ವಕೀಲರ ಡ್ರೆಸ್ ಕೋಡ್​ಗಿದ್ದ ವಿನಾಯಿತಿ ರದ್ದು: ಫೆಬ್ರವರಿ 1ರಿಂದ ಕಪ್ಪು ಕೋಟ್ ಕಡ್ಡಾಯ

ವಕೀಲರ ಡ್ರೆಸ್ ಕೋಡ್​ಗಿದ್ದ ವಿನಾಯಿತಿ ರದ್ದು: ಫೆಬ್ರವರಿ 1ರಿಂದ ಕಪ್ಪು ಕೋಟ್ ಕಡ್ಡಾಯ
ಪ್ರಾತಿನಿಧಿಕ ಚಿತ್ರ

ವಕೀಲರ ಡ್ರೆಸ್ ಕೋಡ್​ಗಿದ್ದ ವಿನಾಯಿತಿಯನ್ನು ರದ್ದು ಮಾಡಲಾಗಿದೆ ಎಂದು ಸಿಜೆ ಆದೇಶದಂತೆ ರಿಜಿಸ್ಟ್ರಾರ್ ಜನರಲ್ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಫೆ.1ರಿಂದ ವಕೀಲರಿಗೆ ಕಪ್ಪು ಕೋಟ್, ಗೌನ್ ಮತ್ತು ಬ್ಯಾಂಡ್ ಧರಿಸುವುದು ಕಡ್ಡಾಯ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

KUSHAL V

|

Jan 19, 2021 | 7:38 PM

ಬೆಂಗಳೂರು: ವಕೀಲರ ಡ್ರೆಸ್ ಕೋಡ್​ಗಿದ್ದ ವಿನಾಯಿತಿಯನ್ನು ರದ್ದು ಮಾಡಲಾಗಿದೆ ಎಂದು ಸಿಜೆ ಆದೇಶದಂತೆ ರಿಜಿಸ್ಟ್ರಾರ್ ಜನರಲ್ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಫೆಬ್ರವರಿ 1ರಿಂದ ವಕೀಲರಿಗೆ ಕಪ್ಪು ಕೋಟ್, ಗೌನ್ ಮತ್ತು ಬ್ಯಾಂಡ್ ಧರಿಸುವುದು ಕಡ್ಡಾಯ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಕೊವಿಡ್ ಹಿನ್ನೆಲೆಯಲ್ಲಿ, ಈ ಹಿಂದೆ, ವಕೀಲರ ಡ್ರೆಸ್ ಕೋಡ್​ಗೆ ವಿನಾಯಿತಿ ನೀಡಲಾಗಿತ್ತು. ಇದೀಗ, ಹೈಕೋರ್ಟ್ ಆವರಣಕ್ಕೆ ವಕೀಲರ ವಾಹನಗಳಿಗೂ ಅನುಮತಿ ನೀಡಲಾಗಿದೆ. ಜೊತೆಗೆ, ಕ್ಯಾಂಟೀನ್​ನಲ್ಲಿ ಶೇ.50ರಷ್ಟು ಕುರ್ಚಿ ಬಳಕೆಗೂ ಅನುಮತಿ ನೀಡಲಾಗಿದೆ.

ಇದಲ್ಲದೆ, ನ್ಯಾಯಾಲಯದ ಆವರಣದಲ್ಲಿ ಮಾಸ್ಕ್ ಬಳಕೆ ಕಡ್ಡಾಯವಾಗಿದೆ. ಈ ಎಲ್ಲಾ ಅಂಶಗಳನ್ನು ಸಿಜೆ ಆದೇಶದಂತೆ ರಿಜಿಸ್ಟ್ರಾರ್ ಜನರಲ್ ಮಾಧ್ಯಮ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.

ಬೆಳ್ಳಂದೂರು ಜಮೀನು ಡಿನೋಟಿಫಿಕೇಶನ್ ಕೇಸ್‌: ಸಿಎಂ B.S. ಯಡಿಯೂರಪ್ಪಗೆ ಬಿಗ್‌ ರಿಲೀಫ್‌

Follow us on

Related Stories

Most Read Stories

Click on your DTH Provider to Add TV9 Kannada