Karnataka Lockdown: ಜೂನ್ 7ರಂದು ಅನ್‌ಲಾಕ್ ಮಾಡುವ ಬಗ್ಗೆ ಸುಳಿವು ನೀಡಿದ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ
ರಾಜ್ಯದಲ್ಲಿ ಒಮ್ಮೆಯೇ ಅನ್‌ಲಾಕ್ ಮಾಡಬೇಕಾ? ಅಥವಾ ಹಂತಹಂತವಾಗಿ ಅನ್‌ಲಾಕ್ ಮಾಡಬೇಕಾ ಎಂದು ಚರ್ಚೆ ಮಾಡಬೇಕಿದೆ. ಚರ್ಚಿಸಿದ ಬಳಿಕವಷ್ಟೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.
ಬೆಂಗಳೂರು: ಜೂನ್ 7ರಂದು ಅನ್‌ಲಾಕ್ ಮಾಡೋದು ಗ್ಯಾರಂಟಿ ಎಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ ಇಂದು (ಜೂನ್ 1) ಹೇಳಿಕೆ ನೀಡಿದ್ದಾರೆ. ಆದರೆ, ಎಷ್ಟು ಮಟ್ಟದಲ್ಲಿ ಅನ್‌ಲಾಕ್ ಮಾಡಬೇಕೆಂದು ಚರ್ಚೆ ನಡೆಸಲಾಗುವುದು. ಚರ್ಚಿಸಿ ಬಳಿಕ ಎಷ್ಟು ಮತ್ತು ಯಾವ ಮಟ್ಟದಲ್ಲಿ ಅನ್‌ಲಾಕ್ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಒಮ್ಮೆಯೇ ಅನ್‌ಲಾಕ್ ಮಾಡಬೇಕಾ? ಅಥವಾ ಹಂತಹಂತವಾಗಿ ಅನ್‌ಲಾಕ್ ಮಾಡಬೇಕಾ ಎಂದು ಚರ್ಚೆ ಮಾಡಬೇಕಿದೆ. ಚರ್ಚಿಸಿದ ಬಳಿಕವಷ್ಟೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.
ಬ್ಲ್ಯಾಕ್ ಫಂಗಸ್ ಸೋಂಕಿಗೆ ಔಷಧ ಕೊರತೆ ಇದೆ ಕರ್ನಾಟಕದಲ್ಲಿ ಈಗ ಆಂಫೊಟೆರಿಸಿನ್ ಕೊರತೆ ಇದೆ. ಬ್ಲ್ಯಾಕ್ ಫಂಗಸ್ ಸೋಂಕಿಗೆ ಔಷಧದ ಕೊರತೆ ಇದೆ. ಔಷಧ ಕೊರತೆ ನೀಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಬೆಂಗಳೂರಲ್ಲಿ ಡಿಸಿಎಂ ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ದಾರೆ. 1 ಲಕ್ಷ ಆಂಫೊಟೆರಿಸಿನ್ಗೆ ಟೆಂಡರ್ ಕರೆದಿದ್ದೇವೆ. ಬೇರೆ ಇಂಜೆಕ್ಷನ್, ಮಾತ್ರೆಗೆ ಆರ್ಡರ್ ಕೊಟ್ಟಿದ್ದೇವೆ. ಆಂಫೊಟೆರಿಸಿನ್ಗಿಂತ ಪರಿಣಾಮಕಾರಿ ಔಷಧ ಇವೆ. ಆದ್ರೆ ಅಡ್ಡಪರಿಣಾಮ ಇರುವುದರಿಂದ ಬಳಸಲಾಗ್ತಿಲ್ಲ ಎಂದು ಅಶ್ವತ್ಥ್ ನಾರಾಯಣ ವಿವರಿಸಿದ್ದಾರೆ.
ಬಾಗಲಕೋಟೆ: ಲಾಕ್‌ಡೌನ್ ತೆರವು ಮಾಡಬಹುದು ರಾಜ್ಯದಲ್ಲಿ ಸಾಧ್ಯವಾದಷ್ಟು ಲಾಕ್‌ಡೌನ್ ತೆರವು ಮಾಡಬೇಕು. ಜೂನ್ 7ರ ನಂತರ ಎಲ್ಲವೂ ನಾರ್ಮಲ್‌ಗೆ ಬರಲಿದೆ ಎಂದು ಇಂದು (ಜೂನ್ 1) ಬಾಗಲಕೋಟೆ ನಗರದಲ್ಲಿ ಸಚಿವ ಮುರುಗೇಶ್ ನಿರಾಣಿ ಹೇಳಿಕೆ ನೀಡಿದ್ದಾರೆ. ಕಲಬುರಗಿ, ಬಾಗಲಕೋಟೆ ಜಿಲ್ಲೆಯಲ್ಲಿ ಲಾಕ್‌ಡೌನ್ ಅಗತ್ಯವಿಲ್ಲ. ಲಾಕ್‌ಡೌನ್ ಅಗತ್ಯವಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಆದರೆ, ಜನ ಏಕಾಏಕಿ ಹೊರಗೆ ಬರದಂತೆ ನಿಯಮ ಮಾಡಬೇಕು. ಮದುವೆ, ಕಾರ್ಯಕ್ರಮಗಳಿಗೆ ನಿಯಮ ಮುಂದುವರಿಸಬೇಕು ಎಂದು ಬಾಗಲಕೋಟೆ ನಗರದಲ್ಲಿ ಸಚಿವ ಮುರುಗೇಶ್ ನಿರಾಣಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Tv9 Digital Live: ಹೊರಗೆ ಬರೋಕೆ ಕೊರೊನಾ ಭಯ, ಮನೇಲಿದ್ರೆ ಹಸಿವಿನ ಹಿಂಸೆ; ಅಡಕತ್ತರಿಯಲ್ಲಿ ದುಡಿದು ತಿನ್ನುವ ಜನ
ಲಾಕ್‌ಡೌನ್ ಮುಗಿದ ನಂತರ ಆರಂಭವಾಗುವ ಸಾರಿಗೆ ಸೇವೆಯಲ್ಲಿ ಲಸಿಕೆ ಪಡೆದ ಸಿಬ್ಬಂದಿಗಳಿಗೆ ಆದ್ಯತೆ: ಡಿಸಿಎಂ ಲಕ್ಷ್ಮಣ ಸವದಿ
Published On - 5:40 pm, Tue, 1 June 21