ಕೊರೊನಾ ಎಫೆಕ್ಟ್! ಮುಂದಿನ ವರ್ಷ ಶಾಲಾ ಮಕ್ಕಳು ಹೆಚ್ಚು ಓದಬೇಕಿಲ್ಲ!

ಬೆಂಗಳೂರು: ಥ್ಯಾಂಕ್ಸ್ ಟು ಕೊರೊನಾ ವೈರಸ್, ಮುಂದಿನ ಶೈಕ್ಷಣಿಕ ವರ್ಷ ವಿಳಂಬವಾಗುವ ಹಿನ್ನೆಲೆ ಶಾಲಾ ಮಕ್ಕಳು ಹೆಚ್ಚು ಓದ ಬೇಕಿಲ್ಲ! ಪ್ರಾಥಮಿಕ, ಪ್ರೌಢಶಿಕ್ಷಣ‌ ಸಚಿವ ಸುರೇಶ್‌ಕುಮಾರ್ ಈ ಕುರಿತು ಸುಳಿವು ನೀಡಿದ್ದಾರೆ. 15 ದಿನ, 1 ತಿಂಗಳು, ಒಂದೂವರೆ ತಿಂಗಳು ಹಾಗೂ 2 ತಿಂಗಳ ಹಂತವಾರು ಹೆಚ್ಚುವರಿ ಪಠ್ಯಗಳನ್ನ ಗುರುತಿಸಿ ಅವುಗಳನ್ನು ಕೈಬಿಡುವ ಬಗ್ಗೆ ವಿಸ್ತೃತ ವರದಿ ಸಲ್ಲಿಕೆಗೆ ಸೂಚನೆ ನೀಡಲಾಗಿದೆ. ಪಠ್ಯ ಪುಸ್ತಕ ಪ್ರವೇಶಿಸಲಿದೆ ಮಾರಕ ಕೊರೊನಾ ವೈರಸ್! 1ರಿಂದ 10ನೇ ತರಗತಿ ಹಾಗೂ ಪದವಿ […]

ಕೊರೊನಾ ಎಫೆಕ್ಟ್! ಮುಂದಿನ ವರ್ಷ ಶಾಲಾ ಮಕ್ಕಳು ಹೆಚ್ಚು ಓದಬೇಕಿಲ್ಲ!
ಸಾಧು ಶ್ರೀನಾಥ್​

Updated on: May 07, 2020 | 7:22 PM

ಬೆಂಗಳೂರು: ಥ್ಯಾಂಕ್ಸ್ ಟು ಕೊರೊನಾ ವೈರಸ್, ಮುಂದಿನ ಶೈಕ್ಷಣಿಕ ವರ್ಷ ವಿಳಂಬವಾಗುವ ಹಿನ್ನೆಲೆ ಶಾಲಾ ಮಕ್ಕಳು ಹೆಚ್ಚು ಓದ ಬೇಕಿಲ್ಲ! ಪ್ರಾಥಮಿಕ, ಪ್ರೌಢಶಿಕ್ಷಣ‌ ಸಚಿವ ಸುರೇಶ್‌ಕುಮಾರ್ ಈ ಕುರಿತು ಸುಳಿವು ನೀಡಿದ್ದಾರೆ. 15 ದಿನ, 1 ತಿಂಗಳು, ಒಂದೂವರೆ ತಿಂಗಳು ಹಾಗೂ 2 ತಿಂಗಳ ಹಂತವಾರು ಹೆಚ್ಚುವರಿ ಪಠ್ಯಗಳನ್ನ ಗುರುತಿಸಿ ಅವುಗಳನ್ನು ಕೈಬಿಡುವ ಬಗ್ಗೆ ವಿಸ್ತೃತ ವರದಿ ಸಲ್ಲಿಕೆಗೆ ಸೂಚನೆ ನೀಡಲಾಗಿದೆ.

ಪಠ್ಯ ಪುಸ್ತಕ ಪ್ರವೇಶಿಸಲಿದೆ ಮಾರಕ ಕೊರೊನಾ ವೈರಸ್!
1ರಿಂದ 10ನೇ ತರಗತಿ ಹಾಗೂ ಪದವಿ ಪೂರ್ವ ಶಿಕ್ಷಣದವರೆಗೆ 2020-21ನೇ ಸಾಲಿನ ಶಾಲಾ ಪಠ್ಯಗಳನ್ನು ಕಡಿತಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಕಡಿತಗೊಳಿಸಬಹುದಾದಂತಹ ಹೆಚ್ಚುವರಿ ಪಠ್ಯವನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಶೈಕ್ಷಣಿಕ ವರ್ಷದಲ್ಲಿ ಕಳೆದುಕೊಳ್ಳುವ ಅವಧಿಯ ಆಧಾರದಲ್ಲಿ
ಮಕ್ಕಳ ಕಲಿಕೆಗೆ ಹೊರೆಯಾಗದ ರೀತಿ ಪಠ್ಯ ಕೈಬಿಡಲು ಸೂಚನೆ ನೀಡಲಾಗಿದೆ. ಹೆಚ್ಚುವರಿ ಪಠ್ಯವನ್ನು ಗುರುತಿಸಿ ವಿಸ್ತೃತ ವರದಿ ಸಲ್ಲಿಕೆಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಾರಕ ಕೊವಿಡ್‌ ಬಗ್ಗೆಯೂ ಪಠ್ಯ ಅಳವಡಿಸುವಂತೆ ಸೂಚನೆ ಸಿಕ್ಕಿದೆ. ಈ ಬಗ್ಗೆ ಕೂಡಲೇ ಕ್ರಿಯಾ ಯೋಜನೆ ಸಿದ್ಧಪಡಿಸಲು ಸೂಚನೆ ನೀಡಲಾಗಿದೆ ಎಂದು ಸಚಿವ ಸುರೇಶ್‌ಕುಮಾರ್ ಹೇಳಿದ್ದಾರೆ.

Published On - 7:20 pm, Thu, 7 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us