ಹಾವೇರಿ: ಪಾಠದ ಜೊತೆಗೆ ಆಟ; ಜಿಲ್ಲೆಯಲ್ಲೊಂದು ಅಪರೂಪದ ಹೈಟೆಕ್ ಸರ್ಕಾರಿ ಶಾಲೆ
ಶಾಲಾ ಆವರಣದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಒಂಬತ್ತು ಲಕ್ಷ ರೂಪಾಯಿ ಖರ್ಚು ಮಾಡಿ ಆಟದ ಮೈದಾನ ನಿರ್ಮಾಣ ಮಾಡಿದ್ದಾರೆ. ಶೆಟಲ್ ಬ್ಯಾಡ್ಮಿಂಟನ್, ಖೋಖೋ, ಕಬ್ಬಡ್ಡಿ, ರನ್ನಿಂಗ್, ಗುಂಡು ಎಸೆತ, ಚಕ್ರ ಎಸೆತ ಹೀಗೆ ಎಲ್ಲ ರೀತಿಯ ಆಟದ ಮೈದಾನಗಳನ್ನು ನಿರ್ಮಾಣ ಮಾಡಿದ್ದಾರೆ.
ಹಾವೇರಿ: ಸರಕಾರಿ ಶಾಲೆಗಳು (Government School) ಅಂದರೆ ಸಾಕು ಶಾಲೆಯಲ್ಲಿ ಅದಿಲ್ಲ, ಇದಿಲ್ಲ ಎನ್ನುವ ಮಾತುಗಳು ಸರ್ವೆ ಸಾಮಾನ್ಯ. ಆದರೆ ಇಲ್ಲೊಂದು ಸರಕಾರಿ ಶಾಲೆಯಿದೆ. ಈ ಶಾಲೆ ಮಕ್ಕಳಿಗೆ(Students) ಉತ್ತಮ ಪಾಠದ ಜೊತೆಗೆ ಉತ್ತಮ ಆಟವನ್ನು(Sports) ಹೇಳಿಕೊಡುತ್ತಿದೆ. ಜಿಲ್ಲಾಮಟ್ಟದಲ್ಲೂ ಇರದೆ ಇರುವ ಸುಸಜ್ಜಿತ ಆಟದ ಮೈದಾನಗಳು ಈ ಶಾಲೆಯಲ್ಲಿವೆ. ಖೋಖೋ, ಕಬ್ಬಡ್ಡಿ, ಬ್ಯಾಡ್ಮಿಂಟನ್ ಹೀಗೆ ಎಲ್ಲ ಮೈದಾನಗಳೂ ಇವೆ. ಈ ಶಾಲೆಯಲ್ಲಿ ಸದೃಢ ದೇಹದಲ್ಲಿ ಸದೃಢ ಮನಸ್ಸಿರಬೇಕು ಎನ್ನುವ ಹಾಗೆ ಉತ್ತಮ ಆಟ ಮತ್ತು ಪಾಠ ಸಿಗುತ್ತಿದೆ. ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಕಣವಿಸಿದ್ದಗೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 8ನೇ ತರಗತಿಯವರೆಗೆ ಕಲಿಸಲಾಗುತ್ತದೆ.
ಈ ಶಾಲೆಯಲ್ಲಿ 114 ಹೆಣ್ಣು ಮಕ್ಕಳು ಮತ್ತು 117 ಗಂಡು ಮಕ್ಕಳು ಸೇರಿದಂತೆ ಒಟ್ಟು 231 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಯಲ್ಲಿನ ಮಕ್ಕಳಿಗೆ ಶಾಲೆಯಲ್ಲಿ ಉತ್ತಮ ಪಾಠ ಮಾಡುತ್ತಿದ್ದು, ಶಾಲೆಯಲ್ಲಿ ಮಕ್ಕಳಿಗೆ ಎಲ್ಲಾ ರೀತಿಯ ಸೌಕರ್ಯಗಳು ಸಿಗುತ್ತಿತ್ತು. ಆದರೆ ಶಾಲೆಯಲ್ಲಿ ಸುಸಜ್ಜಿತ ಆಟದ ಮೈದಾನ ಇರಲಿಲ್ಲ. ಹೀಗಾಗಿ ಶಾಲಾ ಸಿಬ್ಬಂದಿ, ಗ್ರಾಮ ಪಂಚಾಯ್ತಿ ಸದಸ್ಯರು, ಅಧಿಕಾರಿಗಳು ಮತ್ತು ಗ್ರಾಮಸ್ಥರ ಸಹಕಾರದಿಂದ ಶಾಲೆಯಲ್ಲಿ ಆಟದ ಮೈದಾನ ನಿರ್ಮಾಣಕ್ಕೆ ಮುಂದಾಗಿದ್ದರು. ಜಿಲ್ಲಾ ಪಂಚಾಯ್ತಿ ಸಿಇಓ ಮೊಹಮ್ಮದ ರೋಶನ್ರ ವಿಶೇಷ ಆಸಕ್ತಿಯಿಂದ ಗ್ರಾಮದ ಮಕ್ಕಳಿಗೆ ಯಾವ ಶಾಲೆಯಲ್ಲೂ ಇಲ್ಲದಂಥ ಸುಂದರ ಸುಸಜ್ಜಿತ ಆಟದ ಮೈದಾನ ನಿರ್ಮಾಣವಾಗಿದೆ.
ಶಾಲಾ ಆವರಣದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಒಂಬತ್ತು ಲಕ್ಷ ರೂಪಾಯಿ ಖರ್ಚು ಮಾಡಿ ಆಟದ ಮೈದಾನ ನಿರ್ಮಾಣ ಮಾಡಿದ್ದಾರೆ. ಶೆಟಲ್ ಬ್ಯಾಡ್ಮಿಂಟನ್, ಖೋಖೋ, ಕಬ್ಬಡ್ಡಿ, ರನ್ನಿಂಗ್, ಗುಂಡು ಎಸೆತ, ಚಕ್ರ ಎಸೆತ ಹೀಗೆ ಎಲ್ಲ ರೀತಿಯ ಆಟದ ಮೈದಾನಗಳನ್ನು ನಿರ್ಮಾಣ ಮಾಡಿದ್ದಾರೆ. ಶಾಲೆಯ ಮಕ್ಕಳು ಬೆಳಿಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ಹಾಗೂ ಶಾಲೆಯ ಬಿಡುವಿನ ವೇಳೆಯಲ್ಲಿ ಮೈದಾನದಲ್ಲಿ ವಿವಿಧ ರೀತಿಯ ಆಟಗಳನ್ನು ಆಡಿ ಉತ್ತಮ ಕ್ರೀಡಾಪಟುಗಳಾಗಿ ಬೆಳಿತಿದ್ದಾರೆ.
ಇದನ್ನೂ ಓದಿ:
ಶಾಲೆಗೆ ಹೋಗದೆ ಮರಳು ದಂಧೆಯಲ್ಲಿ ಶಿಕ್ಷಕ ಭಾಗಿ, ವಿದ್ಯಾರ್ಥಿನಿಗೆ ಥಳಿಸಿದ ಆರೋಪದಲ್ಲಿ ಪೋಷಕರ ಧರಣಿ