ಬೆಂಗಳೂರು, ಆಗಸ್ಟ್ 29: ಸಿಲಿಕಾನ್ ಸಿಟಿಯಲ್ಲಿ ಇಂದು ಮಳೆರಾಯ (rain) ಆರ್ಭಟಿಸಿದ್ದಾನೆ. ಮಧ್ಯಾಹ್ನ ಸುರಿದ ಮಳೆಗೆ ರಸ್ತೆಗಳು ಕೆರೆಯಾದಂತಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ. ಈ ಮದ್ಯ ಮಳೆಯಿಂದ ಮೆಟ್ರೋ ಹಳಿ ಮೇಲೆ ಮರ ವಾಲಿದೆ. ಹೀಗಾಗಿ ನಮ್ಮ ಮೆಟ್ರೋ (metro) ನೇರಳೆ ಮಾರ್ಗದಲ್ಲಿ ಸಂಜೆ 4.53ರಿಂದ 5.05ರವರೆಗೆ ಅಂದರೆ 12 ನಿಮಿಷ ಸಂಚಾರ ಸ್ಥಗಿತವಾಗಿತ್ತು.
ಮರ ತೆರವುಗೊಳಿಸಿದ ನಂತರ ಮೆಟ್ರೋ ರೈಲು ಸಂಚಾರ ಪುನಾರಂಭಿಸಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕಾರಿಗಳಿಂದ ಮಾಹಿತಿ ನೀಡಲಾಗಿದೆ. ಈಗಾಗಲೇ ನಗರದಲ್ಲಿರುವ ಒಣಗಿದ ಹಾಗೂ ಹಳೆ ಮರಗಳ ಕುರಿತು ಟಿವಿ9 ವರದಿ ಮಾಡಿದರೂ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ.
ಇದನ್ನೂ ಓದಿ: ಬೆಂಗಳೂರಿನಲ್ಲಿ ವರುಣನ ಅಬ್ಬರ: ದಿಢೀರ್ ಮಳೆಯಿಂದ ವಾಹನ ಸವಾರರು ಪರದಾಟ
ಧಾರಾಕಾರ ಮಳೆಗೆ ನಗರದಲ್ಲಿ ಕೆಲ ಅವಾಂತಗಳು ಸಂಭವಿಸಿದ್ದು, ಕೆಲವೆಡೆ ಮರಗಳು ಧರೆಗುರುಳಿವೆ. ಕೋರಮಂಗಲದ ಬಿಡಿಎ ಕಾಪ್ಲೆಕ್ಸ್ 8ನೇ ಮುಖ್ಯ ರಸ್ತೆ ಪಕ್ಕದಲ್ಲಿ ಪಾರ್ಕ್ ಮಾಡಿದ್ದ ಕಾರ್ ಮೇಲೆ ಮರ ಬಿದ್ದಿದೆ. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ವಾಹನ ಚಾಲಕ ಪಾರಾಗಿದ್ದಾರೆ. ಹಾಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಸದ್ಯ ಬಿದಿದ್ದ ಮರವನ್ನು ಬಿಬಿಎಪಿಂ ಪಾಲಿಕೆ ಸಿಬ್ಬಂದಿಗಳು ತೆರವುಗೊಳಿಸಿದ್ದಾರೆ. ಮಳೆಯಿಂದ ಅವಾಂತರ ಆದರು ಪಾಲಿಕೆ ಸನ್ನದ್ಧವಾಗಿಲ್ಲ. ಮಳೆಗೆ ಸಕಲ ರೀತಿಯ ಸಿದ್ಧತೆ ಎನ್ನುವ ಪಾಲಿಕೆ, ಧರೆಗುರುಳಿದ ಮರ ಎತ್ತಲು ಪಾಲಿಕೆ ಬಳಿ ಕ್ರೇನ್ ವ್ಯವಸ್ಥೆ ಇಲ್ಲ. ಕಾರು ಮಾಲೀಕ ವೇಣು ಕುಮಾರ್ ಕಾರು ಡ್ಯಾಮೇಜ್ ಆದ ನೋವಿನಲ್ಲಿದ್ದಾರೆ. ಆದರೂ ಅನಿವಾರ್ಯ 5 ಸಾವಿರ ರೂ. ಕೊಟ್ಟು ಮರ ತೆರವುಗೊಳಿಸಲೇಬೇಕು ಎಂದು ಕಾರು ಮಾಲೀಕ ಹೇಳಿದ್ದಾರೆ.
ಇದನ್ನೂ ಓದಿ: 4 ಕಿಮೀ ನಡೆದು ಶಾಲೆಗೆ ಹೋಗುವಾಗ ಕೆಟ್ಟ ಜನರ ಕಾಟ: ನಮ್ಮೂರಿಗೆ ಬಸ್ ಬಿಡಿ ಎಂದ ಶಾಲಾ ಬಾಲಾಕಿ
ಇನ್ನೂ ಬೆಂಗಳೂರಲ್ಲಿ ಭಾಗಶಃ ದೊಡ್ಡ ಮಳೆ ಪ್ರಾರಂಭವಾಗಿಲ್ಲ, ಈಗ ಆಗುತ್ತಿರುವ ಮಳೆಯಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರೂ ಪಾಲಿಕೆ ಅಧಿಕಾರಿಗಳು ಮಲ್ಕೊಂಡಿದ್ದಾರೆ ಇದರಿಂದ ಜನರಿಗೆ ತೊಂದರೆ ಆಗುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:26 pm, Thu, 29 August 24