ಬೆಂಗಳೂರಿನಲ್ಲಿ 6 ವರ್ಷದ ಮಕ್ಕಳಿಗೂ ಹೆಲ್ಮೆಟ್​​ ಕಡ್ಡಾಯ, ದಂಡ ವಸೂಲಿಗೆ ಮನೆಗೇ ಬರ್ತಾರೆ ಪೊಲೀಸರು

| Updated By: ಆಯೇಷಾ ಬಾನು

Updated on: Feb 10, 2024 | 9:02 AM

6 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿ ಬೆಂಗಳೂರು ಸಂಚಾರಿ ಪೊಲೀಸರು ಆದೇಶ ಹೊರಡಿಸಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಬಿಡುವಾಗ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು. ಶಾಲಾ ಆಟೋ, ಖಾಸಗಿ ಕಾರು, TT ವಾಹನಗಳಲ್ಲಿ ನಿಗದಿತ ಮಿತಗಿಂತ ಹೆಚ್ಚಿನ ಮಕ್ಕಳನ್ನು ಶಾಲೆಗೆ ಕರೆದೊಯ್ಯುವವರ ವಿರುದ್ಧವೂ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.

ಬೆಂಗಳೂರಿನಲ್ಲಿ 6 ವರ್ಷದ ಮಕ್ಕಳಿಗೂ ಹೆಲ್ಮೆಟ್​​ ಕಡ್ಡಾಯ, ದಂಡ ವಸೂಲಿಗೆ ಮನೆಗೇ ಬರ್ತಾರೆ ಪೊಲೀಸರು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಫೆ.10: ಶಾಲೆಗಳ ಬಳಿ ಸ್ಪೇಷಲ್ ಡ್ರೈವ್ ನಡೆಸುತ್ತಿದ್ದ ವೇಳೆ ಪುಟ್ಟ ಮಕ್ಕಳು ಹೆಲ್ಮೆಟ್ (Helmet) ಇಲ್ಲದೆ ಬಂದ ಹಿನ್ನಲೆ 6 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿ ಬೆಂಗಳೂರು ಸಂಚಾರಿ ಪೊಲೀಸರು (Bengaluru Traffic Police) ಆದೇಶ ಹೊರಡಿಸಿದ್ದಾರೆ. ಬೆಂಗಳೂರಿನಲ್ಲಿ 6 ವರ್ಷ ಮೇಲ್ಪಟ್ಟ ಮಕ್ಕಳಿಗೆ ಹೆಲ್ಮೆಟ್​ ಕಡ್ಡಾಯ. ಶಾಲೆಗೆ ಬಿಡುವಾಗ ಮಕ್ಕಳಿಗೆ ಹೆಲ್ಮೆಟ್​ ಕಡ್ಡಾಯವಾಗಿ ಹಾಕಬೇಕು ಎಂದು ಸಂಚಾರಿ ಪೊಲೀಸರು ಸೂಚನೆ ನೀಡಿದ್ದಾರೆ.

ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಬಿಡುವಾಗ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು. ಮೂರಕ್ಕೂ ಹೆಚ್ಚು ಮಕ್ಕಳನ್ನು ಗಾಡಿಯಲ್ಲಿ ಕರೆದುಕೊಂಡು ಹೋಗೋ ಪೋಷಕರ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಸಂಚಾರಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಶಾಲಾ ಆಟೋ, ಖಾಸಗಿ ಕಾರು, TT ವಾಹನಗಳಲ್ಲಿ ನಿಗದಿತ ಮಿತಗಿಂತ ಹೆಚ್ಚಿನ ಮಕ್ಕಳನ್ನು ಶಾಲೆಗೆ ಕರೆದೊಯ್ಯುವವರ ವಿರುದ್ಧವೂ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.

ದಂಡ ವಸೂಲಿಗೆ ವಾಹನ ಮಾಲೀಕರ ಮನೆಗೆ ಬರಲಿದ್ದಾರೆ ಖಾಕಿ

ರಸ್ತೆಯುದ್ದಕ್ಕೂ ಪೊಲೀಸರಿದ್ರು ಕೆಲ ವಾಹನ ಸವಾರರು ಕೇರ್ ಮಾಡಲ್ಲ. ಸಂಚಾರ ನಿಯಮ ಉಲ್ಲಂಘನೆ ಮಾಡೋದನ್ನೆ ಕಾಯಕ ಮಾಡಿಕೊಂಡಿದ್ದಾರೆ. ಪ್ರತಿದಿನ ಸಂಚಾರ ನಿಯಮ‌ ಉಲ್ಲಂಘನೆ ಮಾಡಿ ನಮಗೂ ಅದಕ್ಕೂ ಸಂಬಂಧವೇ ಇಲ್ಲ ಅನ್ನೋ‌ ರೀತಿ ಇದ್ದಾರೆ. ಅಂತಹ ವಾಹನ ಸವಾರರಿಗೆ ಶಾಕ್ ಕೊಡಲು ಬೆಂಗಳೂರು ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ. ಮನೆ ಮನೆಗೆ ತೆರಳಿ ದಂಡ ವಸೂಲಿ ಮಾಡೊ ಕೆಲಸ ಶುರು ಮಾಡಿದ್ದಾರೆ‌.

ಇದನ್ನೂ ಓದಿ: ಸಂಚಾರಿ ಪೊಲೀಸ್​ ಇಲಾಖೆಯಿಂದ ರಾಜ್ಯಾದ್ಯಂತ ಇ-ಚಲನ್ ದಂಡ ವ್ಯವಸ್ಥೆ ಜಾರಿ, ಸಬೂಬು ಹೇಳಿ ತಪ್ಪಿಸಿಕೊಳ್ಳಲು ಅವಕಾಶವಿಲ್ಲ

ಬೆಂಗಳೂರು, ಕರ್ನಾಟಕದ ರಾಜಧಾನಿ ಮತ್ತು ಭಾರತದ ಐಟಿ ಹಬ್. ನಾವೀಣ್ಯತೆ ಮತ್ತು ತಾಂತ್ರಿಕ ಪರಿಣಿತಿಯನ್ನು ಪ್ರತಿನಿಧಿಸುವ ರೋಮಾಂಚನ ಮಹಾನಗರ. ಬೆಳೆಯುತ್ತಿರುವ ಜನಸಂಖ್ಯೆ ಮತ್ತು ಹೆಚ್ಚುತ್ತಿರೊ ವಾಹನ ಸಂಖ್ಯೆಯಿಂದಾಗಿ ಬೆಂಗಳೂರು ನಗರ ಎದುರಿಸುತ್ತಿರೊ ಮುಖ್ಯ ಸಮಸ್ಯೆ ಎಂದರೆ ಸಂಚಾರ ದಟ್ಟಣೆ. ಇದ್ರ ಜೊತೆಗೆ ಸಂಚಾರ ನಿಯಮದ ಉಲ್ಲಂಘನೆ. ಬೆಂಗಳೂರಲ್ಲಿ ಪ್ರತಿ ದಿನ 1.2 ಕೋಟಿ ವಾಹನಗಳು ಸಂಚರಿಸುತ್ತವೆ. ಮತ್ತು 2,300 ಹೊಸ ವಾಹನಗಳು ಸೇರ್ಪಡೆಯಾಗುತ್ತಿದೆ. ಹೀಗೆ ಬರುವ ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಟನೆ ಮಾಡ್ತಿದ್ದಾರೆ. ದಂಡ ಹೊಂದಿರೊ ವಾಹನ ಸವಾರರನ್ನು ಪತ್ತೆ ಮಾಡಿ ಮನೆಗೆ ತೆರಳಿ ದಂಡದ ಹಣ ವಸೂಲಿ‌ ಮಾಡ್ತಿದ್ದಾರೆ.ಬೆಂಗಳೂರಲ್ಲಿ 50 ಸಾವಿರಕ್ಕೂ ಅಧಿಕ ದಂಡ ಹೊಂದಿರೊ 2681 ವಾಹನ ಇದ್ದು ದಂಡ ವಸೂಲಿ ಪ್ರಕ್ರಿಯೆ ಕೂಡ ಆರಂಭವಾಗಿದೆ. ಇದುವರೆಗೆ 120 ಜನರಿಂದ ದಂಡ ವಸೂಲಿ ಕೂಡ ಮಾಡಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ