ಬೆಂಗಳೂರು: ಕೊರೊನಾ ಸೋಂಕಿನ ಮೂರನೇ ಅಲೆಗೆ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕೆಂದು ಚರ್ಚೆ ನಡೆಸಿದ್ದೇವೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿಕೆ ನೀಡಿದ್ದಾರೆ. ಕೊವಿಡ್-19 ಎರಡನೇ ಅಲೆ ಮೊದಲನೇ ಅಲೆಗಿಂತ ಹೆಚ್ಚಿನ ಸಮಸ್ಯೆ ಉಂಟುಮಾಡಿತ್ತು. ಕೊವಿಡ್ ಪ್ರಕರಣಗಳ ಸಂಖ್ಯೆ ಕೂಡ ಅಧಿಕವಾಗಿತ್ತು. ಹೀಗಾಗಿ ಮೂರನೇ ಅಲೆಯನ್ನು ಎದುರಿಸಲು ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಸುಧಾಕರ್ ಮಾಹಿತಿ ನೀಡಿದರು.
ಪ್ರತಿ ಜಿಲ್ಲೆಯಲ್ಲೂ ಆಕ್ಸಿಜನ್ ಪ್ಲಾಂಟ್ ಸ್ಥಾಪಿಸಲಾಗುವುದು. ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲಿ ಬೆಡ್ ಸಂಖ್ಯೆ ಹೆಚ್ಚಳ ಮಾಡಲಾಗುವುದು. 60ರಿಂದ 80 ಬೆಡ್ಗೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಮಕ್ಕಳಿಗೆ ಚಿಕಿತ್ಸೆ ನೀಡಲು ವೈದ್ಯರಿಗೆ ತರಬೇತಿ ನೀಡುತ್ತೇವೆ ಎಂದು ಸುಧಾಕರ್ ತಿಳಿಸಿದ್ದಾರೆ.
ಕೊರೊನಾ 2ನೇ ಅಲೆ ಮೊದಲ ಅಲೆಗಿಂತ ಭಿನ್ನವಾಗಿತ್ತು. ಈಗ ಮೂರನೇ ಅಲೆಗೂ ಮುನ್ನ ಮಂಗಳೂರು, ವಿಜಯಪುರದಲ್ಲಿ ಜಿನೋವಿಕ್ ಲ್ಯಾಬ್ ತೆರೆಯುತ್ತೇವೆ. ಇದರಿಂದ ಕೊವಿಡ್-19 ಟೆಸ್ಟ್ ಮಾಡಲು ಅನುಕೂಲವಾಗಲಿದೆ. ಔಷಧಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಿದ್ಧತೆ ನಡೆಸುತ್ತಿದ್ದೇವೆ. 19ವರ್ಷ ಒಳಗಿನವರಿಗೆ ಯಾವುದಾದರೂ ತೊಂದರೆ ಆದ್ರೆ ಮಕ್ಕಳ ವೈದ್ಯರನ್ನ ಸಂಪರ್ಕ ಮಾಡಬೇಕು ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ನೀಡಿದ್ದಾರೆ.
ಕರ್ನಾಟಕದಲ್ಲಿ ಲಿಪೊಸೋಮಲ್ ಆಂಫೊಟೆರಿಸಿನ್-ಬಿ ಔಷಧದ ಕೊರತೆಯಿದೆ. ಆದರೆ ತಕ್ಷಣಕ್ಕೆ ಬೇಕಾಗುವಷ್ಟು ಇಂಜೆಕ್ಷನ್ ನಮ್ಮಲ್ಲಿದೆ ಎಂದು ಸುಧಾಕರ್ ಮಾಹಿತಿ ನೀಡಿದ್ದಾರೆ. ಸರ್ಜರಿಗೂ ಮೆಡಿಸಿನ್ಗೂ ಯಾವುದೇ ಸಂಬಂಧವಿಲ್ಲ. ಆರಂಭದಲ್ಲಿ ಇಎನ್ಟಿ ತಜ್ಞರನ್ನು ಭೇಟಿ ಮಾಡಬೇಕು. ಬ್ಲ್ಯಾಕ್ ಫಂಗಸ್ ಪ್ರಕರಣ ಹೆಚ್ಚುತ್ತಿರುವ ಕಾರಣ ಕೊವಿಡ್ನಿಂದ ಡಿಸ್ಚಾರ್ಜ್ ಆಗುವವರ ಮೇಲೆ ನಿಗಾ ವಹಿಸಲಾಗುವುದು. ಇಎನ್ಟಿ ತಜ್ಞರು ಮಾನಿಟರಿಂಗ್ ಮಾಡುತ್ತಾರೆ ಎಂದು ಹೇಳಿದ್ದಾರೆ.
ಆಂಫೋಟೆರಿಸಿನ್ ಇಂಜೆಕ್ಷನ್ಗೆ ಪರ್ಯಾಯ ಔಷಧವಿದೆ. ಜೂನ್ 5ರ ವೇಳೆಗೆ ಮತ್ತಷ್ಟು ಔಷಧ ಪೂರೈಕೆಯಾಗಲಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: Karnataka Lockdown: ಜೂನ್ 7ರಂದು ಅನ್ಲಾಕ್ ಮಾಡುವ ಬಗ್ಗೆ ಸುಳಿವು ನೀಡಿದ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ
Unemployment Rate: ಕೊರೊನಾ ಎರಡನೇ ಅಲೆಗೆ ಉದ್ಯೋಗ ಕಳಕೊಂಡ 1 ಕೋಟಿ ಮಂದಿ; ಶೇ 97 ಕುಟುಂಬಗಳ ಆದಾಯ ಇಳಿಕೆ
Published On - 6:39 pm, Tue, 1 June 21