Sign In

By signing in or creating an account, you agree with Associated Broadcasting Company's Terms & Conditions and Privacy Policy.

Mobile Schools: ಮಾರ್ಚ್ 1ರಿಂದ ಮೊಬೈಲ್ ಶಾಲೆಗಳನ್ನು ಪುನಾರಂಭ ಮಾಡಲು ಬಿಬಿಎಂಪಿ ನಿರ್ಧಾರ

ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಿಗೂ ಎಂಟು ಮೊಬೈಲ್ ಸ್ಕೂಲ್ ಬಸ್ಗಳಿವೆ. ಪ್ರತಿದಿನ ನಾಲ್ಕು ಗಂಟೆಗಳ ಕಾಲ ಮೊಬೈಲ್ ಸ್ಕೂಲ್ಸ್ ನಡೆಯುತ್ತವೆ. ಈ ಮೊಬೈಲ್ ಸ್ಕೂಲ್ಗಳಿಂದ ಕಟ್ಟಡ ಕಾರ್ಮಿಕರು, ಶಾಲೆ ಬಿಟ್ಟ ಮಕ್ಕಳಿಗೆ ತುಂಬಾ ಅನುಕೂಲವಾಗುತ್ತಿದೆ.

Mobile Schools: ಮಾರ್ಚ್ 1ರಿಂದ ಮೊಬೈಲ್ ಶಾಲೆಗಳನ್ನು ಪುನಾರಂಭ ಮಾಡಲು ಬಿಬಿಎಂಪಿ ನಿರ್ಧಾರ
ಮೊಬೈಲ್ ಶಾಲೆ
Follow us
TV9 Web
| Updated By: ಆಯೇಷಾ ಬಾನು

Updated on: Feb 15, 2022 | 9:32 AM

ಬೆಂಗಳೂರು: ಮಾರ್ಚ್ 1ರಿಂದ ಮೊಬೈಲ್ ಶಾಲೆಗಳನ್ನು(Mobile Schools) ಪುನಾರಂಭ ಮಾಡಲು ಬಿಬಿಎಂಪಿ(BBMP) ನಿರ್ಧಾರ ಮಾಡಿದೆ. ಕೊವಿಡ್ ಹಿನ್ನೆಲೆ ಶಾಲೆಗಳು ಸರಿಯಾಗಿ ನಡೆಯುತ್ತಿರಲಿಲ್ಲ. ಇನ್ನು ಮುಂದೆ ರೆಗ್ಯುಲರ್ ಆಗಿ ಶಾಲೆ ನಡೆಸಲು ನಿರ್ಧಾರ ಮಾಡಲಾಗಿದೆ. ಶಾಲೆ ಬಿಟ್ಟಿರುವ ಮಕ್ಕಳು, ವಲಸೆ ಕಾರ್ಮಿಕರ ಮಕ್ಕಳು, ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ಮೊಬೈಲ್ ಶಾಲೆಗಳನ್ನು ತೆರೆಯಲು ಬಿಬಿಎಂಪಿ ನಿರ್ಧರಿಸಿದೆ.

ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಿಗೂ ಎಂಟು ಮೊಬೈಲ್ ಸ್ಕೂಲ್ ಬಸ್ಗಳಿವೆ. ಪ್ರತಿದಿನ ನಾಲ್ಕು ಗಂಟೆಗಳ ಕಾಲ ಮೊಬೈಲ್ ಸ್ಕೂಲ್ಸ್ ನಡೆಯುತ್ತವೆ. ಈ ಮೊಬೈಲ್ ಸ್ಕೂಲ್ಗಳಿಂದ ಕಟ್ಟಡ ಕಾರ್ಮಿಕರು, ಶಾಲೆ ಬಿಟ್ಟ ಮಕ್ಕಳಿಗೆ ತುಂಬಾ ಅನುಕೂಲವಾಗುತ್ತಿದೆ. ಮಾರ್ಚ್ 1 ರಿಂದ ಮೊಬೈಲ್ ಸ್ಕೂಲ್ ಗೆ ಬರುವ ಮಕ್ಕಳ ಡಿಟೇಲ್ಸ್ ಮತ್ತೆ ದಾಖಲಾತಿ ಮಾಡಿಕೊಂಡು ಫಾಲೋಪ್ ಮಾಡಲು ಬಿಬಿಎಂಪಿ ನಿರ್ಧಾರ ಮಾಡಿದೆ. ಆರಂಭದಲ್ಲಿ 450 ಮಕ್ಕಳು ಮೊಬೈಲ್ ಸ್ಕೂಲ್ ನಲ್ಲಿ ಕಲಿಯುತ್ತಾ ಇದ್ದರು. ಕೊವಿಡ್ ಬಂದ ಮೇಲೆ ಆ ಸಂಖ್ಯೆ ಕಡಿಮೆ ಆಗಿದೆ.

ಮೊಬೈಲ್ ಶಾಲೆ ಎಂದರೇನು? ಬಿಎಂಟಿಸಿ ಸಂಸ್ಥೆ ಗುಜರಿಗೆ ಹಾಕುತ್ತಿದ್ದ ಬಸ್ಗಳನ್ನು ಬಿಬಿಎಂಪಿ ಖರೀದಿಸಿ ಅದನ್ನು ಮೊಬೈಲ್ ಶಾಲೆಗಳಾಗಿ ಬಳಸಲಾಗುತ್ತಿದೆ. ಶಿಕ್ಷಣದಿಂದ ವಂಚಿತರಾದ ಮಕ್ಕಳು ಹೆಚ್ಚಾಗಿರುವ ಕಡೆ ಮೊಬೈಲ್ ಬಸ್ ಕಳಿಸಿ ಅವರಿಗೂ ಶಿಕ್ಷಣ ನೀಡುವ ಯೋಜನೆ ಇದಾಗಿದೆ. ಆದ್ರೆ ಈ ಯೋಜನೆ ಆರಂಭವಾದಾಗ ಅನೇಕ ಕಡೆ ವಿರೋಧ ಕೇಳಿ ಬಂದಿತ್ತು. ಮಕ್ಕಳ ಹೆಸರಲ್ಲಿ ಹಣ ಕೊಳ್ಳೆ ಹೊಡೆಯುವ ಯೋಜನೆ ಇದು ಎಂದು ಆಕ್ರೋಶ ವ್ಯಕ್ತವಾಗಿತ್ತು. ಅದೆಷ್ಟೋ ಬಿಬಿಎಂಪಿ ಶಾಲೆಗಳು ಸರಿಯಾದ ನಿರ್ವಾಹಣೆ ಇಲ್ಲದೆ ಹಾಳಾಗಿವೆ. ಮೊದಲು ಅದನ್ನು ಸರಿ ಮಾಡಲಿ ಅದನ್ನು ಬಿಟ್ಟು ಮೊಬೈಲ್ ಶಾಲೆಗಳನ್ನು ತೆರೆದರೆ ಏನು ಪ್ರಯೋಜನ ಎಂಬ ಮಾತುಗಳು ಹೇಳಿ ಬಂದಿದ್ದವು. ಸದ್ಯ ಬಿಬಿಎಂಪಿ ಮಾರ್ಚ್ 1ರಿಂದ ಮೊಬೈಲ್ ಶಾಲೆಗಳನ್ನು ಪುನಾರಂಭ ಮಾಡಲು ನಿರ್ಧಾರ ಮಾಡಿದೆ.

Mobile School

ಮೊಬೈಲ್ ಶಾಲೆ

ಇದನ್ನೂ ಓದಿ: Transgender World: ಪ್ರತಿಭಟನೆಗೆ ಹೋಗುವವರಿಗೆ ಏನನ್ನು ಪ್ರತಿಭಟಿಸೋದಕ್ಕೆ ಹೋಗ್ತಿದೀವಿ ಅನ್ನೋದೇ ಗೊತ್ತಿರಲ್ಲ!