ಜಿಎಸ್​ಟಿ, ಆಧಾರ್ ಯೋಜನೆ ಬಂದಿದ್ದೇ ಮನಮೋಹನ್​ ಸಿಂಗ್​ ಅವಧಿಯಲ್ಲಿ; ಸಿಎಂಗೆ ಹೆಚ್​ಡಿ ಕುಮಾರಸ್ವಾಮಿ ತಿರುಗೇಟು

| Updated By: ಸುಷ್ಮಾ ಚಕ್ರೆ

Updated on: Sep 20, 2021 | 6:46 PM

HD Kumaraswamy: ಆಧಾರ್ ಬಂದಿದ್ದು ಡಾ. ಮನಮೋಹನ್ ಸಿಂಗ್ ಕಾಲದಲ್ಲಿ. ಜಿಎಸ್‌ಟಿ ಬಂದಿದ್ದು ಕೂಡ ಡಾ. ಮನಮೋಹನ್ ಸಿಂಗ್‌ರವರ ಕಾಲದಲ್ಲೇ. ಆಗ ವಿರೋಧಿಸಿ ಈಗ ಬಿಜೆಪಿಯವರೇ ಅದನ್ನು ಜಾರಿ ಮಾಡಿದ್ದಾರೆ ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಜಿಎಸ್​ಟಿ, ಆಧಾರ್ ಯೋಜನೆ ಬಂದಿದ್ದೇ ಮನಮೋಹನ್​ ಸಿಂಗ್​ ಅವಧಿಯಲ್ಲಿ; ಸಿಎಂಗೆ ಹೆಚ್​ಡಿ ಕುಮಾರಸ್ವಾಮಿ ತಿರುಗೇಟು
ಸದನದಲ್ಲಿ ಜೆಡಿಎಸ್ ಎಚ್​.ಡಿ.ಕುಮಾರಸ್ವಾಮಿ
Follow us on

ಬೆಂಗಳೂರು: ಮನಮೋಹನ್‌ ಸಿಂಗ್‌ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಅವರು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಕಟು ಸತ್ಯಗಳನ್ನು ಒಪ್ಪಿಕೊಳ್ಳುತ್ತಿದ್ದರು. ರಾಜಕಾರಣಿಗಳು ಕಟು ಸತ್ಯ ಒಪ್ಪಿಕೊಳ್ಳುವುದು ಅಪರೂಪ. ಆದರೆ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್‌ಗೆ ಆ ಗುಣ ಇತ್ತು. ಆಧಾರ್‌, ಜಿಎಸ್‌ಟಿಯನ್ನು ಡಾ. ಮನಮೋಹನ್ ಸಿಂಗ್‌ ಜಾರಿಗೆ ತಂದಿದ್ದರು. ಆದರೆ, ಆಧಾರ್‌ ಯೋಜನೆ ಜಾರಿಗೆ ತಂದಾಗ ಬಿಜೆಪಿ ವಿರೋಧಿಸಿತ್ತು. ಬಳಿಕ ಅವರು ಅಧಿಕಾರಕ್ಕೆ ಬಂದಾಗ ಅದನ್ನೇ ಮುಂದುವರಿಸಿಕೊಂಡು ಹೋದರು. ಜಿಎಸ್‌ಟಿ ಯೋಜನೆ ಬಗ್ಗೆಯೂ ವಿರೋಧ ಮಾಡಿದ್ದ ಬಿಜೆಪಿ ಬಳಿಕ ಅವರೇ ಈಗ ಜಿಎಸ್‌ಟಿ ಬಗ್ಗೆ ಮಾತನಾಡುತ್ತಿದ್ದಾರೆ. ಜಿಎಸ್‌ಟಿ ಪರಿಣಾಮ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಆಧಾರ್ ಬಂದಿದ್ದು ಡಾ. ಮನಮೋಹನ್ ಸಿಂಗ್ ಕಾಲದಲ್ಲಿ. ಆಗ ಅದನ್ನು ಬಿಜೆಪಿಯವರು ವಿರೋಧ ಮಾಡಿದ್ದರು. ಜಿಎಸ್‌ಟಿ ಬಂದಿದ್ದು ಕೂಡ ಡಾ. ಮನಮೋಹನ್ ಸಿಂಗ್‌ರವರ ಕಾಲದಲ್ಲೇ. ಆಗ ಜಿಎಸ್‌ಟಿ ವಿರೋಧಿಸಿ ಈಗ ಬಿಜೆಪಿಯವರೇ ಅದನ್ನು ಜಾರಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ನನಗೆ ಗೌರವ ಇದೆ. ಆದರೆ ಮೋದಿ ಹತ್ತಿರ ಕೂಡ ನಮಗೆ ಹೋಗಲು ಆಗುವುದಿಲ್ಲ ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ.

ನೀವು ಎರಡು ದಿನ ದಾವಣಗೆರೆಯಲ್ಲಿ ಬಿಜೆಪಿ ಸಭೆ ಮಾಡಿದಿರಿ. ಅಲ್ಲಿಯೇ ಒಂದು ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ. ಅಂತಹವರ ಸಂಕಷ್ಟಕ್ಕೆ ನೀವು ಸ್ಪಂದಿಸಿ. ಮತ್ತೆ ನಾವೇ ಅಧಿಕಾರಕ್ಕೆ ಬರಬೇಕೆಂದು ನಿಮಗೆ ಅನಿಸಿದ್ದರೆ ಕೂಡಲೇ ಈ ಬಗ್ಗೆ ನಿರ್ಧಾರ ಕೈಗೊಳ್ಳಿ ಎಂದು ಹೆಚ್​ಡಿ ಕುಮಾರಸ್ವಾಮಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ನಮ್ಮನ್ನು ಮತ್ತೆ ವಿಪಕ್ಷದಲ್ಲೇ ಕೂರಿಸುತ್ತೇವೆ ಎಂದು ಸಿಎಂ ಹೇಳಿದ್ದರು. ಅವರು ಆ ಸ್ಥಾನದಲ್ಲಿದ್ದಾಗ ತಗ್ಗಿ ಬಗ್ಗಿ ನಡೆಯಬೇಕು. ಮುಂದೆ ನರೇಂದ್ರ ಮೋದಿ ಹೆಸರಿನಲ್ಲಿ ಚುನಾವಣೆಗೆ ಹೋದರೆ ಏನೂ ಉಪಯೋಗವಾಗುವುದಿಲ್ಲ. ಈ ಮಾತನ್ನು ಸ್ವತಃ ಯಡಿಯೂರಪ್ಪನವರೇ ಹೇಳಿದ್ದಾರೆ. ಯಡಿಯೂರಪ್ಪ ಅವರ ಅನುಭವದಲ್ಲಿ ಇದನ್ನು ಹೇಳಿದ್ದಾರೆ. ನಾನು ಮೋದಿಯನ್ನು ಕಡಿಮೆ ಮಾಡಲು ಈ ಮಾತು ಹೇಳಿಲ್ಲ. ಆದರೆ, ಇದೇ ಸತ್ಯ ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಆರ್ಥಿಕ ಪರಿಸ್ಥಿತಿ ಸುಧಾರಿಸಲು ಡಾ. ಮನಮೋಹನ್ ಸಿಂಗ್ ಕೊಡುಗೆ ನೀಡಿದ್ದರು. ಸಿಎಂ ಭಾಷಣದ ಆರಂಭದಲ್ಲಿ ಡಾ. ಮನಮೋಹನ್ ಸಿಂಗ್ ಬಗ್ಗೆ ಹೇಳಿದರು. ಬಳಿಕ ಬಿಜೆಪಿಯವರ ಪ್ರಚೋದನೆಯಿಂದ ಮನಮೋಹನ್ ಸಿಂಗ್ ಏನು ಕೊಟ್ಟರೆಂದು ಸಿಎಂ ಬಸವರಾಜ ಬೊಮ್ಮಾಯಿ ಕೇಳಿದರು. ಅವರ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಜಿಎಸ್​ಟಿ, ಆಧಾರ್ ಬಂದಿದ್ದೇ ಅವರ ಅವಧಿಯಲ್ಲಿ ಎಂದು ಕುಮಾರಸ್ವಾಮಿ ಹೇಳಿದರು.

ಕೊವಿಡ್‌ನಿಂದ ಮೃತಪಟ್ಟವರಿಗೆ 1 ಲಕ್ಷ ಕೊಡ್ತೀವಿ ಎಂದು ಹೇಳಿದಿರಿ. ಆದರೆ, ಯಡಿಯೂರಪ್ಪ ಘೋಷಿಸಿದ್ದ ಯೋಜನೆಗೆ ಮಾರ್ಗಸೂಚಿಯನ್ನು ರೂಪಿಸಿಲ್ಲ ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಟೀಕಿಸಿದರು. ಇದಕ್ಕೆ ಕಂದಾಯ ಇಲಾಖೆ ಸಚಿವ ಆರ್. ಅಶೋಕ್ ಸ್ಪಷ್ಟನೆ ನೀಡಿ, ಕೇಂದ್ರ ಸರ್ಕಾರವೂ ಇದೇ ಯೋಜನೆಯನ್ನು ಘೋಷಿಸಿದೆ. ಎಲ್ಲರಿಗೂ ಹಣ ಸಿಗುತ್ತದೆ ಎಂದರು.

ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಆರ್​ಎಸ್​ಎಸ್​ ಆರ್ಥಿಕವಾಗಿ ಸದೃಢವಾಗಿದೆ: ಕುಮಾರಸ್ವಾಮಿ ಆರೋಪ

(HD Kumaraswamy Praises Former PM Manmohan Singh in Assembly Session over GST and Aadhar Card Implementation)

Published On - 6:38 pm, Mon, 20 September 21