ಹೆಚ್​​​ಡಿ ಕುಮಾರಸ್ವಾಮಿ (HD Kumaraswamy) ಯಾರೂ ಟೋಲ್ ಕಟ್ಟಬೇಡಿ ಎಂದು ಹೇಳಿದ್ದರು. ಈ ಹೇಳಿಕೆ ಬೆನ್ನಲ್ಲೇ ವಾಹನ ಸವಾರರು ಟೋಲ್ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ. ಆದ್ರೆ, ಇದಕ್ಕೆ ಟೋಲ್ ಸಿಬ್ಬಂದಿ ಏಕೆ ಕಟ್ಟಲ್ಲ? ಕಟ್ಟಬೇಡಿ ಎಂದು ಕೋರ್ಟ್ ಆದೇಶ ಇದ್ಯಾ ಎಂದು ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ಟೋಲ್ ಸಂಬಂಧ ಸಿಬ್ಬಂದಿ ಹಾಗೂ ವಾಹನ ಸವಾರರ ಮಧ್ಯೆ ಗಲಾಟೆ, ವಾಗ್ವಾದಗಳು ನಡೆಯುತ್ತಿವೆ. ಇದರ ನಡುವೆ ಇದೀಗ ಈ ಬಗ್ಗೆ ಕುಮಾರಸ್ವಾಮಿ ಮತ್ತೊಮ್ಮೆ ಮಾತನಾಡಿದ್ದು, ಎಫ್​​​ಐಆರ್ ಹಾಕಿದರೂ ಪರವಾಗಿಲ್ಲ. ಯಾವುದೇ ಕಾರಣಕ್ಕೂ ಟೋಲ್ ಮಾತ್ರ ಕಟ್ಟಬೇಡಿ ಎಂದು ಕರೆ ಕೊಟ್ಟಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ. ಕಾನೂನು ಬಾಹಿರವಾಗಿ ಹಗಲು ದರೋಡೆ ಮಾಡುತ್ತಿರುವ ನೈಸ್ ಸಂಸ್ಥೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ನಿಮ್ಮ ನಡೆ ಇರಲಿ. ತಮಗೆ ಬೇಕಾದಂತೆ ಟೋಲ್​ ದರ ಏರಿಕೆ ಹೇಗೆ ಮಾಡುತ್ತಾರೆ? ಎಫ್​ಐಆರ್ ಹಾಕಿದ್ರೂ ಬೆದರಬೇಡಿ‌. ಕೈಮುಗಿದು ಹೇಳುತ್ತೇನೆ ಯಾವುದೇ ಕಾರಣಕ್ಕೂ ಟೋಲ್ ಕಟ್ಟಬೇಡಿ ಎಂದು ಸಾರ್ವಜನಿಕರಿಗೆ ಹೇಳಿದ್ದಾರೆ.

ಇದನ್ನೂ ಓದಿ: ಹೇಳಿಕೆ ನೀಡಿ ಕುಮಾರಣ್ಣ ಸೈಲೆಂಟ್: ಇತ್ತ ನೈಸ್ ಟೋಲ್​​​ ಸಿಬ್ಬಂದಿ-ಜನರ ಮಧ್ಯೆ ನಿತ್ಯ ಫೈಟ್!

ಅಕ್ರಮವಾಗಿ ಟೋಲ್ ಕಲೆಕ್ಷನ್ ಅಂತಾ ಕೋರ್ಟ್ ಹೇಳಿದೆ. ಪ್ರೇಮ್ ವರ್ಕ್ ಉಲ್ಲಂಘನೆ ಗೊತ್ತಾಗಿದೆ. ನೈಸ್​ ಸಂಸ್ಥೆಗೂ, ರಾಜ್ಯ ಸರ್ಕಾರಕ್ಕೂ ಏನು ಸಂಬಂಧ? 2000 ಕೋಟಿ ರೂ. ಸಂಗ್ರಹವಾಗಿದೆ. ಡಿ.ಕೆ.ಶಿವಕುಮಾರ್​ ರಾಜ್ಯ ಸಿಎಂ ಆಗಿ ಕೆಲಸ ಮಾಡ್ತಿದ್ದಾರಾ? ಅಥವಾ ನೈಸ್ ಕಂಪನಿಯ ಮಾಲೀಕರಾಗಿ ಸರ್ಕಾರ ನಡೆಸ್ತಿದ್ದಾರಾ? ಯಾಕೆ ಟೋಲ್ ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಳ್ಳಲ್ಲ ಎಂದು ವಾಗ್ದಾಳಿ ನಡೆಸಿದರು.

ಮೊನ್ನೇ ಅಷ್ಟೇ ಕುಮಾರಸ್ವಾಮಿ, ವಾಹನ ಸವಾರರು ನೈಸ್ ರಸ್ತೆ ಬಳಕೆಗೆ ಶುಲ್ಕ ಕಟ್ಟಬಾರದು ಎಂದು ಹೇಳಿದ್ದರು. ಈ ಹೇಳಿಕೆ ಬೆನ್ನಲ್ಲೇ ಟೋಲ್ ಪಾವತಿಸಲು ಚಾಲಕರು ಹಿಂದೇಟು ಹಾಕುತ್ತಿದ್ದಾರೆ. ಈ ರೀತಿಯ ಯಾವುದೇ ಅದೇಶ ಬಂದಿಲ್ಲ ಎಂದು ಟೋಲ್ ಸಿಬ್ಬಂದಿ ಚಾಲಕರ ಮನವೊಲಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ತೋರಿಸಿ ದ್ವಿಚಕ್ರ ವಾಹನ ಸವಾರರು, ಕಾರು, ಲಾರಿ, ಆಟೋ ಚಾಲಕರು ಟೋಲ್ ಪಾವತಿಸಲು ನಿರಾಕರಿಸುತ್ತಿದ್ದು, ಈ ಸಂಬಂಧ ಟೋಲ್ ಸಿಬ್ಬಂದಿ ಜತೆ ಗಲಾಟೆಗಳು ಆಗುತ್ತಿವೆ.

ಹೀಗೆ ಟೋಲ್ ಕಟ್ಟಲು ನಿರಾಕರಿಸುತ್ತಿರುವುದು ಹೆಚ್ಚಾಗುತ್ತಿದ್ದಂತೆಯೇ ಟೋಲ್ ಸಿಬ್ಬಂದಿ, ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯ ನೋಟಿಸ್ ಅಂಟಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us