ನೋಡಿದವರ ಕರುಳು ಹಿಂಡಿದ ಕರುಳಿನ ಕೂಗು, ಅಂಬಾ ಅನ್ನುತ್ತಿದ್ದ ತನ್ನ ಕಂದನಿಗಾಗಿ ಬೊಲೆರೋ ವಾಹನ ಬೆನ್ನಟ್ಟಿದ ತಾಯಿ ಹಸು

ಅದಾಗತಾನೆ ಜನಿಸಿದ ಕರುವನ್ನು ವಾಹನದಲ್ಲಿ ಮನೆಗೆ ತೆಗೆದುಕೊಂಡು ಹೋಗುವ ವೇಳೆ ತನ್ನ ಕರುವಿಗಾಗಿ ಬೊಲೆರೋ ವಾಹನವನ್ನು ತಾಯಿ ಹಸು ಬೆನ್ನಟ್ಟಿದೆ/ ಅಡ್ಡಗಟ್ಟಿದೆ. ತಾಯಿ ಹಸು ಹೀಗೆ... ಸುಮಾರು 5 ಕಿಲೋ ಮೀಟರ್ ವರೆಗೆ ವಾಹನ ಹಿಂಬಾಲಿಸಿದೆ. ವಾಹನ ನಿಲ್ಲಿಸುವಂತೆ ಚಾಲಕನತ್ತ ಮುಖ ಮಾಡಿ ರೋದಿಸಿದ್ದಂತೂ ನೋಡುಗರಿಗೆ ಸಾಕುಸಾಕಾಯಿತು.

ನೋಡಿದವರ ಕರುಳು ಹಿಂಡಿದ ಕರುಳಿನ ಕೂಗು, ಅಂಬಾ ಅನ್ನುತ್ತಿದ್ದ ತನ್ನ ಕಂದನಿಗಾಗಿ ಬೊಲೆರೋ ವಾಹನ ಬೆನ್ನಟ್ಟಿದ ತಾಯಿ ಹಸು
ಅಂಬಾ ಅನ್ನುತ್ತಿದ್ದ ತನ್ನ ಕಂದನಿಗಾಗಿ ಬೊಲೆರೋ ವಾಹನ ಬೆನ್ನಟ್ಟಿದ ತಾಯಿ ಹಸು!
Edited By:

Updated on: Sep 30, 2023 | 9:30 AM

ಬಾಗಲಕೋಟೆ, ಸೆಪ್ಟೆಂಬರ್​​ 30: ಮುಚಖಂಡಿ ಗ್ರಾಮದ ರಾಜು ಕಾಳೆ ಎಂಬುವವರ ಹಸು ಕರುವಿಗೆ ಜನ್ಮ ನೀಡಿದ ಬಳಿಕ ಅನಾರೋಗ್ಯಕ್ಕೆ ತುತ್ತಾಗಿತ್ತು. ಹೀಗಾಗಿ ಗ್ರಾಮದ ಒಂದಷ್ಟು ಯುವಕರು ಸೇರಿ ಕರುವಿನ ಜೊತೆಗೆ ಹಸುವನ್ನು ಬಾಗಲಕೋಟೆ ನಗರದ ನವನಗರದಲ್ಲಿರುವ ಪಶು ಆಸ್ಪತ್ರೆಗೆ ಕರೆದೊಯ್ದಿದ್ದರು. ಆಸ್ಪತ್ರೆಯಿಂದ ವಾಪಸ್ ಬರುವ ವೇಳೆ ಯುವಕರು ಕರುವನ್ನು ಬೊಲೆರೋ ವಾಹನದಲ್ಲಿ ವಾಪಸ್​​ ಕರೆತರುತ್ತಿದ್ದರು. ಆ ವೇಳೆ ತಾಯಿ-ಮಗುವಿನ ಅಂದರೆ ಹಸು ಮತ್ತು ಕರುವಿನ ಮನಮಿಡಿಯುವ ದೃಶ್ಯ ಕಂಡುಬಂದಿದೆ. ಆ ಕರುಳಿನ ಕೂಗು ಕಂಡು-ಕೇಳಿದವರ ಕರುಳು ಹಿಂಡುವಂತಾಗಿದೆ! ಅಂಬಾ ಅನ್ನುತ್ತಿದ್ದ ತನ್ನ ಕಂದನಿಗಾಗಿ ತಾಯಿ ಹಸು ಬೊಲೆರೋ ವಾಹನ ಬೆನ್ನಟ್ಟಿದ್ದು ಕಂಡವರ ಕರುಳು ಹಿಂಡಿದೆ.

ಅದಾಗತಾನೆ ಹುಟ್ಟಿದ ಕರುವನ್ನು ವಾಹನದಲ್ಲಿ ಮನೆಗೆ ತೆಗೆದುಕೊಂಡು ಹೋಗುವ ವೇಳೆ ತನ್ನ ಕರುವಿಗಾಗಿ ಬೊಲೆರೋ ವಾಹನವನ್ನು ತಾಯಿ ಹಸು ಬೆನ್ನಟ್ಟಿದೆ/ ಅಡ್ಡಗಟ್ಟಿದೆ. ತಾಯಿ ಹಸು ಹೀಗೆ… ಸುಮಾರು 5 ಕಿಲೋ ಮೀಟರ್ ವರೆಗೆ ವಾಹನ ಹಿಂಬಾಲಿಸಿದೆ. ವಾಹನ ನಿಲ್ಲಿಸುವಂತೆ ಚಾಲಕನತ್ತ ಮುಖ ಮಾಡಿ ರೋದಿಸಿದ್ದಂತೂ ನೋಡುಗರಿಗೆ ಸಾಕುಸಾಕಾಯಿತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:26 am, Sat, 30 September 23