ಬೆಂಗಳೂರು: ರಸ್ತೆ ಬದಿ ಆಟಿಕೆ ಮಾರುವ ಮಕ್ಕಳ ಬಗ್ಗೆ ಮಾಹಿತಿ ಸಂಗ್ರಹಿಸಿ ಎಂದು BBMP ಹಾಗೂ ಪೊಲೀಸರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಮಕ್ಕಳ ಪುನರ್ವಸತಿಗಾಗಿ ಅಂಕಿ ಅಂಶ ಸಂಗ್ರಹಿಸಬೇಕು. ಜೊತೆಗೆ, ಅವರನ್ನು ಕಡ್ಡಾಯ ಶಿಕ್ಷಣದ ಹಕ್ಕಿನಡಿ ತರುವ ಉದ್ದೇಶ ಇರಲಿ ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ. ದಂಡನಾತ್ಮಕ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಕೋರ್ಟ್ ಸೂಚನೆ ಕೊಟ್ಟಿದೆ. ಲೆಟ್ಜ್ ಕಿಟ್ಜ್ ಫೌಂಡೇಷನ್ ಕಡೆಯಿಂದ ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು.
ಆಂಜನೇಯರೆಡ್ಡಿ ಸಲ್ಲಿಸಿದ್ದ PIL ಇತ್ಯರ್ಥಪಡಿಸಿದ ಹೈಕೋರ್ಟ್
ಇತ್ತ, KSPCB ಸದಸ್ಯರಾಗಿ ಜಿ.ಮರಿಸ್ವಾಮಿ ನೇಮಕಾತಿಯನ್ನು ರಾಜ್ಯ ಸರ್ಕಾರ ರದ್ದುಪಡಿಸಿ ಆದೇಶ ನೀಡಿದ ಹಿನ್ನೆಲೆಯಲ್ಲಿ ಆಂಜನೇಯರೆಡ್ಡಿ ಸಲ್ಲಿಸಿದ್ದ PILನ ಹೈಕೋರ್ಟ್ ಇತ್ಯರ್ಥಪಡಿಸಿದೆ. ಬೆಂಗಳೂರು ನಗರ ಜಿ.ಪಂ. ಅಧ್ಯಕ್ಷರಾಗಿರುವ ಜಿ.ಮರಿಸ್ವಾಮಿ ಅವರನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯರಾಗಿ ನೇಮಿಸಲಾಗಿತ್ತು.
ಆದರೆ, ಹೈಕೋರ್ಟ್ ಆದೇಶ ಉಲ್ಲಂಘಿಸಿ ನೇಮಕಾತಿ ಮಾಡಲಾಗಿದೆ ಎಂದು ಆರೋಪ ಮಾಡಿ PIL ಸಲ್ಲಿಸಲಾಗಿತ್ತು. ಹೀಗಾಗಿ, ಸರ್ಕಾರ ಮತ್ತು ಜಿ.ಮರಿಸ್ವಾಮಿಗೆ ಹೈಕೋರ್ಟ್ ನೋಟಿಸ್ ನೀಡಿತ್ತು.