ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಆರ್ಎಸ್ಎಸ್ ಆರ್ಥಿಕವಾಗಿ ಸದೃಢವಾಗಿದೆ: ಕುಮಾರಸ್ವಾಮಿ ಆರೋಪ
ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಬಯಸುವ ಅಭ್ಯರ್ಥಿಗಳಿಗೆ ಕೆಲವು ಟಾಸ್ಕ್ ನೀಡಿ ಪರೀಕ್ಷಿಸಲಾಗುವುದು ಎಂದು ಸಹ ಅವರು ತಿಳಿಸಿದರು.
ಬೆಂಗಳೂರು: ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಆರ್ಎಸ್ಎಸ್ ಆರ್ಥಿಕವಾಗಿ ಸದೃಢವಾಗಿದೆ. ಇದು ನನ್ನ ಅಧ್ಯಯನದಲ್ಲಿ ತಿಳಿದುಬಂದಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಜೆಡಿಎಸ್ ಪಕ್ಷದ 30 ಜಿಲ್ಲಾ ಘಟಕಗಳ ಅಧ್ಯಕ್ಷರ ಮತ್ತು ಶಾಸಕರ ಸಭೆ ಕರೆದಿದ್ದೇವೆ. ದೇವೆಗೌಡರ ಮಾರ್ಗದರ್ಶನದಲ್ಲಿ ಪಕ್ಷದ ಸಂಘಟನೆಯ ಬಗ್ಗೆ ಪ್ರಸ್ತಾಪ ಮಾಡಿದ್ದೇವೆ. ಇದೇ ತಿಂಗಳು 28,29 ರಂದು ಮುಂದಿನ ಚುನಾವಣೆಯ ಅಭ್ಯರ್ಥಿಗಳಿಗೆ ಕಾರ್ಯಾಗಾರ ನಡೆಸಲಾಗುವುದು. ಕಾರ್ಯಾಗಾರದಲ್ಲಿ ಅಭ್ಯರ್ಥಿಗಳಿಗೆ ಕೆಲ ಟಾಸ್ಕ್ ನೀಡಲಾಗುವುದು. ಈಗ ಅಭ್ಯರ್ಥಿ ಅಂತಿಮವಾಗಿದ್ದರೂ ಟಾಸ್ಕ್‌ನಲ್ಲಿ ತೇರ್ಗಡೆಯಾಗದಿದ್ದರೆ ಅಭ್ಯರ್ಥಿಯೇ ಬದಲಾಗಬಹುದು. ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸಲು ಕಾರ್ಯಕ್ರಮ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ:
ಮಂಡ್ಯದಲ್ಲಿ 29 ಸಾಕು ಪ್ರಾಣಿಗಳ ನಿಗೂಢ ಸಾವು! ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭೇಟಿ
ಹಿಂದಿ ದಿವಸ್ ವಿರೋಧಿಸಿ ಜೆಡಿಎಸ್ ಪ್ರತಿಭಟನೆ; ಸೆ.14 ಕನ್ನಡ ದಿನವನ್ನಾಗಿ ಘೋಷಿಸುವಂತೆ ಕರವೇ ಕಾರ್ಯಕರ್ತರ ಆಗ್ರಹ
(JDS Chief HD Kumaraswamy accused RSS economic status increased after BJP government formed)