ಬೆಂಗಳೂರು: ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಶಿಫಾರಸಿನಂತೆ BWSSB ಸದಸ್ಯರನ್ನಾಗಿ ರುದ್ರೇಗೌಡ ಎಂಬವವರು ನೇಮಕವಾಗಿರುವುದನ್ನು ಪ್ರಶ್ನಿಸಿ ಜಲಮಂಡಳಿಯ SC, ST ನೌಕರರ ಸಂಘ ಹೈಕೋರ್ಟ್ಗೆ PIL ಸಲ್ಲಿಸಿತ್ತು. ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಹುದ್ದೆಗೆ ಸೂಕ್ತ ಅರ್ಹತೆ ಇಲ್ಲದ ರುದ್ರೇಗೌಡರನ್ನು ನೇಮಕ ಮಾಡಲಾಗಿದೆ ಎಂದು ಸಂಘ ಉಲ್ಲೇಖಿಸಿತ್ತು. High Court expresses displeasure against DV Sadananda Gowda
ಇದೀಗ, ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ಕೇಂದ್ರ ಸಚಿವರ ಶಿಫಾರಸಿನ ನೇಮಕಕ್ಕೆ ತನ್ನ ಅಸಮಾಧಾನ ವ್ಯಕ್ತಪಡಿಸಿದೆ. ಜೊತೆಗೆ, ಸಂಜೆ 4.45ರೊಳಗೆ ನೇಮಕಾತಿ ಕುರಿತು ನಿಲುವು ತಿಳಿಸಿ ಇಲ್ಲವಾದ್ರೆ ಕೇಂದ್ರ ಸಚಿವರನ್ನ ಪ್ರತಿವಾದಿ ಮಾಡುವುದಾಗಿ ಎಚ್ಚರಿಕೆ ಸಹ ನೀಡಿದೆ. ಸಿಜೆ A.S.ಒಕಾ, ನ್ಯಾ.ಸಚಿನ್ ಶಂಕರ್ ಮಗದುಮ್ರವರ ಪೀಠ ಈ ಎಚ್ಚರಿಕೆ ನೀಡಿದೆ.
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ BWSSB ಸದಸ್ಯರಾಗಿ ರುದ್ರೇಗೌಡರ ನೇಮಕಕ್ಕೆ ಶಿಫಾರಸು ಮಾಡಿದ್ದರು. ಶಿಫಾರಸಿನಂತೆ ನೇಮಕಾತಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಸಹ ಸೂಚಿಸಿದ್ದರು ಎಂದು ತಿಳಿದುಬಂದಿದೆ.
ಇನ್ನು, ಹೈಕೋರ್ಟ್ ಸೂಚನೆಯಂತೆ ನಿಲುವು ತಿಳಿಸಿದ ಸರ್ಕಾರ 3 ವಾರಗಳಲ್ಲಿ ಜಲಮಂಡಳಿ ಪುನರ್ ರಚಿಸುವುದಾಗಿ ಹೇಳಿದೆ. ಹೈಕೋರ್ಟ್ಗೆ ಸರ್ಕಾರಿ ವಕೀಲರು ಈ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ 3 ವಾರಗಳ ಕಾಲ ಮುಂದೂಡಿದೆ.
ಇದೂ ಓದಿ: BDAನಲ್ಲಿ ಮತ್ತೊಂದು ಕರ್ಮಕಾಂಡ: BBMP ಮಾಜಿ ಕಾರ್ಪೊರೇಟರ್ ವಿರುದ್ಧವೇ FIR ದಾಖಲು
Published On - 4:58 pm, Fri, 12 February 21