ಬಿಜೆಪಿ, ಸಂಘ ಪರಿವಾರದ ಕಾರ್ಯಕರ್ತರ ಮೇಲಿನ ದುರುದ್ದೇಶಪೂರ್ವಕ ಕೇಸ್ ಹಿಂಪಡೆಯುವಂತೆ ಮನವಿ
ವಿಕಾಸಸೌಧದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿಯಾದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಮನವಿ ಮಾಡಿದ್ದಾರೆ.

ಬೆಂಗಳೂರು: ಬಿಜೆಪಿ, ಸಂಘ ಪರಿವಾರ ಕಾರ್ಯಕರ್ತರ ಮೇಲೆ ದುರುದ್ದೇಶಪೂರ್ವಕವಾಗಿ ದಾಖಲಿಸಿದ ಪ್ರಕರಣಗಳನ್ನು ಹಿಂಪಡೆಯುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದ್ದಾರೆ.
ನಿನ್ನೆಯಷ್ಟೇ (ಆಗಸ್ಟ್ 8) ತಮಗೆ ಗೃಹ ಖಾತೆ ದೊರೆತಿರುವ ಕುರಿತು ಪ್ರತಿಕ್ರಿಯಿಸಿದ್ದ ಸಚಿವ ಆರಗ ಜ್ಞಾನೇಂದ್ರ ಆರ್‌ಎಸ್‌ಎಸ್, ಬಿಎಸ್‌ವೈ, ಸಿಎಂ ನನ್ನ ಮೇಲೆ ಭರವಸೆ ಇಟ್ಟು ಹಿರಿಯರು ಗೃಹಖಾತೆ ಕೊಟ್ಟಿದ್ದಾರೆ ನನಗೆ ನೀಡಿರುವ ಸ್ಥಾನ ಮತ್ತು ಜವಾಬ್ದಾರಿಯನ್ನು ಬಳಸಿಕೊಂಡು ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ ಮಾಡುತ್ತೇನೆ ಎಂದು ತುಮಕೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದರು. ನಾಳೆ ಗೃಹ ಇಲಾಖೆ ಅಧಿಕಾರಿಗಳ ಜೊತೆ ಮೊದಲ ಸಭೆ ನಡೆಸಲಿದ್ದೇನೆ. ಆ ಮೂಲಕ ಅಧಿಕೃತವಾಗಿ ಚಾರ್ಜ್ ವಹಿಸಿಕೊಳ್ಳಲಿದ್ದೇನೆ.ಅದಕ್ಕೂ ಮುಂಚೆ ಸಿದ್ದಗಂಗಾ ಮಠಕ್ಕೆ ಬಂದು ಆಶೀರ್ವಾದ ಪಡೆದಿದ್ದೇನೆ. ಪೊಲೀಸ್ ಇಲಾಖೆ ಸಶಕ್ತ ವಾಗಿ ಕೆಲಸ ಮಾಡುವ ಹಾಗೆ ಶಕ್ತಿ ತುಂಬಬೇಕು. ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಇಲಾಖೆಯಲ್ಲಿ ಇಷ್ಟು ವರ್ಷ ತರಲಾಗದೇ ಇದ್ದ ಏನಾದರೊಂದು ಬದಲಾವಣೆ ತರಲು ಪ್ರಯತ್ನ ಮಾಡುತ್ತೇನೆ. ಔರಾದ್ಕರ್ ವರದಿ ಅಧ್ಯಯನ ಮಾಡಿ ಪೊಲೀಸರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಅವರು ಕನಸುಗಳನ್ನು ತೆರೆದಿಟ್ಟರು.
ಯಾವುದೇ ಸಚಿವ ಸಂಪುಟದಖಾತೆ ಹಂಚಿಕೆಯಲ್ಲಿ ಅಸಮಾಧಾನ ಸಹಜ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಣಾಕ್ಷರಿದ್ದಾರೆ, ಅವರು ಎಲ್ಲಾ ಗೊಂದಲಗಳನ್ನು ಬಗೆಹರಿಸುತ್ತಾರೆ. ಯಾವುದೇ ಖಾತೆಗೆ ಬೇಡಿಕೆ ಇಟ್ಟಿರಲಿಲ್ಲ ಎಂದು ಸಹ ಅವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ:
ನನಗೆ ಸಂಪುಟ ದರ್ಜೆಯ ಸ್ಥಾನಮಾನ ಬೇಡ, ದಯವಿಟ್ಟು ಹಿಂಪಡೆಯಿರಿ: ಬಿ ಎಸ್ ಯಡಿಯೂರಪ್ಪ
PM Kisan Scheme: ಪಿಎಂ ಕಿಸಾನ್ ಯೋಜನೆಯ 9ನೇ ಕಂತು ಬಿಡುಗಡೆ; 19,500 ಕೋಟಿ ರೂ. ರೈತರ ಖಾತೆಗೆ ವರ್ಗಾವಣೆ
(Home Minister Araga Jnanendra receives request to withdraw malicious case against BJP and Hindutva Sangh workers by Minister Kota Shrinivas Poojary)
Published On - 8:17 pm, Mon, 9 August 21




