ಸಂಡೇ ಕರ್ಫ್ಯೂ: ಮನೆಯಲ್ಲೇ ಇರಿ, ಹೊರಗೆ ಹೆಜ್ಜೆ ಇಟ್ರೆ ಶಿಕ್ಷೆ ಗ್ಯಾರಂಟಿ!
ಬೆಂಗಳೂರು: ಬಂದ್.. ಬಂದ್.. ಬಂದ್.. ಇಂದು ಸಂಜೆಯಿಂದ ಕರುನಾಡಿಗೆ ಕರುನಾಡೇ ಕಂಪ್ಲೀಟ್ ಬಂದ್.. ಒಂದಲ್ಲ.. ಎರಡಲ್ಲ 36 ಗಂಟೆ ಕಾಲ ರಾಜ್ಯದ ಜನರಿಗೆ ಮತ್ತೆ ದಿಗ್ಬಂಧನ ಫಿಕ್ಸ್.. ಸೋಮವಾರ ಬೆಳಗ್ಗೆ ತನಕ ಯಾರೂ ಹೊರಗೆ ಹೆಜ್ಜೆ ಇಡಂಗಿಲ್ಲ. ಕಮಕ್ ಕಿಮಕ್ ಅನ್ನಂಗಿಲ್ಲ. ಹಗಲು ಸರಿದು ಕತ್ತಲು ಆವರಿಸೋ ವೇಳೆಗೆ ಎಲ್ಲವೂ ಲಾಕ್ ಆಗಲಿದೆ. ಇಡೀ ಕರುನಾಡಲ್ಲಿ ಲಾಕ್ಡೌನ್ 4.O ಜೊತೆಗೆ ಸೆಕೆಂಡ್ ಟೈಮ್ 144 ಸೆಕ್ಷನ್ ಜಾರಿಯಾಗ್ತಿದೆ. ಸೆಕೆಂಡ್ ಟೈಂ ಸಂಡೇ ಕರ್ಫ್ಯೂಗೆ ಕರುನಾಡು ಅಲರ್ಟ್..! ಯೆಸ್.. […]
ಬೆಂಗಳೂರು: ಬಂದ್.. ಬಂದ್.. ಬಂದ್.. ಇಂದು ಸಂಜೆಯಿಂದ ಕರುನಾಡಿಗೆ ಕರುನಾಡೇ ಕಂಪ್ಲೀಟ್ ಬಂದ್.. ಒಂದಲ್ಲ.. ಎರಡಲ್ಲ 36 ಗಂಟೆ ಕಾಲ ರಾಜ್ಯದ ಜನರಿಗೆ ಮತ್ತೆ ದಿಗ್ಬಂಧನ ಫಿಕ್ಸ್.. ಸೋಮವಾರ ಬೆಳಗ್ಗೆ ತನಕ ಯಾರೂ ಹೊರಗೆ ಹೆಜ್ಜೆ ಇಡಂಗಿಲ್ಲ. ಕಮಕ್ ಕಿಮಕ್ ಅನ್ನಂಗಿಲ್ಲ. ಹಗಲು ಸರಿದು ಕತ್ತಲು ಆವರಿಸೋ ವೇಳೆಗೆ ಎಲ್ಲವೂ ಲಾಕ್ ಆಗಲಿದೆ. ಇಡೀ ಕರುನಾಡಲ್ಲಿ ಲಾಕ್ಡೌನ್ 4.O ಜೊತೆಗೆ ಸೆಕೆಂಡ್ ಟೈಮ್ 144 ಸೆಕ್ಷನ್ ಜಾರಿಯಾಗ್ತಿದೆ.
ಸೆಕೆಂಡ್ ಟೈಂ ಸಂಡೇ ಕರ್ಫ್ಯೂಗೆ ಕರುನಾಡು ಅಲರ್ಟ್..! ಯೆಸ್.. ಕೊರೊನಾ ಒದ್ದೋಡಿಸೋಕೆ ಒಂದಿಲ್ಲೊಂದು ತಂತ್ರ.. ಪ್ರತಿತಂತ್ರ ಪ್ರಯೋಗವಾಗ್ತಾನೆ ಇದೆ.. ಇತ್ತ ಲಾಕ್ಡೌನ್ ಕಂಟಿನ್ಯೂ ಆಗುತ್ತಾ..? ಇಲ್ವಾ ಅನ್ನೋ ಟೆನ್ಷನ್ ನಡುವೆ ರಾಜ್ಯದಲ್ಲಿ 2ನೇ ಭಾರಿ ಅಂದ್ರೆ ಇದೇ ಭಾನುವಾರ ಸಂಪೂರ್ಣ ಲಾಕ್ಡೌನ್ ಆಗಲಿದೆ. ರಾಜ್ಯದ ಪ್ರತಿಯೊಂದು ಜಿಲ್ಲೆ, ಪ್ರತಿಯೊಂದು ನಗರ, ಹಳ್ಳಿ ಹಳ್ಳಿಯಲ್ಲೂ 144 ಸೆಕ್ಷನ್ ಬೀಗ ಬೀಳಲಿದೆ. ಇಂದು ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆವರೆಗೂ ಕರುನಾಡು ಕಂಪ್ಲೀಟ್ ಬಂದ್ ಆಗಲಿದೆ.
ಮನೆಯಲ್ಲೇ ಇರಿ, ಹೊರಗೆ ಹೆಜ್ಜೆ ಇಟ್ರೆ ಕಂಟಕ ಫಿಕ್ಸ್..! ಇನ್ನು, ಲಾಕ್ಡೌನ್ 4.O ನಡುವೆ ಲಾಸ್ಟ್ ಸಂಡೇ ಜಾರಿಯಾಗಿದ್ದ 144 ಸೆಕ್ಷನ್ಗೆ ಅಭೂತಪೂರ್ವ ಬೆಂಬಲ ಸಿಕ್ಕಿತ್ತು. ಅದ್ರಂತೆ ಫಸ್ಟ್ ಸಂಡೇ ಆಯ್ತು ಎರಡನೇ ಸಂಡೇ ಕರ್ಫ್ಯೂಗೆ ಕರುನಾಡು ಅಣಿಯಾಗ್ತಿದೆ. ಲಾಕ್ಡೌನ್ ಫಸ್ಟ್.. ಲಾಕ್ಡೌನ್ ಸೆಕೆಂಡ್ ರೂಲ್ಸ್ನಂತೆ ಕಟ್ಟುನಿಟ್ಟಾದ ಕರ್ಫ್ಯೂ ಜಾರಿಯಾಗಲಿದೆ. ಅತ್ಯಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲ ಸೇವೆಗೆ ಬ್ರೇಕ್ ಬೀಳಲಿದೆ. ಸುಖಾಸುಮ್ಮನೆ ರಸ್ತೆಗೆ ಇಳಿದ್ರೆ, ಬೇಕಾಬಿಟ್ಟಿ ಓಡಾಡಿದ್ರೆ ಶಿಕ್ಷೆ ಗ್ಯಾರಂಟಿ.
‘ಸಂಡೇ’ ಕಂಪ್ಲೀಟ್ ಲಾಕ್..! ಇನ್ನು, ಎಂದಿನಂತೆ ಸರ್ಕಾರಿ ಬಸ್ ರಸ್ತೆಗಿಳಿಯಲ್ಲ, ಆಟೋ, ಟ್ಯಾಕ್ಸಿ ಸೇವೆ ಕೂಡ ಇಂದು ಸಂಜೆಯಿಂದಲೇ ಸಿಗಲ್ಲ. ಅಲ್ಲದೇ, ಯಾವುದೇ ಅಂಗಡಿ ಮುಂಗಟ್ಟುಗಳ ಬಾಗಿಲು ಓಪನ್ ಆಗಿರೋದಿಲ್ಲ. ಮಾಲ್ಗಳು, ಲಾಡ್ಜ್, ಸಿನಿಮಾ ಥಿಯೇಟರ್ ಓಪನ್ ಇರಲ್ಲ. ಹೋಟೆಲ್ಗಳು, ರೆಸ್ಟೋರೆಂಟ್, ಪಬ್ ಕಂಪ್ಲೀಟ್ ಕ್ಲೋಸ್ ಆಗಿರಲಿವೆ. ಲಾಕ್ಡೌನ್ ರೂಲ್ಸ್ನಂತೆ ಮಸೀದಿ, ಚರ್ಚ್, ದೇವಸ್ಥಾನ ತೆರೆಯೋಕೆ ಅವಕಾಶವಿರೋದಿಲ್ಲ. ಹಾಗೂ ಪ್ರತಿಯೊಂದು ಜಿಲ್ಲೆಯಲ್ಲಿ ಎಪಿಎಂಸಿ ಮಾರುಕಟ್ಟೆಗಳು ಇಂದು ಸಂಜೆಯಿಂದಲೇ ಬಂದ್ ಬಂದ್ ಆಗಲಿವೆ. ನಗರ ಪ್ರದೇಶ ಸೇರಿ ವಾಕಿಂಗ್, ಪಾರ್ಕ್ನಲ್ಲಿ ಸುತ್ತಾಡಲು ಸಂಪೂರ್ಣ ನಿರ್ಬಂಧ ವಿಧಿಸಲಾಗಿದ. ಅಲ್ಲದೇ ಕ್ಲಬ್, ಗಾಲ್ಫ್ ಕ್ಲಬ್ಗಳು, ಜಿಮ್, ಫಿಟ್ನೆಸ್ ಸೆಂಟರ್ ಕೂಡ ಲಾಕ್ಡೌನ್ ನಿಯಮದಂತೆ ಬಂದ್ ಆಗಿರಲಿದೆ. ವಯಸ್ಕರು, ಮಕ್ಕಳು, ಗರ್ಭಿಣಿಯರು ಯವುದೇ ಕಾರಣಕ್ಕೂ ಹೊರಗೆ ಬರಂಗಿಲ್ಲ ಅಂತ ಖಡಕ್ ಆದೇಶ ಹೊರಡಿಸಲಾಗಿದೆ.
ಇಂದು ಸಂಜೆಯಿಂದ್ಲೇ ಮದ್ಯ ಸಿಗಲ್ಲ..! ಇನ್ನು, ವೀಕೆಂಡ್ ಟೈಮ್ನಲ್ಲಿ ಎಣ್ಣೆ ಸಿಗ್ತಿಲ್ವಲ್ಲ ಅಂತ ಲಾಸ್ಟ್ ಸಂಡೇ ಕೂಡ ಮದ್ಯಪ್ರಿಯರು ಗೊಣಗಿದ್ರು.. ಕೆಲವ್ರು ಸ್ಟಾಕ್ ಕೂಡ ಮಾಡ್ಕೊಂಡಿದ್ರು.. ಅದ್ರಂತೆ, ಈ ಇಂದು ಇಂದು ಸಂಜೆಯಿಂದಲೇ ಲಾಕ್ಡೌನ್ ಕರ್ಫ್ಯೂ ಜಾರಿಯಾಗ್ತಿರೋದ್ರಿಂದ ಸಂಜೆ 7 ಗಂಟೆಯಿಂದಲೇ ಬಾರ್, ಮದ್ಯದಂಗಡಿ, ಎಂಎಸ್ಐಎಲ್ ಕ್ಲೋಸ್ ಆಗಲಿದೆ. ಇನ್ನು, ಸಂಡೇ ಕರ್ಫ್ಯೂ ವೇಳೆ ಹಿಂದಿನ ಭಾನುವಾರದಂತೆ ಖಡಕ್ ರೂಲ್ಸ್ ಜಾರಿಯಲ್ಲಿರುತ್ತೆ.. ಕೆಲವೊಂದು ಸೇವೆಗಳಿಗೆ ಮಾತ್ರ ವಿನಾಯಿತಿ ಸಿಗಲಿದೆ.. ಹಾಗಿದ್ರೆ ಏನೇನ್ ಇರುತ್ತೆ ನೋಡೋಣ ಬನ್ನಿ.
ರಾಜ್ಯದಲ್ಲಿ ಸಂಡೇ ಏನಿರುತ್ತೆ..? ಇನ್ನು ಸಂಡೇ ಕರ್ಫ್ಯೂ ವೇಳೆ ಹಣ್ಣು, ಹಾಲು, ತರಕಾರಿ, ಮಾಂಸ ಮಾರಾಟಕ್ಕೆ ಮಾತ್ರ ಅನುಮತಿ ನೀಡಲಾಗಿದೆ.. ಪೆಟ್ರೋಲ್ ಬಂಕ್, ದಿನಸಿ ಅಂಗಡಿಗಳು ಎಂದಿನಂತೆ ತೆರೆದಿರಲಿದೆ. ಹಾಗೇ, ಡಾಕ್ಟರ್, ನರ್ಸ್, ಆಂಬುಲೆನ್ಸ್ಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.. ಜತೆಗೆ, ನಿಗದಿತ ಮದುವೆ ಕಾರ್ಯಕ್ರಮಗಳಿಗೆ ತೆರಳೋರಿಗೆ ತೊಂದರೆಯಾಗಲ್ಲ. ಗ್ರಾಮೀಣ ಭಾಗದಲ್ಲಿ ಕೈಗಾರಿಕೆ ತೆರೆಯಲು ಅನುಮತಿ ನೀಡಲಾಗುವುದು. ಇನ್ನು, ಹಾರ್ಡ್ವೇರ್ ಹಾಗೂ ಸ್ಟೇಷನರಿ ಶಾಪ್ಗಳು ಓಪನ್ ಇರಲಿದೆ. ತುರ್ತು ಸೇವೆ ವಾಹನಗಳು ಸಂಚಾರಕ್ಕೂ ಅನುಮತಿ ನೀಡಲಾಗಿದೆ.
ಒಟ್ನಲ್ಲಿ, ಕೊರೊನಾ ರಣಕೇಕೆ ಹಾಕ್ತಿದೆ.. ಇತ್ತ, ವೀಕೆಂಡ್ ಟೈಮ್ನಲ್ಲೇ ಕರುನಾಡು ಕಂಪ್ಲೀಟ್ ಲಾಕ್ ಆಗ್ತಿದೆ. ಭಾನುವಾರದ ಲಾಕ್ಡೌನ್ಗೆ ಪೊಲೀಸ್ರು ಕೂಡ ಸರ್ವಸನ್ನದ್ಧರಾಗಿದ್ದಾರೆ. ಆದ್ರೆ, ಈ ಸಂಡೇ ಒಂದು ಕಳೆದು ಬಿಟ್ರೆ ಲಾಕ್ಡೌನ್ 5.Oನಲ್ಲಿ ರಿಲೀಫ್ ಸಿಗೋ ನಿರೀಕ್ಷೆಯಲ್ಲಿ ಜನರಿದ್ದಾರೆ.. ಆದ್ರೆ, ಇದು ಹೀಗೆ ಕಂಟಿನ್ಯೂ ಆಗುತ್ತಾ ಅನ್ನೋದು ಮೇ 31ರ ಬಳಿಕ ಗೊತ್ತಾಗಲಿದೆ.