ಬೆಂಗಳೂರು ಪ್ರೆಸ್​ ಕ್ಲಬ್​ ಆವರಣದಲ್ಲಿ ಬಿರುಗಾಳಿ ಮಳೆಗೆ 8 ಮರ ಧರೆಗೆ

|

Updated on: May 29, 2020 | 6:21 PM

ಬೆಂಗಳೂರು: ನಾಲ್ಕನೆಯ ದಿನವಾದ ಇಂದೂ ನಗರದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದೆ. ಪ್ರತಿಷ್ಠಿತ ಪ್ರೆಸ್​ ಕ್ಲಬ್​ ಆವರಣದಲ್ಲಿ 8 ಮರಗಳು ಧರೆಗುರುಳಿವೆ. ಮರಗಳು ಉರುಳಿದ್ದರಿಂದ ಮೇಜು, ಕುರ್ಚಿಗಳಿಗೆ ಹಾನಿಯಾಗಿದೆ. ಮರ ಬಿದ್ದಿದ್ದರಿಂದ ಪ್ರೆಸ್ ​ಕ್ಲಬ್​ ಕಟ್ಟಡಕ್ಕೂ ಭಾಗಶಃ ಹಾನಿಯಾಗಿದೆ. ಮಲ್ಲೇಶ್ವರಂ ಮತ್ತು ಯಶವಂತಪುರ ಸುತ್ತ ಮುತ್ತ ಜೋರು ಗಾಳಿ ಮತ್ತು ಮಳೆಯಾಗುತ್ತಿದೆ. ಭಾರಿ ಬಿರುಗಾಳಿಯ ಹೊಡೆತಕ್ಕೆ ಮಲ್ಲೇಶ್ವರಂ ರಸ್ತೆಯಲ್ಲಿ ಮರದ ರೆಂಬೆಗಳು ಮುರಿದುಬೀಳುತ್ತಿವೆ. ರಸ್ತೆಯಲ್ಲಿ ರೆಂಬೆ ಬಿದ್ದಿರುವುದರಿಂದ ಸಂಚಾರಕ್ಕೆ ಅಡ್ಡಿಯಾಗಿದೆ. ನಿಂತಲ್ಲೇ ನಿಂತಿರುವ ವಾಹನ ಸವಾರರು […]

ಬೆಂಗಳೂರು ಪ್ರೆಸ್​ ಕ್ಲಬ್​ ಆವರಣದಲ್ಲಿ ಬಿರುಗಾಳಿ ಮಳೆಗೆ 8 ಮರ ಧರೆಗೆ
Follow us on

ಬೆಂಗಳೂರು: ನಾಲ್ಕನೆಯ ದಿನವಾದ ಇಂದೂ ನಗರದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದೆ. ಪ್ರತಿಷ್ಠಿತ ಪ್ರೆಸ್​ ಕ್ಲಬ್​ ಆವರಣದಲ್ಲಿ 8 ಮರಗಳು ಧರೆಗುರುಳಿವೆ. ಮರಗಳು ಉರುಳಿದ್ದರಿಂದ ಮೇಜು, ಕುರ್ಚಿಗಳಿಗೆ ಹಾನಿಯಾಗಿದೆ. ಮರ ಬಿದ್ದಿದ್ದರಿಂದ ಪ್ರೆಸ್ ​ಕ್ಲಬ್​ ಕಟ್ಟಡಕ್ಕೂ ಭಾಗಶಃ ಹಾನಿಯಾಗಿದೆ.

ಮಲ್ಲೇಶ್ವರಂ ಮತ್ತು ಯಶವಂತಪುರ ಸುತ್ತ ಮುತ್ತ ಜೋರು ಗಾಳಿ ಮತ್ತು ಮಳೆಯಾಗುತ್ತಿದೆ. ಭಾರಿ ಬಿರುಗಾಳಿಯ ಹೊಡೆತಕ್ಕೆ ಮಲ್ಲೇಶ್ವರಂ ರಸ್ತೆಯಲ್ಲಿ ಮರದ ರೆಂಬೆಗಳು ಮುರಿದುಬೀಳುತ್ತಿವೆ. ರಸ್ತೆಯಲ್ಲಿ ರೆಂಬೆ ಬಿದ್ದಿರುವುದರಿಂದ ಸಂಚಾರಕ್ಕೆ ಅಡ್ಡಿಯಾಗಿದೆ. ನಿಂತಲ್ಲೇ ನಿಂತಿರುವ ವಾಹನ ಸವಾರರು ಪರದಾಡುತ್ತಿದ್ದಾರೆ.

 

Published On - 6:10 pm, Fri, 29 May 20