AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vegetable Price: ಗಗನಕ್ಕೇರಿದ ಮೆಣಸಿನಕಾಯಿ ಬೆಲೆ; ತರಕಾರಿ ದರ ಹೇಗಿದೆ? ಇಲ್ಲಿದೆ ವಿವರ

ಬೇರೆ ಬೇರೆ ರಾಜ್ಯಗಳಿಂದ ಮೆಣಸಿನಕಾಯಿ ಮಾರುಕಟ್ಟೆಗೆ ಬರುತ್ತಿತ್ತು ಈಗ ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ. ಮೆಣಸಿನಕಾಯಿ ಬೆಳೆ ಮಂಜಿನ ವಾತಾವರಣದಲ್ಲಿ ಇಳುವರಿ ಇರುವುದಿಲ್ಲ. ಹೀಗಾಗಿ ಕಡಿಮೆ ಪ್ರಮಾಣದ ಮೆಣಸಿನಕಾಯಿ ಸಿಗುತ್ತೆ, ಅದಕ್ಕೆ ಬೆಲೆ ಹೆಚ್ಚಿದೆ ಎಂದು ವ್ಯಾಪಾರಸ್ಥರು ಮಾಹಿತಿ ನೀಡಿದ್ದಾರೆ.

Vegetable Price: ಗಗನಕ್ಕೇರಿದ ಮೆಣಸಿನಕಾಯಿ ಬೆಲೆ; ತರಕಾರಿ ದರ ಹೇಗಿದೆ? ಇಲ್ಲಿದೆ ವಿವರ
TV9 Web
| Edited By: |

Updated on:Mar 20, 2022 | 10:05 AM

Share

ಬೆಳಗಾವಿ: ನಗರದಲ್ಲಿ ಮೆಣಸಿನಕಾಯಿ ಕೆಜಿಗೆ ಬರೋಬ್ಬರಿ 100 ರಿಂದ 150 ರೂಪಾಯಿಗೆ ತಲುಪಿದೆ. ಕೆಲ ದಿನಗಳ ಹಿಂದೆ ಮೆಣಸಿನಕಾಯಿಗೆ ಕೇವಲ 50 ರಿಂದ 60 ರೂಪಾಯಿ ಇತ್ತು. ಇದೀಗ ಏಕಾಏಕಿ ಸುಮಾರು ಎರಡರಿಂದ ಮೂರು ಪಟ್ಟು ಬೆಲೆ ಏರಿಕೆ ಆಗಿದೆ. ಬೇರೆ ರಾಜ್ಯಗಳಿಂದ ಮೆಣಸಿನಕಾಯಿ ಬರ್ತಿತ್ತು, ಈಗ ಕಡಿಮೆಯಾಗಿದೆ. ಈಗಿನ ವಾತಾವರಣಕ್ಕೆ ಮೆಣಸಿನಕಾಯಿ ಬೀಜ ಹಾಳಾಗಿ ಬೆಳೆ ಕಡಿಮೆಯಾಗಿದೆ ಎಂದು ರೈತರು ಮಾಹಿತಿ ನೀಡಿದ್ದಾರೆ. ಉಳಿದಂತೆ, ಬದನೆಕಾಯಿ ಕೆಜಿಗೆ 40 ರಿಂದ 50 ರೂಪಾಯಿ, ಟೊಮ್ಯಾಟೊ ಕೆಜಿ 10 ರಿಂದ 20 ರೂಪಾಯಿ, ವಠಾಣೆ ಶೇಂಗಾ ಕೆಜಿ 50 ರಿಂದ 80 ರೂಪಾಯಿ, ಹಾಗಲಕಾಯಿ ಕೆಜಿ 50 ರಿಂದ 60 ರೂಪಾಯಿ ಆಗಿದೆ.

ವಿಜಯಪುರ: ಇತ್ತ ವಿಜಯಪುರ ಜಿಲ್ಲೆಯಲ್ಲಿಯೂ ಮೆಣಸಿನಕಾಯಿ ಮತ್ತುಷ್ಟು ಖಾರವಾಗಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಹತ್ತು ಕೆಜಿ ಮೆಣಸಿನಕಾಯಿಗೆ 500 ರಿಂದ 800 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಸವಾಲ್ ಮೂಲಕ ದಲ್ಲಾಳಿಗಳು ಮಾರಾಟವಾಗುತ್ತಿರೋ ಮಿರ್ಚಿ, ಹೆಚ್ಚಿನ ಬೆಲೆಗೆ ಮೆಣಸಿನಕಾಯಿ ಮಾರಾಟವಾಗುತ್ತಿರೋದಕ್ಕೆ ಬೆಳೆಗಾರರಲ್ಲಿ ಸಂತಸ ಹೆಚ್ಚಿದೆ. ಆದರೆ, ಗ್ರಾಹಕರ ಪಾಲಿಗೆ ಮೆಣಸಿನಕಾಯಿ ಮತ್ತಷ್ಟು ಖಾರವಾಗಿದೆ.

ಎಪಿಎಂಸಿ ಆಚೆ, ಹೊರಗಡೆ ಮಾರುಕಟ್ಟೆಯಲ್ಲಿ ಕೆಜಿಗೆ 100 ರಿಂದ 120 ರೂಪಾಯಿ ಮೆಣಸಿನಕಾಯಿ ಮಾರಾಟ ಆಗುತ್ತಿದೆ. ವಾತಾವರಣ ವೈಪರಿತ್ಯ, ಅಕಾಲಿಕ‌ ಮಳೆ ಹಾಗೂ ರೋಗಬಾಧೆಯಿಂದ ಮೆಣಸಿನಕಾಯಿ ಬೆಳೆ ಹಾಳಾಗಿದೆ. ಸದ್ಯ ಕಡಿಮೆ ಇಳುವರಿ ಇರುವ ಕಾರಣ ಮೆಣಸಿನಕಾಯಿ ಬೆಲೆ ಗಗನಕ್ಕೇರಿದೆ ಎಂದು ಹೇಳಲಾಗಿದೆ. ಆಂದ್ರಪ್ರದೇಶ ಮೈತಪೂರ, ಗುಂಟೂರ, ಪಾಪತ್ಲಾ, ಗುಡೂರು ಭಾಗದಿಂದ ಮೆಣಸಿನಕಾಯಿ ಆಮದಾಗುತ್ತಿದೆ. ಈ‌ ಭಾಗದಲ್ಲಿ ಮೆಣಸಿನಕಾಯಿ ಬೆಳೆ ಇಲ್ಲದ ಕಾರಣ ಆಂಧ್ರ ಭಾಗದಿಂದ ಮೆಣಸಿನಕಾಯಿ ಆಮದಾಗುತ್ತಿದೆ.

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕೂಡ ಹಸಿ ಮೆಣಸಿನಕಾಯಿ ಬೆಲೆ ಏರಿಕೆ ಆಗಿದೆ. ಕೆಜಿ ಮೆಣಸಿನಕಾಯಿಗೆ 120 ರಿಂದ 130 ಕ್ಕೆ ಮಾರಾಟ ಮಾಡಲಾಗುತ್ತಿದೆ. ಮೆಣಸಿನಕಾಯಿ ಆವಕ ಕಡಿಮೆ ಹಿನ್ನಲೆ, ಏಕಾಏಕಿ ಮೆಣಸಿನಕಾಯಿ ದರ ಏರಿಕೆ ಆಗಿದೆ. ಇನ್ನಷ್ಟು ದರ ಹೆಚ್ಚಳ ಆಗುವ ಸಂಭವ ಇದೆ ಎಂದು ಹೇಳಲಾಗಿದೆ. ಮದುವೆ ಸೀಸನ್ ಶುರುವಾದ ಹಿನ್ನಲೆ, ಮತ್ತಷ್ಟು ದುಬಾರಿ ಆಗೋ ಸಂಭವ ಇದೆ. ವಾರದ ಹಿಂದಿನ ದರಕ್ಕಿಂತ ದುಪ್ಪಟ್ಟು ಬೆಲೆಗೆ ಈಗ ಮೆಣಸಿನಕಾಯಿ ಮಾರಾಟ ಆಗುತ್ತಿದೆ.

ಕಾರವಾರ: ಉ‌ತ್ತರ ಕನ್ನಡ ಜಿಲ್ಲೆಯಲ್ಲಿ ಮೆಣಸಿನಕಾಯಿಗೆ ಹೆಚ್ಚಿನ ಬೆಲೆ ಬಂದಿದೆ. 1 ಕೆಜಿ ಮೆಣಸಿನಕಾಯಿ 100 ರಿಂದ 120 ರೂಪಾಯಿಗೆ ಮಾರಾಟ ಆಗುತ್ತಿದೆ. ರೈತರಿಂದ ಮೆಣಸಿನಕಾಯಿ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಸಿಗದ ಹಿನ್ನೆಲೆ ಬೆಲೆ ಗಗನಕ್ಕೇರಿದೆ. ಕೆಲವು ವಾರಗಳ ಹಿಂದೆ ಕೆಜಿಗೆ 50 ರಿಂದ 60 ರೂ‌‌ಪಾಯಿಗೆ ಮಾರಟವಿತ್ತು. ಮೆಣಸಿನಕಾಯಿ ಹೇರಳವಾಗಿ ಸಿಗದ ಹಿನ್ನೆಲೆ ಬೆಲೆ ಹೆಚ್ಚಾಗಿದೆ.

ಬೇರೆ ಬೇರೆ ರಾಜ್ಯಗಳಿಂದ ಮೆಣಸಿನಕಾಯಿ ಮಾರುಕಟ್ಟೆಗೆ ಬರುತ್ತಿತ್ತು ಈಗ ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ. ಮೆಣಸಿನಕಾಯಿ ಬೆಳೆ ಮಂಜಿನ ವಾತಾವರಣದಲ್ಲಿ ಇಳುವರಿ ಇರುವುದಿಲ್ಲ. ಹೀಗಾಗಿ ಕಡಿಮೆ ಪ್ರಮಾಣದ ಮೆಣಸಿನಕಾಯಿ ಸಿಗುತ್ತೆ, ಅದಕ್ಕೆ ಬೆಲೆ ಹೆಚ್ಚಿದೆ ಎಂದು ವ್ಯಾಪಾರಸ್ಥರು ಮಾಹಿತಿ ನೀಡಿದ್ದಾರೆ. ಉಳಿದಂತೆ, ಹಾಗಲಕಾಯಿ ಕೆಜಿಗೆ 60 ರೂ., ಹೀರೆಕಾಯಿ ಕೆಜಿಗೆ 60 ರೂ., ಕ್ಯಾರೇಟ್ ಕೆಜಿಗೆ 80 ರೂ., ಟೊಮ್ಯಾಟೊ ಕೆಜಿಗೆ 20 ರೂ., ಈರುಳ್ಳಿ ಕೆಜಿಗೆ 30 ರೂಪಾಯಿಗೆ ಮಾರಾಟ ಆಗುತ್ತಿದೆ.

ಇದನ್ನೂ ಓದಿ: ಈ ಯುವತಿಗೆ ಹಣ್ಣು,ತರಕಾರಿಗಳ ಫೋಬಿಯಾ: 22 ವರ್ಷಗಳಿಂದ ಚಿಕನ್ ನೆಗೆಟ್ ಮಾತ್ರ​​ ಈಕೆಯ ಆಹಾರ

ಇದನ್ನೂ ಓದಿ: ಕಾನನದ ಮಧ್ಯೆ ಪರಿಸರ ಸ್ನೇಹಿ ಸರ್ಕಾರಿ ಶಾಲೆ; ಪಾಠದ ಜತೆಗೆ ಹೂವು, ತರಕಾರಿ, ಔಷಧಿಗಳ ಬೆಳೆಗೆ ಹೆಚ್ಚು ಒತ್ತು

Published On - 8:20 am, Sun, 20 March 22

ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ