Murder: ಗೆಳೆಯನನ್ನು ಕೊಂದು, ರೈಲಿನ ಕೆಳಗೆ ಹಾಕಿ ಅಪಘಾತವೆಂದು ಕತೆ ಕಟ್ಟಿದ ಯುವಕ!

Crime News: ಮೃತ ವ್ಯಕ್ತಿ ಗಣೇಶ್ ತನ್ನ ತಾಯಿಯ ಬಗ್ಗೆ ಅಶ್ಲೀಲ ಕಾಮೆಂಟ್ ಮಾಡಿದ ಕಾರಣ ಆರೋಪಿ ಅಶೋಕ್ ಮುಖಿಯಾ ಎಂಬಾತ ಆತನನ್ನು ಕೊಲೆ ಮಾಡಿದ್ದಾನೆ.

Murder: ಗೆಳೆಯನನ್ನು ಕೊಂದು, ರೈಲಿನ ಕೆಳಗೆ ಹಾಕಿ ಅಪಘಾತವೆಂದು ಕತೆ ಕಟ್ಟಿದ ಯುವಕ!
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jan 29, 2022 | 4:19 PM

ಮುಂಬೈ: 19 ವರ್ಷದ ಯುವಕನೊಬ್ಬ ತನ್ನ ರೂಮ್‌ಮೇಟ್‌ನನ್ನು ರೈಲ್ವೆ ಹಳಿಗಳ ಮೇಲೆ ಚಾಕುವಿನಿಂದ ಇರಿದು ಕೊಂದು (Murder), ಚಲಿಸುತ್ತಿದ್ದ ರೈಲಿನಡಿಗೆ ತಳ್ಳಿದ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ (Maharashtra) ಬೆಳಕಿಗೆ ಬಂದಿದೆ. ಅಪರಾಧ ಮಾಡಿದ ಯುವಕನನ್ನು ಸರ್ಕಾರಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ರೈಲಿನ ಕೆಳಗೆ ಯುವಕನ ದೇಹವನ್ನು ಹಾಕಿ, ಅದೊಂದು ಅಪಘಾತವೆಂದು ಕತೆ ಕಟ್ಟಲು ಪ್ರಯತ್ನಿಸಿದ್ದ ಯುವಕ ಇದೀಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಮೊದಲು ಇದೊಂದು ಅಪಘಾತವೆಂದೇ ನಂಬಿದ್ದ ಪೊಲೀಸರು ಮೃತಪಟ್ಟ ಯುವಕನ ಸ್ನೇಹಿತರ ವಿಚಾರಣೆ ಮಾಡಿದಾಗ ಅಸಲಿ ಸತ್ಯ ಬಯಲಾಗಿದೆ. 

ಮೃತ ವ್ಯಕ್ತಿ ಗಣೇಶ್ ತನ್ನ ತಾಯಿಯ ಬಗ್ಗೆ ಅಶ್ಲೀಲ ಕಾಮೆಂಟ್ ಮಾಡಿದ ಕಾರಣ ಆರೋಪಿ ಅಶೋಕ್ ಮುಖಿಯಾ ಎಂಬಾತ ಆತನನ್ನು ಕೊಲೆ ಮಾಡಿದ್ದಾನೆ. ಗುರುವಾರ ರಾತ್ರಿ ಕಂಡಿವಲಿ ಮತ್ತು ಬೊರಿವಲಿ ರೈಲು ನಿಲ್ದಾಣಗಳ ನಡುವೆ ಆಘಾತಕಾರಿ ಘಟನೆ ಸಂಭವಿಸಿದೆ ಎಂಬ ವಿಷಯ ಉನ್ನತ ತನಿಖೆಯಿಂದ ತಿಳಿದುಬಂದಿದೆ. ಇಬ್ಬರೂ ಇತರ ಕೆಲವರೊಂದಿಗೆ ಪಾಯಿಸರ್ ಚಾಲ್‌ನ ಕೋಣೆಯಲ್ಲಿ ವಾಸಿಸುತ್ತಿದ್ದರು. ಅವರಿಬ್ಬರೂ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಇಬ್ಬರೂ ಸೇರಿದಂತೆ ಎಲ್ಲಾ ರೂಮ್‌ಮೇಟ್‌ಗಳು ಬಿಹಾರದ ಮಧುಬನಿಯವರಾಗಿದ್ದರು.

ಒಂದು ತಿಂಗಳ ಹಿಂದಷ್ಟೇ ಗಣೇಶ್ ಬಿಹಾರದಿಂದ ಬಂದಿದ್ದ. ವಿಚಾರಣೆ ವೇಳೆ ಅಶೋಕ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಗಣೇಶ್ ಆಗಾಗ ನನ್ನ ತಾಯಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದನಾದರೂ ನಡೆದ ಸಂಭಾಷಣೆಗಳ ಬಗ್ಗೆ ತಿಳಿಸಿರಲಿಲ್ಲ. ಗಣೇಶ್ ನನ್ನ ತಾಯಿಯ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದ, ಆಕೆ ಬೇರೆಯವರೊಂದಿಗೆ ಸಂಬಂಧ ಹೊಂದಿದ್ದಳು ಎಂದು ಹೇಳಿಕೆ ನೀಡಿದ್ದು ಅಶೋಕ್​ನನ್ನು ಕೆರಳಿಸಿತ್ತು. ಇದೇ ಕಾರಣಕ್ಕೆ ಆತ ತನ್ನ ಗೆಳೆಯನನ್ನು ಕೊಲೆ ಮಾಡಿದ್ದಾಗಿ ತಿಳಿಸಿದ್ದಾನೆ.

ಇಬ್ಬರೂ ಕೆಲವು ಸ್ನೇಹಿತರನ್ನು ಭೇಟಿ ಮಾಡಲು ರೈಲ್ವೆ ಹಳಿ ಬಳಿ ಹೋದಾಗ ಈ ಘಟನೆ ಸಂಭವಿಸಿದೆ. ಕಂಠಪೂರ್ತಿ ಕುಡಿದಿದ್ದ ಅವರ ನಡುವೆ ಮಾತಿಗೆ ಮಾತು ಬೆಳೆದು, ಅಶೋಕ್ ಗಣೇಶ್‌ಗೆ ಚಾಕುವಿನಿಂದ ಇರಿದಿದ್ದಾನೆ. ಬಳಿಕ ನಿಧಾನವಾಗಿ ಚಲಿಸುತ್ತಿದ್ದ ಗೂಡ್ಸ್ ರೈಲಿನ ಕೆಳಗೆ ತಳ್ಳಿ ಆ ಸ್ಥಳದಿಂದ ಪರಾರಿಯಾಗಿದ್ದಾನೆ. ಕೊಲೆಯಾದವನ ರೂಂ ಮೇಟ್​ಗಳನ್ನು ವಿಚಾರಣೆ ಮಾಡಿದಾಗ ಈ ವಿಷಯ ಬೆಳಕಿಗೆ ಬಂದಿದೆ ಎಂದು ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ: Murder: ಆಲ್ಕೋಹಾಲ್​ ಖರೀದಿಸಲು ಹಣ ಕೊಡದ ಗರ್ಭಿಣಿ ಹೆಂಡತಿಯನ್ನು ಕೊಂದ ಗಂಡ

Murder: ತವರು ಮನೆಗೆ ಹೋಗುತ್ತೇನೆಂದು ಹಠ ಮಾಡಿದ ಹೆಂಡತಿಯ ಕತ್ತು ಸೀಳಿ ಕೊಂದ ಗಂಡ!

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್