ಕಾನನದ ಮಧ್ಯೆ ಪರಿಸರ ಸ್ನೇಹಿ ಸರ್ಕಾರಿ ಶಾಲೆ; ಪಾಠದ ಜತೆಗೆ ಹೂವು, ತರಕಾರಿ, ಔಷಧಿಗಳ ಬೆಳೆಗೆ ಹೆಚ್ಚು ಒತ್ತು

ಅನವಾಲ ಗ್ರಾಮದ ಪ್ರೌಢಶಾಲೆ ಎರಡು ಬಾರಿ "ಹಸಿರು ಶಾಲೆ" ಎಂಬ ಕೀರ್ತಿ ಪಡೆದಿದೆ. ಗುಡ್ಡಗಾಡು ಜಾಗವನ್ನು ಕೊರೆದು ಶಾಲೆ ಕಟ್ಟಲಾಗಿದೆ. ಶಾಲೆಯ ಮುಂದೆ 80 ಕ್ಕೂ ಹೆಚ್ಚು ವಿವಿಧ ತಳಿಯ ಗಿಡಮರಗಳನ್ನು ಬೆಳೆಸಲಾಗಿದೆ. ಕೇವಲ ಗಿಡವಷ್ಟೇ ಅಲ್ಲದೇ ತುಳಸಿ, ಮಿಂಟ್ ತುಳಸಿ, ಕೃಷ್ಣಕಮಲ ಸೇರಿದಂತೆ ಹತ್ತಾರು ಬಗೆಯ ಔಷಧಿ ಸಸ್ಯ ಬೆಳೆಸಲಾಗಿದೆ.

ಕಾನನದ ಮಧ್ಯೆ ಪರಿಸರ ಸ್ನೇಹಿ ಸರ್ಕಾರಿ ಶಾಲೆ; ಪಾಠದ ಜತೆಗೆ ಹೂವು, ತರಕಾರಿ, ಔಷಧಿಗಳ ಬೆಳೆಗೆ ಹೆಚ್ಚು ಒತ್ತು
ಅನವಾಲ ಗ್ರಾಮದ ಸರಕಾರಿ ಶಾಲೆ
Follow us
TV9 Web
| Updated By: preethi shettigar

Updated on:Feb 16, 2022 | 9:04 AM

ಬಾಗಲಕೋಟೆ: ಶಾಲೆಗಳು(School) ಅಂದರೆ ಇದೀಗ ಕಮರ್ಷಿಯಲ್ ಕಾಂಪ್ಲೆಕ್ಸ್ ರೀತಿ ಆಗಿವೆ. ಎಲ್ಲಾದರೂ ಒಂದು ಜಾಗ ಸಿಕ್ಕರೆ ಅಲ್ಲೊಂದು ಬೃಹತ್ ಕಟ್ಟಡ ನಿರ್ಮಾಣ ಮಾಡಿ ಶಾಲಾ-ಕಾಲೇಜು ಆರಂಭ ಮಾಡಿ ಶಿಕ್ಷಣವನ್ನು(Education) ಒಂದು ದಂದೆ ಮಾಡಿ ಬಿಡುತ್ತಾರೆ. ಅಲ್ಲಿನ ಪರಿಸರ, ವಾತಾವರಣ ಬಗ್ಗೆ ಕಳಕಳಿ ಇರುವಂತವರು ತುಂಬಾನೆ ಕಡಿಮೆ. ಆದರೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಅನವಾಲ ಗ್ರಾಮದ ಸರಕಾರಿ ಶಾಲೆ ಇದಕ್ಕೆ ವಿರುದ್ಧವಾಗಿದೆ. ಇಲ್ಲಿಗೆ ಕಾಲಿಟ್ಟರೆ ಆಯಾಸವೆಲ್ಲ ದೂರ ಆಗುತ್ತದೆ‌. ಕಣ್ಣಿಗೆ ಹಸಿರು ವಾತಾವರಣ ತಂಪು ನೀಡುತ್ತದೆ‌‌‌. ಶಾಲೆ ಎಂದರೆ ಹೀಗೆ ಇರಬೇಕು ಎಂಬುವಷ್ಟರಮಟ್ಟಿಗೆ ಈ ಶಾಲೆ ಮಕ್ಕಳನ್ನು(Children), ಸಾರ್ವಜನಿಕರನ್ನು ಆಕರ್ಷಿಸುತ್ತಿದೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಅನವಾಲ ಗ್ರಾಮದ ಪ್ರೌಢಶಾಲೆಯ ಸುಂದರ ಚಿತ್ರಣ ಎಂತವರನ್ನು ಆಕರ್ಷಿಸುತ್ತದೆ. ಸರಕಾರಿ ಶಾಲೆಗಳು ಅಂದರೆನೆ ಬೇರೆಯದ್ದೇ ದೃಷ್ಟಿಕೋನದಿಂದ ಜನರು ನೋಡೋದು ಸಾಮಾನ್ಯವಾಗಿದೆ. ಈ ಮಧ್ಯೆ ಶಾಲೆಯಲ್ಲಿ ಸುಂದರ ವಾತಾವರಣ ಸ್ವಚ್ಛ ಪರಿಸರ ಕಾಣೆಯಾಗುತ್ತಿದೆ. ಆರೋಗ್ಯವೇ ಭಾಗ್ಯ ಎನ್ನುವಂತೆ ಒಂದು ಶಾಲೆಗೆ ಪರಿಸರ ಕೂಡ ತುಂಬಾ ಮುಖ್ಯ. ಅದಕ್ಕೆ ತಕ್ಕಂತೆ ಅನವಾಲ ಗ್ರಾಮದ ಪ್ರೌಢಶಾಲೆ ಉತ್ತಮ ಪರಿಸರಕ್ಕೆ ಹೆಸರಾಗಿದೆ.

ಅನವಾಲ ಗ್ರಾಮದ ಪ್ರೌಢಶಾಲೆ ಎರಡು ಬಾರಿ “ಹಸಿರು ಶಾಲೆ” ಎಂಬ ಕೀರ್ತಿ ಪಡೆದಿದೆ. ಗುಡ್ಡಗಾಡು ಜಾಗವನ್ನು ಕೊರೆದು ಶಾಲೆ ಕಟ್ಟಲಾಗಿದೆ. ಶಾಲೆಯ ಮುಂದೆ 80 ಕ್ಕೂ ಹೆಚ್ಚು ವಿವಿಧ ತಳಿಯ ಗಿಡಮರಗಳನ್ನು ಬೆಳೆಸಲಾಗಿದೆ. ಕೇವಲ ಗಿಡವಷ್ಟೇ ಅಲ್ಲದೇ ತುಳಸಿ, ಮಿಂಟ್ ತುಳಸಿ, ಕೃಷ್ಣಕಮಲ ಸೇರಿದಂತೆ ಹತ್ತಾರು ಬಗೆಯ ಔಷಧಿ ಸಸ್ಯ ಬೆಳೆಸಲಾಗಿದೆ. ಜೊತೆಗೆ ತರಕಾರಿಗಳನ್ನು ಬೆಳೆಸಿದ್ದು, ಇಡೀ ಶಾಲೆಯ ತುಂಬ ಹಸಿರು ವಾತಾವರಣ ಮೈದಳೆದಿದೆ.

ಅನವಾಲ ಗ್ರಾಮದ ಪ್ರೌಢಶಾಲೆ ಈಗಾಗಲೇ ಬಾಗಿಲು ಮುಚ್ಚದ ಶಾಲೆ ಎಂದು ಖ್ಯಾತಿ ಪಡೆದಿದೆ‌. ಎಂಟು ವರ್ಷದಿಂದ ಶಾಲೆ ಪ್ರತಿಶತ ನೂರಕ್ಕೆ ನೂರರಷ್ಟು ಫಲಿತಾಂಶ ಕೂಡ ಪಡೆದಿದೆ. ಆದರೆ ಕೇವಲ ವಿಧ್ಯಾಭ್ಯಾಸಕ್ಕೆ ಮಾತ್ರ ಸೀಮಿತವಾಗದೆ ಸುಂದರ ಪರಿಸರ ನಿರ್ಮಾಣ ಗಿಡಗಳ ರಕ್ಷಣೆ, ಹೂಗಳಿಂದ ಅಲಂಕಾರಕ್ಕೂ ಶಾಲೆ ಪ್ರಸಿದ್ಧೊ ಪಡೆದಿದೆ. ಗಿಡಗಳು, ಹೂತೋಟ, ತರಕಾರಿ ಬೆಳೆಯುವ ಮೂಲಕ ಹಸಿರು ಹೊದಿಕೆ ಹೊದಿಸಲಾಗಿದೆ. ವಿದ್ಯಾರ್ಥಿಗಳಿಗೆ ಗಿಡಮರಗಳು, ಔಷಧಿ ಸಸ್ಯಗಳು, ತರಕಾರಿ, ಹೂ ಹಣ್ಣುಗಳ ಪರಿಚಯ ತಿಳಿಸಿ ಕೊಡಲಾಗುತ್ತಿದೆ‌‌. ಇಲ್ಲಿ ಪ್ರಕೃತಿ, ಸಂಸ್ಕೃತಿ, ಪ್ರಗತಿ, ಜಾಗೃತಿ ಎಂಬ ತಂಡ ಮಾಡಿದ್ದು, ಒಂದೊಂದು ತಂಡದಲ್ಲೂ ಒಬ್ಬ ಶಿಕ್ಷಕರು ಹಾಗೂ ವಿಧ್ಯಾರ್ಥಿಳನ್ನು ನೇಮಕ ಮಾಡಲಾಗಿದೆ‌.

government school

ಹಸಿರು ವಾತಾವರಣ

ಒಂದೊಂದು ತಂಡದಿಂದ ಇಂತಿಷ್ಟು ಗಿಡ, ತರಕಾರಿ ಹೂ ಗಿಡಗಳ ಆರೈಕೆ ಮಾಡಲಾಗುತ್ತದೆ. ಸ್ವಯಂಪ್ರೇರಿತವಾಗಿ ಶ್ರಮದಾನ ಮಾಡುವ ಮೂಲಕ ಶಿಕ್ಷಕರು ವಿದ್ಯಾರ್ಥಿಗಳೆಲ್ಲರೂ ಕೂಡ ಗಿಡಗಳ ಆರೈಕೆ, ತೋಟದಲ್ಲಿ ಕೆಲಸ ಮಾಡಿ ಇವುಗಳನ್ನು ಬೆಳೆಸಿದ್ದಾರೆ. ಇಲ್ಲಿ ನಮಗೆ ಗಿಡಗಳು, ತರಕಾರಿ ಹೂಹಣ್ಣುಗಳ ಬಗ್ಗೆ ಜ್ಞಾನವೂ ಸಿಗುತ್ತದೆ. ಜೊತೆಗೆ ಸುಂದರ ವಾತಾವರಣ ಕೂಡ ಸಿಗುತ್ತದೆ. ನಮ್ಮ ಎಲ್ಲ ಶಿಕ್ಷಕರಿಗೂ ನಾವು ಧನ್ಯವಾದ ಹೇಳುತ್ತೇವೆ. ಇಂತಹ ಶಾಲೆಯಲ್ಲಿ  ಓದುತ್ತಿರೋದಕ್ಕೆ ನಮಗೆ ಹೆಮ್ಮೆ ಇದೆ ಎಂದು ವಿದ್ಯಾರ್ಥಿನಿ ಪ್ರಿಯಾಂಕಾ ಕುಂಬಾರ ಹರ್ಷ ವ್ಯಕ್ತಪಡಿಸಿದ್ದಾರೆ.

ವರದಿ: ರವಿ ಮೂಕಿ

ಇದನ್ನೂ ಓದಿ: ಹಾವೇರಿ: ಪಾಠದ ಜೊತೆಗೆ ಆಟ; ಜಿಲ್ಲೆಯಲ್ಲೊಂದು ಅಪರೂಪದ ಹೈಟೆಕ್ ಸರ್ಕಾರಿ ಶಾಲೆ

Mobile Schools: ಮಾರ್ಚ್ 1ರಿಂದ ಮೊಬೈಲ್ ಶಾಲೆಗಳನ್ನು ಪುನಾರಂಭ ಮಾಡಲು ಬಿಬಿಎಂಪಿ ನಿರ್ಧಾರ

Published On - 8:59 am, Wed, 16 February 22

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ