BDAನಲ್ಲಿ ಮತ್ತೊಂದು ಕರ್ಮಕಾಂಡ: BBMP ಮಾಜಿ ಕಾರ್ಪೊರೇಟರ್ ವಿರುದ್ಧವೇ FIR ದಾಖಲು

BDA Site Fraud | ರಾತ್ರೋರಾತ್ರಿ ನನ್ನ ಸೈಟ್​ಗೆ ಬೇಲಿ ಹಾಕಿ ಸೈಟ್ ಕಬಳಿಕೆಗೆ ಪ್ಲ್ಯಾನ್ ಮಾಡಿದ್ದಾರೆ ಎಂದು ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಮುನಿರಾಜು ವಿರುದ್ಧ ಪ್ರಸನ್ನ ಗುರೂಜಿ ಎಂಬುವವರು ಗಂಭೀರವಾಗಿ ಆರೋಪ ಮಾಡಿದ್ದಾರೆ. ಸದ್ಯ ಈಗ ಮಾಜಿ ಕಾರ್ಪೊರೇಟರ್ ಮುನಿರಾಜು ವಿರುದ್ಧ FIR ದಾಖಲಾಗಿದೆ.

BDAನಲ್ಲಿ ಮತ್ತೊಂದು ಕರ್ಮಕಾಂಡ: BBMP ಮಾಜಿ ಕಾರ್ಪೊರೇಟರ್ ವಿರುದ್ಧವೇ FIR ದಾಖಲು
ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಮುನಿರಾಜು (ಎಡ)
Follow us
ಆಯೇಷಾ ಬಾನು
|

Updated on:Feb 12, 2021 | 12:34 PM

ಬೆಂಗಳೂರು: ಬಿಡಿಎ ಭ್ರಷ್ಟ ಕೈಗಳಿಂದ ಜನಸಾಮಾನ್ಯರಿಗಷ್ಟೇ ಅಲ್ಲ, ಗಣ್ಯರಿಗೂ ದೋಖಾ ಆಗ್ತಿದೆ. ಬಿಡಿಎನಲ್ಲಿ ಮತ್ತೊಂದು ಭಯಾನಕ ಕರ್ಮಕಾಂಡ ಬಯಲಾಗಿದೆ. ಮುಖ್ಯಮಂತ್ರಿ BS ಯಡಿಯೂರಪ್ಪಗೆ ದೂರು ನೀಡಿದ್ರೂ ಭ್ರಷ್ಟರಿಗೆ ಭಯವಿಲ್ಲ. ಅಮಾಯಕ ನಿವೇಶನದಾರರಿಗೆ ಭ್ರಷ್ಟರಿಂದ ದೋಖಾ ಆಗುತ್ತಿದೆ. ಸೈನಿಕರು, ಸಿನಿಮಾದವರು, ರಾಜಕಾರಣಿಗಳಿಗೂ ವಂಚನ ಮಾಡಲಾಗಿದೆ. ಬಿಡಿಎ ಸೈಟ್ ಖರೀದಿಸಿದ್ದ ಪ್ರಸನ್ನ ಗುರೂಜಿಗೂ ವಂಚನೆ ಮಾಡಲಾಗಿದೆಯಂತೆ.

ರಾತ್ರೋರಾತ್ರಿ ನನ್ನ ಸೈಟ್​ಗೆ ಬೇಲಿ ಹಾಕಿ ಸೈಟ್ ಕಬಳಿಕೆಗೆ ಪ್ಲ್ಯಾನ್ ಮಾಡಿದ್ದಾರೆ ಎಂದು ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಮುನಿರಾಜು ವಿರುದ್ಧ ಪ್ರಸನ್ನ ಗುರೂಜಿ ಎಂಬುವವರು ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಈಗ ಮಾಜಿ ಕಾರ್ಪೊರೇಟರ್ ಮುನಿರಾಜು ವಿರುದ್ಧ FIR ದಾಖಲಾಗಿದೆ. 2014ರಲ್ಲಿ ಪ್ರಸನ್ನ ಗುರೂಜಿ ತನ್ನ ಪತ್ನಿ ಹೆಸರಲ್ಲಿ ನಾಗರಬಾವಿ 9ನೇ ಬ್ಲಾಕ್‌ನಲ್ಲಿ ಬಿಡಿಎ ಸೈಟ್ ಖರೀದಿಸಿದ್ದರು. ಈ ಸೈಟ್ ಮುನಿರಾಜು ಕಬಳಿಸಿದ್ದಾರೆಂದು ಗುರೂಜಿ ಆರೋಪ ಮಾಡಿದ್ದಾರೆ. ಅಲ್ಲದೆ ಈ ಬಗ್ಗೆ ಮುನಿರಾಜುಗೆ ಪ್ರಶ್ನೆ ಮಾಡಿದರೆ ತಮ್ಮ ಹೆಸರಿನಲ್ಲಿ ಸೈಟ್ ಇದೆ ಅಂತಾರೆ. ಬಿಡಿಎನಿಂದ ನೋಂದಣಿಯಾಗಿದೆ ಎಂದು ಹೇಳುತ್ತಾರೆ. ಈಗಾಗ್ಲೇ ಖರೀದಿಸಿದ್ದ ಸೈಟ್ ಅವರು ಪಡೆದಿದ್ದು ಹೇಗೆ? ಎಂದು ಗುರೂಜಿ ಪ್ರಶ್ನಿಸಿದ್ದಾರೆ.

ಇನ್ನು 4 ಕೋಟಿ ಬೆಲೆಬಾಳುವ ಜಾಗ ಮುನಿರಾಜು ಹೆಸರಿಗೆ ಕೇವಲ ₹24 ಲಕ್ಷಕ್ಕೆ ನೋಂದಣಿಯಾಗಿದೆ. ಈಗಾಗಲೇ ಅಲಾಟೀಸ್‌ಗೆ ಜಾಗ ಹಂಚಿಕೆಯಾಗಿತ್ತು. ಆದ್ರೆ ಗುಂಟೆ ಲೆಕ್ಕದಲ್ಲಿ ಬಿಡಿಎನಿಂದ ಮುನಿರಾಜುಗೆ ಹಂಚಿಕೆಯಾಗಿದೆ. ಆ ಜಾಗವನ್ನು ಇವರಿಗೆ ಹೇಗೆ ಹಂಚಿಕೆ ಮಾಡಿದ್ದಾರೆ? ಬಿಡಿಎ ಅಧಿಕಾರಿಗಳು ಲಂಚ ಪಡೆದಿದ್ದಾರೆ. ಭ್ರಷ್ಟ ಅಧಿಕಾರಿಗಳು, ಬ್ರೋಕರ್‌ಗಳಿಂದ ಅವ್ಯವಹಾರ ನಡೆದಿದೆ. ತಮಗೆ ಧಮ್ಕಿ ಹಾಕಿ ಸೈಟ್ ಕಬಳಿಸಿದ್ದಾರೆಂದು ಪ್ರಸನ್ನ ಗುರೂಜಿ ಗಂಭೀರವಾಗಿ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: BDA ಅಧ್ಯಕ್ಷ – ಆಯುಕ್ತ ಮಧ್ಯೆ ಟಾಕ್​ ವಾರ್! ರೈತರ ಸಣ್ಣ ಸೈಟ್ ವಿರುದ್ಧ ‘ಸುಪ್ರೀಂ’ಗೆ ಹೋಗ್ತಾರೆ, ಆದ್ರೆ 500 ಕೋಟಿ ರೂ ಜಾಗದ ಬಗ್ಗೆ ಯಾಕೆ ಹೋಗಿಲ್ಲ?

Published On - 12:30 pm, Fri, 12 February 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್