ಮೈಸೂರಿನ ಹಲವೆಡೆ ವರುಣನ ಆರ್ಭಟ; ಭಾರೀ ಬಿರುಗಾಳಿಗೆ ತೆಂಗಿನ ಮರ ಬಿದ್ದು, ಬಾಲಕಿ ಸಾವು

| Updated By: ಗಂಗಾಧರ​ ಬ. ಸಾಬೋಜಿ

Updated on: Mar 20, 2022 | 8:58 AM

ಜಿಲ್ಲೆಯ ಹಲವೆಡೆ ವರುಣನ ಆರ್ಭಟಕ್ಕೆ  ಸಿಡಿಲು ಬಡಿದು ಮರಕ್ಕೆ ಬೆಂಕಿ ಹೊತ್ತಿಕೊಂಡಿದೆ. ಹೆಚ್. ಡಿ. ಕೋಟೆ ತಾಲೂಕಿನ ಹುಲ್ಲೇಮಾಳ ಗ್ರಾಮದಲ್ಲಿ ಘಟನೆ ನಡೆದಿದೆ.

ಮೈಸೂರಿನ ಹಲವೆಡೆ ವರುಣನ ಆರ್ಭಟ; ಭಾರೀ ಬಿರುಗಾಳಿಗೆ ತೆಂಗಿನ ಮರ ಬಿದ್ದು, ಬಾಲಕಿ ಸಾವು
ಸಾವನ್ನಪ್ಪಿದ ಬಾಲಕಿ
Follow us on

ಮಂಡ್ಯ: ಭಾರೀ ಬಿರುಗಾಳಿಗೆ ತೆಂಗಿನ ಮರ (Coconut Tree) ಬಿದ್ದು, ಬಾಲಕಿ ಸಾವನ್ನಪ್ಪಿರಿವಂತಹ ಘಟನೆ ನಡೆದಿದೆ. ಶ್ರೀರಂಗಪಟ್ಟಣ-ಬನ್ನೂರು ರಸ್ತೆಯ ದೊಡ್ಡಪಾಳ್ಯದೊಡ್ಡಿ ಬಳಿ ಘಟನೆ ನಡೆದಿದೆ. ಕೆಆರ್​ಎಸ್​ ಗ್ರಾಮದ ನಾಗರಾಜು, ಪ್ರೇಮ ದಂಪತಿಯ ಪುತ್ರಿ ಪ್ರಿಯಾಂಕ (12) ಮೃತಪಟ್ಟ ಬಾಲಕಿ. ಬಿರುಗಾಳಿಯಿಂದ ಕಾರು ಹಾಗೂ ಬೈಕ್ ಮೇಲೆ ತೆಂಗಿನ ಮರ ಬಿದ್ದು, ದುರ್ಘಟನೆ ಸಂಭವಿಸಿದೆ. ತಂದೆ, ತಾಯಿಯ ಜತೆ ಬೈಕ್​ನಲ್ಲಿ ಪ್ರಿಯಾಂಕ ಹೋಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ದೊಡ್ಡಪಾಳ್ಯದೊಡ್ಡಿ ಬಳಿ ಬರುತ್ತಿದ್ದ ವೇಳೆ ಬಿರುಗಾಳಿ ಹೆಚ್ಚಾಗಿದೆ. ಪರಿಣಾಮ ರಸ್ತೆ ಪಕ್ಕದಲ್ಲಿದ್ದ ಬೃಹತ್ ತೆಂಗಿನ ಮರ ಬೈಕ್ ಮೇಲೆ ಬಿದ್ದಿದೆ. ಘಟನೆಯಲ್ಲಿ ಬೈಕ್ ಮುಂದೆ ಕುಳಿತಿದ್ದ ನಾಗರಾಜು ಹಾಗೂ ಪುತ್ರಿ ಪ್ರಿಯಾಂಕಗೆ ಗಭೀರ ಗಾಯವಾಗಿದ್ದು, ರಕ್ತದ ಮಡುವಿನಲ್ಲಿ ನರಳುತ್ತಿದ್ದವರನ್ನ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಪ್ರಿಯಾಂಕ ಸಾವನ್ನಪ್ಪಿದ್ದಾಳೆ. ಸದ್ಯ ನಾಗರಾಜ್​ಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಹಿಂಬದಿ ಕುಳಿತಿದ್ದ ಪತ್ನಿ ಪ್ರೆಮಾ, ಪುತ್ರ ಚೇತನ್​ಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದೇ ವೇಳೆ ಕಾರಿನ ಮೇಲೂ ಮರ ಬಿದ್ದಿದ್ದು, ಪಿಹಳ್ಳಿ ಗ್ರಾಮದ ನಾಗಮ್ಮ ಗಾಯಗೊಂಡಿದ್ದಾರೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರುಣನ ಆರ್ಭಟಕ್ಕೆ ತತ್ತರಿಸಿದ ಜನ; ಸಡಿಲು ಬಡೆದು ಓರ್ವ ವೃದ್ಧ ಸಾವು

ಮೈಸೂರು: ಜಿಲ್ಲೆಯ ಹಲವೆಡೆ ವರುಣನ ಆರ್ಭಟಕ್ಕೆ  ಸಿಡಿಲು ಬಡಿದು ಮರಕ್ಕೆ ಬೆಂಕಿ ಹೊತ್ತಿಕೊಂಡಿದೆ. ಹೆಚ್. ಡಿ. ಕೋಟೆ ತಾಲೂಕಿನ ಹುಲ್ಲೇಮಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಮೈಸೂರು ಮಾನಂದವಾಡಿ ರಸ್ತೆಗೆ ಅಡ್ಡವಾಗಿ ಮರ ಬಿದ್ದಿದೆ. ಆಂಜನೇಯ ದೇವಸ್ಥಾನದ ಬಳಿ ಗಾಳಿಯ ಆರ್ಭಟದಿಂದ ಮರ ನೆಲಕ್ಕುರುಳಿದೆ. ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು, ಬದಲಿ ಮಾರ್ಗವಾಗಿ ವಾಹನಗಳು ಸಂಚರಿಸಿವೆ. ಸಿಡಿಲು ಅಬ್ಬರಕ್ಕೆ ವೃದ್ದ ಸಾವನ್ನಪ್ಪಿದ್ದಾರೆ. ಸಾಲಿಗ್ರಾಮ ತಾಲೂಕಿನ ಹನಸೋಗೆ ಗ್ರಾಮದಲ್ಲಿ ಘಟನೆ ನಡೆದಿದೆ. ಸಿದ್ದಲಿಂಗನಾಯಕ (72 ) ಮೃತ ದುರ್ದೈವಿ. ಜಮೀನಿನ ಬಳಿ ಕೆಲಸ ಮಾಡುತ್ತಿದ್ದಾಗ ಮಳೆ ಬಂದಿದೆ. ಮಳೆಯಿಂದ ರಕ್ಷಣೆಗಾಗಿ ಮರದ ಕೆಳಗೆ ನಿಂತಿದ್ದ ಸಿದ್ದಲಿಂಗನಾಯಕ, ಈ ವೇಳೆ ಸಿಡಿಲು ಬಡಿದು ಹಸುನಿಗಿದ್ದಾರೆ. ರೈತ ಸಿದ್ದಲಿಂಗಸ್ವಾಮಿ ಕುಟುಂಬಕ್ಕೆ‌ಪರಿಹಾರ ನೀಡುವಂತೆ ಗ್ರಾಮದ‌ ಮುಖಂಡರಿಂದ ಒತ್ತಾಯ ಮಾಡಲಾಗುತ್ತಿದೆ. ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದಲ್ಲಿ ಮಳೆಯ ಅಬ್ಬರಿದಿಂದ್ದಾಗಿ ಮೋರಿಯಲ್ಲಿ ಸಿಲುಕಿದ್ದ ನಾಯಿ ಮರಿಗಳ‌ ರಕ್ಷಣೆ ಮಾಡಲಾಗಿದೆ. ಮೈಸೂರಿನ ಕುವೆಂಪುನಗರದಲ್ಲಿ ಘಟನೆ ಕಂಡುಬಂದಿದೆ. ಮೋರಿಯ ಒಳಗೆ ಸಿಲುಕಿದ್ದ 9 ನಾಯಿ ಮರಿಗಳನ್ನು ಉರುಗ ಸಂರಕ್ಷಕ ಸೂರ್ಯ ಕೀರ್ತಿ ರಕ್ಷಣೆ ಮಾಡಿದ್ದಾರೆ. ಸ್ಥಳೀಯರ ಮಾಹಿತಿ ಆಧಾರಿಸಿ ಕಾರ್ಯಾಚರಣೆ ನಡೆಸಿದ್ದು, ಹಾರೆಯಿಂದ ಮೋರಿ ಚಪ್ಪಡಿ ಕಲ್ಲು ಸರಿಸಿ ರಕ್ಷಣೆ ಮಾಡಲಾಗಿದೆ. ಎಲ್ಲಾ ಮರಿಗಳ‌ನ್ನು ರಕ್ಷಿಸಿ ಪ್ರಾಥಮಿಕ‌ ಚಿಕಿತ್ಸೆ ಕೂಡ ನೀಡಲಾಗುತ್ತಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ನಿನ್ನೆ ಭಾರೀ ಮಳೆ ಸುರಿದಿದೆ. ಅಕಾಲಿಕ ಮಳೆಗೆ ಜನರು ಕಂಗಾಲಾಗಿದ್ದಾರೆ. ಬೈಕ್​ಗಳೆಲ್ಲ ನೀರಿನಲ್ಲಿ‌ ಮುಳುಗಡೆಯಾಗಿವೆ. ನೀರಿನಲ್ಲಿ ತೇಲಿಕೊಂಡು ಹೋಗುತ್ತಿದ್ದ ಬೈಕ್ ತರಲು ಜನರು ಹರಸಾಸಹ ಪಟ್ಟರು. ಕೊಪ್ಪಳ ‌ಜಿಲ್ಲೆಯಲ್ಲಿ ಅಕಾಲಿಕ ಮಳೆಯ ಅವಾಂತರದಿಂದ ದ್ವೀಚಕ್ರ ವಾಹನ ತರಲು ಹರಸಾಹಸ ಪಡ್ತಿರೋ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ:

Tax On Investments: ಹೂಡಿಕೆ ಮೇಲೆ ತೆರಿಗೆ ಲೆಕ್ಕಾಚಾರ ಹೇಗೆ ಎಂಬ ಮಾಹಿತಿ ಇಲ್ಲಿದೆ

Published On - 8:34 am, Sun, 20 March 22