AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರುನಾಡಿಗೆ ಕಂಟಕ: ಗಡಿಯಲ್ಲಿ ಖಾಕಿ ಕಣ್ಣಿಗೆ ಬೀಳದಂತೆ ಬರ್ತಿದ್ದಾರೆ ನುಸುಳುಕೋರರು!

ಸಮುದ್ರವನ್ನ ದಾಟಿ ಬಂದಿರೋ ಕೊರೊನಾಗೆ ಗಡಿಗಳು ಲೆಕ್ಕವೇ ಇಲ್ಲ. ಲಾಕ್​ಡೌನ್ ಮಾಡಿದ್ರೂ ತನ್ನ ಕೇಕೆ ನಿಲ್ಲಿಸ್ತಿಲ್ಲ. ಅಧಿಕಾರಿಗಳು ಎಷ್ಟೇ ಅಲರ್ಟ್ ಆಗಿದ್ರೂ ಮಹಾಮಾರಿಗೆ ಬ್ರೇಕ್ ಬಿದ್ದಿಲ್ಲ. ಇಂತಹ ಸಮಯದಲ್ಲಿ ನುಸುಳುಕೋರರು ತಮ್ಮ ನರಿ ಬುದ್ಧಿಯನ್ನ ಬಿಚ್ಚಿಡ್ತಿದ್ದಾರೆ..! ಹೊಟ್ಟೆಪಾಡಿಗಾಗಿ ದೂರದೂರಿಗೆ ಪಯಣ ಬೆಳೆಸಿದ್ದ ಜನ ಕೊರೊನಾದಿಂದ ನಡುಗಿ ಹೋಗಿದ್ರು. ಲಾಕ್​​ಡೌನ್ ಹೊಡೆತದಿಂದ ಪರದಾಡಿದ್ರು. ಆದ್ರೆ, ವಾಪಸ್ ಊರು ಸೇರಲು ಮಾತ್ರ ಕೆಲವ್ರು ಕಳ್ ದಾರಿ ಹಿಡಿದಿದ್ದಾರೆ. ಇವ್ರಿಂದ ಕರುನಾಡಿಗೆ ಕಂಟಕ ಎದುರಾಗಿದೆ. ಮಹಾರಾಷ್ಟ್ರ ಲಿಂಕ್ ನಡುವೆ ಬೀದರ್​ಗೆ ಸಂಕಟ! […]

ಕರುನಾಡಿಗೆ ಕಂಟಕ: ಗಡಿಯಲ್ಲಿ ಖಾಕಿ ಕಣ್ಣಿಗೆ ಬೀಳದಂತೆ ಬರ್ತಿದ್ದಾರೆ ನುಸುಳುಕೋರರು!
ಸಾಧು ಶ್ರೀನಾಥ್​
| Updated By: |

Updated on: May 30, 2020 | 6:45 AM

Share

ಸಮುದ್ರವನ್ನ ದಾಟಿ ಬಂದಿರೋ ಕೊರೊನಾಗೆ ಗಡಿಗಳು ಲೆಕ್ಕವೇ ಇಲ್ಲ. ಲಾಕ್​ಡೌನ್ ಮಾಡಿದ್ರೂ ತನ್ನ ಕೇಕೆ ನಿಲ್ಲಿಸ್ತಿಲ್ಲ. ಅಧಿಕಾರಿಗಳು ಎಷ್ಟೇ ಅಲರ್ಟ್ ಆಗಿದ್ರೂ ಮಹಾಮಾರಿಗೆ ಬ್ರೇಕ್ ಬಿದ್ದಿಲ್ಲ. ಇಂತಹ ಸಮಯದಲ್ಲಿ ನುಸುಳುಕೋರರು ತಮ್ಮ ನರಿ ಬುದ್ಧಿಯನ್ನ ಬಿಚ್ಚಿಡ್ತಿದ್ದಾರೆ..!

ಹೊಟ್ಟೆಪಾಡಿಗಾಗಿ ದೂರದೂರಿಗೆ ಪಯಣ ಬೆಳೆಸಿದ್ದ ಜನ ಕೊರೊನಾದಿಂದ ನಡುಗಿ ಹೋಗಿದ್ರು. ಲಾಕ್​​ಡೌನ್ ಹೊಡೆತದಿಂದ ಪರದಾಡಿದ್ರು. ಆದ್ರೆ, ವಾಪಸ್ ಊರು ಸೇರಲು ಮಾತ್ರ ಕೆಲವ್ರು ಕಳ್ ದಾರಿ ಹಿಡಿದಿದ್ದಾರೆ. ಇವ್ರಿಂದ ಕರುನಾಡಿಗೆ ಕಂಟಕ ಎದುರಾಗಿದೆ.

ಮಹಾರಾಷ್ಟ್ರ ಲಿಂಕ್ ನಡುವೆ ಬೀದರ್​ಗೆ ಸಂಕಟ! ಗಡಿ ಜಿಲ್ಲೆ ಬೀದರ್​ನಲ್ಲಿ ಕೊರೊನಾ ಕೇಕೆ ಹಾಕ್ತಿದೆ. ಈಗಾಗಲೇ ಮಹಾರಾಷ್ಟ್ರ ಲಿಂಕ್​ಗೆ ತತ್ತರಿಸಿ ಹೋಗಿದೆ. ತೆಲಂಗಾಣ ಮತ್ತು ಮಹಾರಾಷ್ಟ್ರದಿಂದ 8,000 ಜನ ವಾಪಸಾಗಿದ್ದಾರೆ. ಇಂತಹ ಟೈಮ್​ನಲ್ಲಿ ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದ ನೂರಾರು ಜನ ಕಳ್ಳದಾರಿ ಮೂಲಕ ಜನ ಬೀದರ್​ಗೆ ಎಂಟ್ರಿ ಕೊಟ್ಟಿದ್ದಾರೆ.

ಚೆಕ್​ಪೋಸ್ಟ್ ಹಾಕಿದ್ರೂ ಪ್ರಯೋಜನ ಆಗ್ತಿಲ್ವಾ..?  ಆಂಧ್ರಪ್ರದೇಶದ ಗಡಿ ಭಾಗದಲ್ಲಿ ಕಳ್ಳ ದಾರಿಗಳ ಮೂಲಕ ಆಂಧ್ರದ ಜನ ಚಿತ್ರದುರ್ಗ ಜಿಲ್ಲೆಗೆ ನುಗ್ತಿದ್ದಾರೆ. ಚಳ್ಳಕೆರೆ ತಾಲೂಕಿನ ಪಾತಪ್ಪನಗುಡಿ, ನಾಗಪ್ಪನಹಳ್ಳಿ, ಪುಟ್ಲಾರಹಳ್ಳಿ, ಜಾಜೂರಿನ ಕಾಲು ದಾರಿಗಳಲ್ಲಿ ಪೊಲೀಸರ ಕಣ್ತಪ್ಪಿಸಿ ಜನ ಅಕ್ರಮವಾಗಿ ಪ್ರವೇಶ ಮಾಡ್ತಿದ್ದಾರೆ. ಹೀಗಾಗಿ, ಕೊರೊನಾ ಸೋಂಕು ಹರಡುವ ಆತಂಕ ಹೆಚ್ಚಾಗಿದೆ.

ಕೋಲಾರ ಜಿಲ್ಲೆಗೂ ಅಕ್ರಮ ಪ್ರವೇಶ: ಕೋಲಾರ ಜಿಲ್ಲೆಗೆ ದಿನದಿಂದ ದಿನಕ್ಕೆ ಕೊರೊನಾ ಆತಂಕ ಎದುರಾಗುತ್ತಿದೆ. ಹೊರ ರಾಜ್ಯದಿಂದ ಬಂದ ವಲಸಿಗರಿಂದಲೇ ಹೆಚ್ಚಾಗಿ ಕೊರೊನಾ ಕಾಣಿಸಿಕೊಳ್ಳುತ್ತಿದೆ. ಇದ್ರಿಂದ ಕೋಲಾರದ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಹೀಗಿದ್ರೂ ತಮಿಳುನಾಡಿನ ಕೆಲ ಕಾಲು ದಾರಿಗಳಿಂದ ಕರುನಾಡಿಗೆ ಆಗಮಿಸ್ತಿದ್ದಾರೆ. ವಿಶೇಷವಾಗಿ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕನುಮನಹಳ್ಳಿ ಹಾಗೂ ಕೆಜಿಎಫ್ ತಾಲೂಕಿನ ವಿ.ಕೋಟ ಗಡಿಯಲ್ಲಿ ಅಕ್ರಮವಾಗಿ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಿಂದ ಪ್ರವೇಶ ಮಾಡುತ್ತಿದ್ದಾರೆ.

ಪೊಲೀಸರ ಕಣ್ಣಿಗೆ ಬೀಳದಂತೆ ಬರ್ತಿದ್ದಾರೆ ಜನ..! ಬಳ್ಳಾರಿ ಹಾಗೂ ಆಂಧ್ರ ಗಡಿಭಾಗಗಳಲ್ಲಿ ಚೆಕ್​ಪೋಸ್ಟ್​​ಗಳನ್ನ ನಿರ್ಮಾಣ ಮಾಡ್ಲಾಗಿದೆ. ಪೊಲೀಸರು ಕೂಡ ಫುಲ್ ಅಲರ್ಟ್ ಆಗಿದ್ದಾರೆ. ಹೀಗಿದ್ರೂ ಬಳ್ಳಾರಿ ಜಿಲ್ಲೆಗೆ ಆಂಧ್ರದ ಗ್ರಾಮಗಳಿಂದ ಪ್ರತಿದಿನ ನೂರಾರು ಜನ ಕದ್ದುಮುಚ್ಚಿ ಬರ್ತಿದ್ದಾರೆ.

ಇತ್ತ, ತುಮಕೂರು ಜಿಲ್ಲೆಯ ಗಡಿಭಾಗದಲ್ಲೂ ನುಸುಳುಕೋರರ ಕಾಟ ಹೆಚ್ಚಾಗಿದೆ. ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜನ ಕಳ್ಳದಾರಿಗಳ ಮೂಲಕ ಎಂಟ್ರಿ ಕೋಡ್ತಿದ್ದಾರೆ‌. ರಸ್ತೆಗಳಿಗೆ ಬೇಲಿ ಹಾಕಿ ಹಾಕಿದ್ದರೂ ಜನ ಅದನ್ನ ದಾಟಿ ಬರ್ತಿದ್ದಾರೆ. ಒಟ್ನಲ್ಲಿ, ಕ್ವಾರಂಟೈನ್ ಭಯವೋ ಏನೋ. ಕೆಲವರು ಅಡ್ಡದಾರಿ ಹಿಡಿದು ಕರುನಾಡಿಗೆ ಎಂಟ್ರಿ ಕೊಡ್ತಿದ್ದಾರೆ. ಇವರಿಂದ ಕರುನಾಡಿಗೆ ಕಂಟಕವೂ ಎದುರಾಗಿದೆ.