ಬ್ರಿಟನ್ನಿಂದ ಬಂದವರನ್ನು ಇಂದು ಸಂಜೆಯೊಳಗೆ ಪತ್ತೆ ಹಚ್ಚಲಾಗುವುದು: ಸಚಿವ ಡಾ. ಕೆ. ಸುಧಾಕರ್
ಜನವರಿ 2ರಿಂದ ನಮ್ಮ ರಾಜ್ಯದ 5 ಜಿಲ್ಲೆಯಲ್ಲಿ ಲಸಿಕೆಯ ಡ್ರೈ ರನ್ ಅಂದರೆ ಮಾಕ್ ಟ್ರಯಲ್ಗಳನ್ನು ಮಾಡುತ್ತೇವೆ. ಅಧಿಕೃತವಾಗಿ ಲಸಿಕೆ ನೀಡುವ ಮುನ್ನ ನಮ್ಮ ಸಿದ್ಧತೆಗಳು ಸರಿಯಾಗಿ ಇದೆಯೇ ಎಂಬ ಎಲ್ಲಾ ಅಂಶಗಳನ್ನು ಪರೀಕ್ಷೆ ಮಾಡುವುದಕ್ಕೆ ಇದನ್ನು ಅಳವಡಿಕೆ ಮಾಡಿಕೊಳ್ಳುತ್ತಿದ್ದೇವೆ ಎಂದು ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಬೆಂಗಳೂರು: ನವೆಂಬರ್ 25 ರಿಂದ ನಿನ್ನೆ ತನಕ ಒಟ್ಟು 5,068 ಜನ ಬ್ರಿಟನ್ನಿಂದ ಕರ್ನಾಟಕ್ಕೆ ಬಂದಿದ್ದಾರೆ. ಆ ಪೈಕಿ ಬಿಬಿಎಂಪಿ ವ್ಯಾಪ್ತಿಯ 70 ಮತ್ತು ಬೇರೆಡೆಯ 5 ಜನ ಸೇರಿ ಒಟ್ಟು 75 ಜನರು ಪತ್ತೆಯಾಗಿಲ್ಲ. ಅವರಿಗಾಗಿ ಹುಡುಕಾಟ ನಡೆಯುತ್ತಿದ್ದು, ಸಂಜೆಯೊಳಗೆ ಅವರನ್ನೆಲ್ಲಾ ಪತ್ತೆ ಮಾಡುವುದಾಗಿ ಎಂದು ಗೃಹ ಇಲಾಖೆ ಆಶ್ವಾಸನೆ ನೀಡಿದೆ. ಸದ್ಯಕ್ಕೆ 7 ಜನರಲ್ಲಿ ರೂಪಾಂತರಗೊಂಡ ಕೊರೊನಾ ವೈರಾಣು ಧೃಡವಾಗಿದ್ದು, ನಿಗಾ ವಹಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಕೊರೊನಾ ಲಸಿಕೆ ವಿತರಣೆಗೆ ರಾಜ್ಯ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ನಾಳೆ ಶಿವಮೊಗ್ಗ, ಮೈಸೂರು, ಕಲಬುರ್ಗಿ, ಬೆಳಗಾವಿ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಕೊರೊನಾ ಲಸಿಕೆ ವಿತರಣೆಯ ಅಣಕು ಅಭಿಯಾನ ನಡೆಯಲಿದೆ ಎಂದು ಡಾ.ಕೆ. ಸುಧಾಕರ್ ಹೇಳಿಕೆ ನೀಡಿದ್ದಾರೆ.
ಯು.ಕೆಯಿಂದ ಬಂದಿರುವ 33 ಜನರಲ್ಲಿ ಆರ್ಟಿಪಿಸಿಆರ್ನಲ್ಲಿ ಪಾಸಿಟಿವ್ ಬಂದಿದೆ ಮತ್ತು ಇವರ ಜೊತೆಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 5 ಮಂದಿಗೆ ಪಾಸಿಟಿವ್ ಬಂದಿದ್ದು, ಒಟ್ಟಾರೆ 38 ಜನರಿಗೆ ಪಾಸಿಟಿವ್ ಬಂದಿದೆ. ಹೀಗಾಗಿ ನಿಮಾನ್ಸ್ನಲ್ಲಿ ಅವರಿಗೆ ಟೆಸ್ಟ್ ಮಾಡಿದ್ದು, 7 ಜನರಲ್ಲಿ ರೂಪಾಂತರ ವೈರಾಣು ಧೃಡಪಟ್ಟಿದೆ ಎಂದು ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಜನವರಿ 2ರಿಂದ ನಮ್ಮ ರಾಜ್ಯದ 5 ಜಿಲ್ಲೆಯಲ್ಲಿ ಲಸಿಕೆಯ ಡ್ರೈ ರನ್ ಅಂದರೆ ಮಾಕ್ ಟ್ರಯಲ್ಗಳನ್ನು ಮಾಡುತ್ತೇವೆ. ಅಧಿಕೃತವಾಗಿ ಲಸಿಕೆ ನೀಡುವ ಮುನ್ನ ನಮ್ಮ ಸಿದ್ಧತೆಗಳು ಸರಿಯಾಗಿ ಇದೆಯೇ ಎಂಬ ಎಲ್ಲಾ ಅಂಶಗಳನ್ನು ಪರೀಕ್ಷೆ ಮಾಡುವುದಕ್ಕೆ ಇದನ್ನು ಅಳವಡಿಕೆ ಮಾಡಿಕೊಳ್ಳುತ್ತಿದ್ದೇವೆ ಎಂದು ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಕರ್ನಾಟಕದಲ್ಲಿ ಸಿದ್ಧತೆ ಚೆನ್ನಾಗಿದೆ ಈ ನಿಟ್ಟಿನಲ್ಲಿ 5 ಜಿಲ್ಲೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ಈ ಮೂರು ವ್ಯವಸ್ಥೆಗಳಲ್ಲಿ ನಿಗದಿ ಪಡಿಸಿರುವ ಆರೋಗ್ಯ ಸಿಬ್ಬಂದಿಗಳೇಲ್ಲರನ್ನು ಸೇರಿಸಿ ಕನಿಷ್ಟ ಒಂದೊಂದು ವ್ಯವಸ್ಥೆಯಲ್ಲಿ 25 ಜನರಿಗೆ ಲಸಿಕೆ ಕೊಡುವ ತಯಾರಿ ನಡೆಸಿದ್ದು, ಈ ಬಗ್ಗೆ ಮಾಹಿತಿ ಜನರ ಮೊಬೈಲ್ಗಳಿಗೆ ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಲಸಿಕೆ ಬಂದ ಕೂಡಲೇ ಆರಾಮವಾಗುತ್ತದೆ. ಎಲ್ಲರಿಗೂ ಹಂತ ಹಂತವಾಗಿ ಲಸಿಕೆ ನೀಡಿ ಕರ್ನಾಟಕವನ್ನು ಕೊರೊನಾ ಮುಕ್ತ ಮಾಡಲು ಕಾರ್ಯ ಪ್ರವೃತ್ತವಾಗುತ್ತಿದ್ದೇವೆ.ಈಗಾಗಲೇ ಅನುಭವಿ ಮತ್ತು ಪರಿಣಿತರಾಗಿರುವ 30-40 ಜನರ ವಿಷನ್ ಟೀಂ ಸಜ್ಜಾಗಿದ್ದು, ಇವರೊಂದಿಗೆ ಇಂದು ಮೊದಲನೇ ಸಭೆಯನ್ನು ವಿಧಾನಸೌಧದಲ್ಲಿ ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಜನರಿಗೆ ಕೈಗೆಟಕುವ, ಉತ್ತಮ ಆರೋಗ್ಯ ವ್ಯವಸ್ಥೆ ಸಿಗುವಂತೆ ಮಾಡುವುದು ಈ ಸಭೆಯ ಉದ್ದೇಶವಾಗಿದೆ. ಒಟ್ಟಾರೆಯಾಗಿ ಹೊಸ ಮಾದರಿಯ ಆರೋಗ್ಯ ನೀತಿ ಬರಲಿದೆ ಎಂದು ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಕೊರೊನಾ 2ನೇ ಅಲೆ: ಬ್ರಿಟನ್ನಲ್ಲಿ ಮತ್ತೆ ಲಾಕ್ಡೌನ್.. ಯುರೋಪಿಯನ್ ದೇಶಗಳಿಂದ ಬ್ರಿಟನ್ ವಿಮಾನಗಳಿಗೆ ನಿರ್ಬಂಧ