ನರಗುಂದದಲ್ಲಿ ಕುಸಿಯುತ್ತಿದೆ ಭೂಮಿ, ಬಿರುಕು ಬಿಡುತ್ತಿವೆ ನೂರಾರು ವರ್ಷದ ಮನೆಗಳು

  • TV9 Web Team
  • Published On - 18:20 PM, 27 Nov 2019
ನರಗುಂದದಲ್ಲಿ ಕುಸಿಯುತ್ತಿದೆ  ಭೂಮಿ,  ಬಿರುಕು ಬಿಡುತ್ತಿವೆ ನೂರಾರು ವರ್ಷದ ಮನೆಗಳು

ಗದಗ: ನಾಲ್ಕೈದು ತಲೆಮಾರು ಬಾಳಿ ಬದುಕಿದ್ದ, ಒಂದೂವರೆ ಶತಮಾನ ಕಂಡರೂ ಬಂಡೆಗಲ್ಲಿನಂತೆ ಇದ್ದಂತಹ ಸಾವಿರಾರು ನೆನಪುಗಳನ್ನ ತನ್ನ ಒಡಲಿನಲ್ಲಿ ಬಚ್ಚಿಟ್ಟುಕೊಂಡಿರೋ ಮನೆಗಳು ಈಗ ಅಲುಗಾಡೋಕೆ ಶುರುವಾಗಿದೆ. ಭೂಕುಸಿತದಿಂದ ಉಂಟಾಗುತ್ತಿರುವ ತೊಂದರೆಯಿಂದ ನರಗುಂದದ ಜನ ಕಣ್ಣೀರು ಸುರಿಸುತ್ತಿದ್ದಾರೆ.

ಶತಮಾನಗಳ ಕಟ್ಟಿಡಗಳಿಗೆ ಬಂತು ಕುತ್ತು:
ಬ್ರಿಟಿಷರ ಕಾಲದಲ್ಲಿ ಕಟ್ಟಿದ್ದ ವಿಶಾಲವಾದ ಭವ್ಯ ಮನೆ ನೂರಾರು ವರ್ಷದಿಂದ ಸಣ್ಣ ಮುಕ್ಕು ಕಾಣದಿದ್ದ ಗದಗ ಜಿಲ್ಲೆಯ ನರಗುಂದದಲ್ಲಿನ ಮನೆಗಳು ಈಗ ಉಂಟಾಗ್ತಿರೋ ಭೂ ಕುಸಿತಕ್ಕೆ ಐತಿಹಾಸಿಕ ಮನೆಗಳಲ್ಲಿ ಬಿರುಕು ಬಿಡ್ತಿವೆ. ಎರಡೇ ತಿಂಗಳಲ್ಲಿ ಅನೇಕ ಮನೆಗಳ ಸ್ಥಿತಿ ಅಯೋಮಯವಾಗಿದ್ದು, ಬಾಳಿ ಬದುಕಿದ್ದ ಮನೆಯನ್ನ ತೊರೆಯ ಬೇಕಾದ ಸ್ಥಿತಿ ಎದುರಾಗಿದೆ.

ಗೋಪಾಲಕೃಷ್ಣ ಆನೆಗುಂದಿ ಎಂಬುವರ ಈ ಮನೆ ಭೂ ಕುಸಿತದಿಂದ ತತ್ತರಗೊಂಡಿದೆ. ಪಟ್ಟಣದ ಕಸಬಾ ಓಣಿ, ಅರ್ಬಾಣ ಓಣಿ, ಹಗೇದಗಟ್ಟಿ ಓಣಿಯಲ್ಲಿ ಹಲವು ಮನೆಗಳು ಕುಸಿದಿವೆ. ದಿನ ಕಳೆದಂತೆ ಮನೆಗಳಲ್ಲಿ ಬಿರುಕು ಹೆಚ್ಚಾಗುತ್ತಿದ್ದು, ಬೆಲೆ ಕಟ್ಟಲಾಗದ ಮನೆಯನ್ನ ತೊರೆದು ಜನ ಕಣ್ಣೀರಾಕ್ತಿದ್ದಾರೆ.