FASTag ಮಾಡಿಸಿಲ್ಲವೇ? ಹಾಗಾದ್ರೆ ಇನ್ನೂ ತಡ ಮಾಡಬೇಡಿ.. ಯಾಕೆ ಗೊತ್ತಾ?

2021ರ ಜನವರಿ 1ರಿಂದ ಎಲ್ಲ ನಾಲ್ಕು ಚಕ್ರದ ವಾಹನಗಳಿಗೂ FASTag ಕಡ್ಡಾಯಗೊಳಿಸಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈಗಾಗಲೇ ಆದೇಶ ಹೊರಡಿಸಿದೆ. FASTag ಮಾಡಿಸೋದು ಹೇಗೆ, ಆಗಾಗ ರೀಚಾರ್ಜ್ ಮಾಡಿಸುವುದು ಹೇಗೆ ಎಂಬ ವಿವರ ಇಲ್ಲಿದೆ.

  • Updated On - 12:31 pm, Tue, 16 February 21 Edited By: sadhu srinath
FASTag ಮಾಡಿಸಿಲ್ಲವೇ? ಹಾಗಾದ್ರೆ ಇನ್ನೂ ತಡ ಮಾಡಬೇಡಿ.. ಯಾಕೆ ಗೊತ್ತಾ?
ಪ್ರಾತಿನಿಧಿಕ ಚಿತ್ರ

ಬೆಂಗಳೂರು: 2021ರ ಜನವರಿ 1ರಿಂದ ಎಲ್ಲಾ ನಾಲ್ಕು ಚಕ್ರದ ವಾಹನಗಳಿಗೂ FASTag ಕಡ್ಡಾಯಗೊಳಿಸಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈಗಾಗಲೇ ಆದೇಶ ಹೊರಡಿಸಿದೆ. ಟೋಲ್ ಪ್ಲಾಜಾಗಳಲ್ಲಿ ವಾಹನ ದಟ್ಟಣೆ ಆಗದಿರಲು  FASTag ಸಹಕಾರಿ. ಮುಂಚಿತವಾಗಿ ಬ್ಯಾಂಕ್ ಲಿಂಕ್ ಮಾಡಿಸಿಕೊಳ್ಳುವ ಮೂಲಕ, ನಗದು ರಹಿತ ಸಂಚಾರಕ್ಕೂ ಇದು ಅನುಕೂಲ ಮಾಡಿಕೊಡಲಿದೆ.

ಹಾಗಾದ್ರೆ, FASTag ಪಡೆಯೋದು ಹೇಗೆ, ಅದಕ್ಕೆ ಯಾವ ಕ್ರಮ ಅನುಸರಿಸಬೇಕು? FASTag  ರೀಚಾರ್ಜ್ ಮಾಡೋದು ಹೇಗೆ ಎಂದು ಟಿವಿ9 ಡಿಜಿಟಲ್ ವಿವರಿಸಿದೆ.

FASTag ಮಾಡಿಸಿಕೊಳ್ಳೋದು ಹೇಗೆ?
ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಟೋಲ್ ಗೇಟ್​, ವಿವಿಧ ಬ್ಯಾಂಕ್​​ಗಳು, ಪ್ರಾದೇಶಿಕ ಸಾರಿಗೆ ಕಚೇರಿ, ಪೆಟ್ರೋಲ್ ಬಂಕ್, ಸಾಮಾನ್ಯ ಸೇವಾ ಕೇಂದ್ರ ಮುಂತಾದೆಡೆ FASTag ಲಭ್ಯವಿದೆ. ಅಧಿಕೃತ ದಾಖಲಾತಿಗಳೊಂದಿಗೆ ಅತ್ಯಂತ ಸುಲಭವಾಗಿ FASTag ಪಡೆಯಬಹುದು. ಸರಳವಾಗಿ ಈ FASTag ಆ್ಯಪ್​ನ ಮೂಲಕವೂ ನೋಂದಣಿ ಮಾಡಿಕೊಳ್ಳಬಹುದು. ಗೂಗಲ್ ಪ್ಲೇಸ್ಟೋರ್  ಮೂಲಕವೂ  FASTag  ಆ್ಯಪ್ ಡೌನ್​ಲೋಡ್ ಮಾಡಬಹುದು.

FASTag ಗೆ ಮಾಡಿಸಲು ಏನೆಲ್ಲ ಬೇಕು?
ವಾಹನ ನೋಂದಣಿ ಪ್ರಮಾಣ ಪತ್ರ (RC Book), ವಾಹನ ಮಾಲೀಕರ ಪಾಸ್ ಪೋರ್ಟ್ ಸೈಜಿನ ಭಾವಚಿತ್ರ ಮತ್ತು ಯಾವುದಾದರೂ ಒಂದು ಗುರುತಿನ ಚೀಟಿ (ಡ್ರೈವಿಂಗ್ ಲೈಸನ್ಸ್, ಪ್ಯಾನ್ ಕಾರ್ಡ್, ಪಾಸ್ ಪೋರ್ಟ್, ಮತದಾರರ ಗುರುತಿನ ಚೀಟಿ ಅಥವಾ ಆಧಾರ್) FASTag ಪಡೆಯಬಹುದು.

ಬ್ಯಾಂಕ್ ವೆಬ್​ಸೈಟ್​ಗಳಲ್ಲಿ FASTag ರೀಚಾರ್ಜ್ ಮಾಡುವುದು ಹೇಗೆ?
FASTagರೀಚಾರ್ಜ್​ನ್ನು ಅತ್ಯಂತ ಸರಳವಾಗಿ ಆನ್​ಲೈನ್​ನಲ್ಲೇ ಮಾಡಬಹುದು. ದೇಶದ 23 ಬ್ಯಾಂಕ್​ಗಳು FASTag  ರೀಚಾರ್ಜ್ ಸೇವೆ ನೀಡುತ್ತಿವೆ. ಈ ಬ್ಯಾಂಕ್​ಗಳ ವೆಬ್​ಸೈಟ್​ಗಳ ಮೂಲಕ ರೀಚಾರ್ಜ್ ಮಾಡಬಹುದು. HDFC PayZapp, SBI YONO ಮುಂತಾದ ಆ್ಯಪ್​ಗಳಲ್ಲೂ ಈ ಸೇವೆ ಲಭ್ಯವಿದೆ.

ಬ್ಯಾಂಕ್ ಮತ್ತು FASTag ಅಕೌಂಟ್​ಗಳಿಗೆ ಪರಸ್ಪರ ಲಿಂಕ್ ಮಾಡಿಕೊಳ್ಳಬೇಕು. ನೆಟ್ ಬ್ಯಾಂಕಿಂಗ್​ನಲ್ಲಾದರೆ ವಾಹನದ ಸಂಖ್ಯೆಯನ್ನು ನಮೂದಿಸುವ ಮೂಲಕ ರೀಚಾರ್ಜ್ ಮಾಡಬಹುದು. ವಿವಿಧ ಬ್ಯಾಂಕ್​ಗಳಲ್ಲಿ ಈ ವಿಧಾನ ಭಿನ್ನವಾಗಿದ್ದರೂ ತೀರಾ ಕ್ಲಿಷ್ಟಕರವಾಗೇನೂ ಇಲ್ಲ.

ಗೂಗಲ್ ಪೇ ಮೂಲಕ ರೀಚಾರ್ಜ್ ಮಾಡೋದೇಗೆ?

ಬ್ಯಾಂಕ್ ಅಕೌಂಟನ್ನು ಫಾಸ್ಟಾಗ್​ಗೆ ಲಿಂಕ್ ಮಾಡಿಕೊಳ್ಳಿ. ಗೂಗಲ್ ಪೇನಲ್ಲಿ ನ್ಯೂ ಪೇಮೆಂಟ್ ಕ್ಲಿಕ್ ಮಾಡಿ. ಬಿಲ್ ಪೇಮೆಂಟ್​ನಲ್ಲಿ FASTag ಕಾಣಿಸುತ್ತದೆ. ಅಲ್ಲಿ ನಿಮ್ಮ ಬ್ಯಾಂಕ್​ನ್ನು ಆಯ್ಕೆ ಮಾಡಿ. ನಂತರ ಕಾಣಿಸುವ ಪೇಜ್​ನಲ್ಲಿ Get Started ಆಯ್ಕೆ ಮಾಡಿ ನಿಮ್ಮ ವಾಹನದ ಸಂಖ್ಯೆ ನಮೂದಿಸಿದರೆ ನಿಮ್ಮ FASTag ವಿವರ ಕಾಣಿಸುತ್ತದೆ. ನಂತರ, ಗೂಗಲ್ ಪೇನಲ್ಲಿ ಸಹಜವಾಗಿ ವ್ಯವಹಾರದಂತೆಯೇ ನಿಮ್ಮ FASTag  ರೀಚಾರ್ಜ್ ಮಾಡಬಹುದು.

ಫೋನ್ ಪೇ ಮೂಲಕ..

ಫೋನ್ ಪೇ ಯಲ್ಲಿ ಬಿಲ್ ಪೇಮೆಂಟ್ಸ್ ವಿಭಾಗದಲ್ಲಿ FASTag  ರೀಚಾರ್ಜ್ ನಿಮ್ಮ ಕಣ್ಣಿಗೆಟಕುತ್ತದೆ. ನಿಮ್ಮ FASTag ಅಕೌಂಟಿನ ಬ್ಯಾಂಕ್ ಆಯ್ಕೆ ಮಾಡಿ. ವಾಹನ ಸಂಖ್ಯೆ ನಮೂದಿಸಿ, ಎಷ್ಟು ಹಣ ರೀಚಾರ್ಜ್ ಮಾಡಬೇಕೆಂದು ನಮೂದಿಸಿ ಪಾವತಿಸಿ.

ಪೇಟಿಎಂನಲ್ಲಿ ರೀಚಾರ್ಜ್ ಹೇಗೆ ಮಾಡೋದು?
ಪೇಟಿಎಂನಲ್ಲಿ ‘ಆಲ್ ಸರ್ವಿಸಸ್’ನಲ್ಲಿ ರೀಚಾರ್ಜ್ ಆ್ಯಂಡ್ ಪೇ ಬಿಲ್ ಸರ್ವೀಸಸ್ ಆಯ್ಕೆ ಮಾಡಿ. ನಿಮ್ಮ FASTagಬ್ಯಾಂಕ್ ಅಕೌಂಟ್ ಕ್ಲಿಕ್ಕಿಸಿ ಪಾವತಿಸಿ. ಪೇಟಿಎಂ  ‘Manage FASTag’ ಎಂಬ ಆಯ್ಕೆ ನೀಡಿದ್ದು, ವೈಯಕ್ತಿಕ ಮತ್ತು ವ್ಯಾವಹಾರಿಕ ಎಂಬ ಎರಡು ಆಯ್ಕೆಗಳನ್ನೂ ಸಹ ನೀಡುತ್ತಿದೆ.

ಓದುಗರೇ, ನಿಮ್ಮ ನಾಲ್ಕು ಚಕ್ರದ ವಾಹನಕ್ಕೆ ಇನ್ನೂ FASTag ಮಾಡಿಸದಿದ್ದರೆ 2021ಕ್ಕಿಂತ ಮುಂಚೆಯೇ ಜಾಗೃತರಾಗಿ, FASTag ಮಾಡಿಸಿ. ನಗದು ಮತ್ತು ಟ್ರಾಫಿಕ್ ರಹಿತ ಹೆದ್ದಾರಿ ಪ್ರಯಾಣ ಮಾಡಿ..Happy Journey!

ಜನವರಿ 1ರಿಂದ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ