ಶಾಲೆಗೆ ಹೋಗದೆ ಮರಳು ದಂಧೆಯಲ್ಲಿ ಶಿಕ್ಷಕ ಭಾಗಿ, ವಿದ್ಯಾರ್ಥಿನಿಗೆ ಥಳಿಸಿದ ಆರೋಪದಲ್ಲಿ ಪೋಷಕರ ಧರಣಿ

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಬಿಇಒ ವರದಿ ಬಂದ ಬಳಿಕ ಮುಖ್ಯ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.

ಶಾಲೆಗೆ ಹೋಗದೆ ಮರಳು ದಂಧೆಯಲ್ಲಿ ಶಿಕ್ಷಕ ಭಾಗಿ, ವಿದ್ಯಾರ್ಥಿನಿಗೆ ಥಳಿಸಿದ ಆರೋಪದಲ್ಲಿ ಪೋಷಕರ ಧರಣಿ
ಶಾಲೆಗೆ ಹೋಗದೆ ಮರಳು ದಂಧೆಯಲ್ಲಿ ಶಿಕ್ಷಕ ಭಾಗಿ: ಅಧಿಕಾರಿಗಳಿಂದ ಮಕ್ಕಳ ವಿಚಾರಣೆ
Follow us
TV9 Web
| Updated By: ganapathi bhat

Updated on: Jan 31, 2022 | 7:05 PM

ಬೆಂಗಳೂರು: ನಗರದ ಎಲೆಕ್ಟ್ರಾನಿಕ್ ಸಿಟಿ ಸಿಗ್ನಲ್ ಬಳಿ ಭಾರಿ ದುರಂತವೊಂದು ತಪ್ಪಿದೆ. ಬ್ರೇಕ್ ಫೇಲ್ ಆಗಿ ಮತ್ತೊಂದು ಲಾರಿಗೆ ಗುದ್ದಿದ ಲಾರಿ ಹೆಚ್ಚಿನ ಅಪಘಾತವನ್ನು ತಪ್ಪಿಸಿದೆ. ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಸಿಗ್ನಲ್ ಬಳಿ ಘಟನೆ ನಡೆದಿತ್ತು ಭಾರಿ ಅಪಘಾತವೊಂದು ಸಣ್ಣದರಲ್ಲಿ ಪಾರಾಗಿದೆ. ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಹೊಸೂರು ಕಡೆಯಿಂದ ಸಿಮೆಂಟ್ ಚೀಲ ಹೊತ್ತು ಬರುತ್ತಿದ್ದ ಲಾರಿ ಬ್ರೇಕ್ ಫೇಲ್ ಆದ ಕಾರಣ ಅಪಘಾತ ಸಂಭವಿಸಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇತ್ತ ನೆಲಮಂಗಲ ತಾಲೂಕಿನ ಎಡೆಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸರಣಿ ಅಪಘಾತ ಸಂಭವಿಸಿದೆ. ಲಾರಿ, ಕಾರು, ಐರಾವತ ಬಸ್ ನಡುವೆ ಅಪಘಾತ ಸಂಭವಿಸಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಶಾಲೆಗೆ ಹೋಗದೆ ಮರಳು ದಂಧೆಯಲ್ಲಿ ಶಿಕ್ಷಕ ಭಾಗಿ; ಶಿಕ್ಷಕನ ಅಮಾನತು ಮಾಡುವಂತೆ ಬಿಇಒಗೆ ಸೂಚನೆ

ಶಾಲೆಗೆ ಹೋಗದೆ ಮರಳು ದಂಧೆಯಲ್ಲಿ ಶಿಕ್ಷಕ ಭಾಗಿ ಆರೋಪದ ಬಗ್ಗೆ ಟಿವಿ9ನಲ್ಲಿ ವರದಿ ಪ್ರಸಾರದ ಬಳಿಕ ನಮಗೆ ಮಾಹಿತಿ ಬಂದಿದೆ. ಶಿಕ್ಷಕನನ್ನು ಅಮಾನತು ಮಾಡುವಂತೆ ಬಿಇಒಗೆ ಸೂಚಿಸಲಾಗಿದೆ ಎಂದು ಟಿವಿ9ಗೆ ಗದಗ ಡಿಡಿಪಿಐ ಜಿ.ಎಂ. ಬಸವಲಿಂಗಪ್ಪ ಹೇಳಿಕೆ ನೀಡಿದ್ದಾರೆ. ಸರ್ಕಾರಿ ಶಾಲೆ ಶಿಕ್ಷಕ ಎಸ್.ಕೆ. ಪಾಟೀಲ್ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಬಿಇಒ ವರದಿ ಬಂದ ಬಳಿಕ ಮುಖ್ಯ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.

ಶಾಲೆಗೆ ಚಕ್ಕರ ಹಾಕಿ ಮರಳು ದಂಧೆಯಲ್ಲಿ ಶಿಕ್ಷಕ ಭಾಗಿ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷಣ ಇಲಾಖೆಯಿಂದ ವಿಚಾರಣೆ ತೀವ್ರಗೊಂಡಿದೆ. ಹೆಬ್ಬಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿರಹಟ್ಟಿ ಬಿಇಓ ಆರ್ ಎಸ್ ಬುರಡಿ ಅಂಡ್ ಟೀಮ್ ಭೇಟಿ ನೀಡಿದ್ದಾರೆ. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದ ಶಾಲೆ ಶಿಕ್ಷಕ ಎಸ್.ಕೆ ಪಾಟೀಲ್ ಕಳ್ಳಾಟದ ಬಗ್ಗೆ ಟಿವಿ9ನಲ್ಲಿ ವಿಸ್ತೃತ ವರದಿ ಮಾಡಲಾಗಿತ್ತು. ಅಧಿಕಾರಿಗಳಿಂದ ಮಕ್ಕಳ ವಿಚಾರಣೆ ನಡೆಸಲಾಗಿದೆ. ‌ಎಸ್.ಕೆ ಪಾಟೀಲ್ ಪಾಠ ಮಾಡಿದ್ದಾರಾ? ಶಾಲೆಗೆ ಬಂದಿದ್ದಾರಾ? ಎಂಬ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಶಾಲೆಗೆ ಬಂದಿಲ್ಲ ಸರ್, ಪಾಠ ಮಾಡಿಲ್ಲ ಸರ್ ಅಂತ ಅಧಿಕಾರಿಗಳಿಗೆ ಮಕ್ಕಳು ಉತ್ತರ ನೀಡಿದ್ದಾರೆ. ಬಿಇಒ ಆರ್.ಎಸ್ ಬುರಡಿಯಿಂದ ಮುಖ್ಯ ಶಿಕ್ಷಕ ಹಾಗೂ ಶಿಕ್ಷಕರ ತೀವ್ರ ವಿಚಾರಣೆ ನಡೆಸಲಾಗಿದೆ.

ತುಮಕೂರು: ಪ್ರಾಂಶುಪಾಲರು ವಿದ್ಯಾರ್ಥಿನಿಗೆ ಥಳಿಸಿದ ಆರೋಪ; ಬಾಲಕಿ ಪೋಷಕರ ಧರಣಿ

ಪ್ರಾಂಶುಪಾಲರು ವಿದ್ಯಾರ್ಥಿನಿಗೆ ಥಳಿಸಿದ ಆರೋಪಕ್ಕೆ ಸಂಬಂಧಿಸಿ ಪ್ರಾಂಶುಪಾಲರ ವಿರುದ್ಧ ಬಾಲಕಿ ಪೋಷಕರು ಧರಣಿ ನಡೆಸಿದ ಘಟನೆ ತುಮಕೂರಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನಡೆದಿದೆ. ಪ್ರಾಂಶುಪಾಲರ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಘಟನೆ ನಡೆದಿದೆ. ಮತ್ತೊಂದೆಡೆ ಪ್ರಾಂಶುಪಾಲ ಪರ ವಿದ್ಯಾರ್ಥಿಗಳು ಧರಣಿ ಕೈಗೊಂಡಿದ್ದಾರೆ. ನಮಗೆ ಇದೇ ಪ್ರಾಂಶುಪಾಲರು ಬೇಕೆಂದು ಪ್ರತಿಭಟನೆ ನಡೆದಿದೆ. ವಿದ್ಯಾರ್ಥಿನಿಯನ್ನು ಥಳಿಸಿದ ಹಿನ್ನೆಲೆ ಕ್ಷಮೆಯಾಚನೆ ಮಾಡಲಾಗಿದೆ. ಪ್ರಾಂಶುಪಾಲರು ಕ್ಷಮೆಯಾಚಿಸಿದರೂ ಕೇಳದೆ ಧರಣಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಬಳಿ ಹೈಡ್ರಾಮಾ ನಡೆದಿದೆ.

ಮೈಸೂರು: ಗ್ರಾಮಸಭೆ ವೇಳೆ ಗಲಾಟೆ, ಹೊಡೆದಾಟ

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹಾಡ್ಯ ಗ್ರಾಮ ಪಂಚಾಯತ್ ಗ್ರಾಮಸಭೆ ವೇಳೆ ಗಲಾಟೆಯಾಗಿ ಹೊಡೆದಾಟ ನಡೆದಿದೆ. ಬಿಜೆಪಿ, ಕಾಂಗ್ರೆಸ್​ ಬೆಂಬಲಿಗರ ನಡುವೆ ವಾಗ್ವಾದ, ಹೊಡೆದಾಟ ನಡೆದಿದೆ. ಮನೆ ಹಂಚಿಕೆ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆದಿದೆ. ಕುರ್ಚಿ, ಟೇಬಲ್​ ಎಳೆದಾಡಿ ಕಲ್ಲುಗಳನ್ನು ಬೀಸಿ ಹೊಡೆದಾಡಿಕೊಳ್ಳಲಾಗಿದೆ. ಕಂದೇಗಾಲದ ರಾಜಶೇಖರ, ಹಾಡ್ಯ ಗ್ರಾಮದ ಗಣೇಶ್​ಗೆ ಗಾಯ ಆಗಿದ್ದು ಮಹಿಳೆಯರು, ಮಕ್ಕಳು ಗಲಾಟೆ ವೇಳೆ ದಿಕ್ಕಾಪಾಲಾಗಿ ಓಡಿದ್ದಾರೆ. ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಆತ್ಮಹತ್ಯೆ ಯತ್ನ ಪ್ರಕರಣ; ಎಸ್​ಪಿ ಬಿ.ಎಂ. ಲಕ್ಷ್ಮೀಪ್ರಸಾದ್ ಸ್ಪಷ್ಟನೆ

ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಶಿವಮೊಗ್ಗ ಎಸ್​ಪಿ ಬಿ.ಎಂ. ಲಕ್ಷ್ಮೀಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ. ರೌಡಿ ಬಚ್ಚಾ ಅಲಿಯಾಸ್ ಜಮೀರ್ ಕುಮ್ಮಕ್ಕಿನಿಂದ ಕೃತ್ಯ ನಡೆದಿದೆ. ರೌಡಿ ಜಮೀರ್ ಜತೆ ಸೆಲ್‌ನಲ್ಲಿದ್ದ ಇಮ್ರಾನ್, ನದೀಮ್, ತೋಹಿಬ್ ಮೂವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಜೈಲಿನಿಂದಲೇ ಉದ್ಯಮಿಗೆ ಬಚ್ಚಾ ಜೀವ ಬೆದರಿಕೆ ಹಾಕಿದ್ದ. ಹೀಗಾಗಿ ಬಚ್ಚಾ ಮೊಬೈಲ್ ಪೊಲೀಸರು ಜಪ್ತಿ ಮಾಡಿದ್ದರು. ತುಂಗಾ ಠಾಣೆಯ ಪೊಲೀಸರು ಮೊಬೈಲ್ ಜಪ್ತಿ ಮಾಡಿದ್ದರು. ಈ ಘಟನೆಯ ಬಳಿಕ ವಿಚಲಿತನಾಗಿದ್ದ ರೌಡಿ ಬಚ್ಚಾ ಜೈಲಿನಲ್ಲಿ ಭಯದ ವಾತಾವರಣ ಸೃಷ್ಟಿಸಲು ಆತ್ಮಹತ್ಯೆ ಯತ್ನ ನಡೆಸಿದ್ದ. ಆತ್ಮಹತ್ಯೆಗೆ ಯತ್ನಿಸಿದ್ದ ಮೂವರಿಗೆ ಮೆಗ್ಗಾನ್‌ನಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಮೂವರು ಕೈದಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ನೆಲಮಂಗಲ ಬಳಿ ಸರಣಿ ಅಪಘಾತ ಸಂಭವಿಸಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆ

ಇದನ್ನೂ ಓದಿ: Murder: ಗೆಳೆಯನನ್ನು ಕೊಂದು, ರೈಲಿನ ಕೆಳಗೆ ಹಾಕಿ ಅಪಘಾತವೆಂದು ಕತೆ ಕಟ್ಟಿದ ಯುವಕ!