ರೈಲಿನಲ್ಲಿ ಲಗೇಜ್ ಕಳೆದುಕೊಂಡಿದ್ದ ಪ್ರಯಾಣಿಕಳಿಗೆ ರೈಲ್ವೆ ಇಲಾಖೆಯಿಂದ 17.5 ಲಕ್ಷ ರೂ. ಪರಿಹಾರ!

Indian Railway | 2017ರಲ್ಲಿ ಹೈದರಾಬಾದ್​ನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಶೀತಲ್ ಕುಲಕರ್ಣಿ ಎಂಬ ಮಹಿಳೆಯ ಚಿನ್ನ ಮತ್ತು ಹಣವನ್ನು ಕಳುವು ಮಾಡಲಾಗಿತ್ತು. ಅದಕ್ಕೆ ಪರಿಹಾರವಾಗಿ 17.5 ಲಕ್ಷ ರೂ. ನೀಡುವಂತೆ ಗ್ರಾಹಕರ ಆಯೋಗ ರೈಲ್ವೆ ಇಲಾಖೆಗೆ ಸೂಚಿಸಿದೆ.

ರೈಲಿನಲ್ಲಿ ಲಗೇಜ್ ಕಳೆದುಕೊಂಡಿದ್ದ ಪ್ರಯಾಣಿಕಳಿಗೆ ರೈಲ್ವೆ ಇಲಾಖೆಯಿಂದ 17.5 ಲಕ್ಷ ರೂ. ಪರಿಹಾರ!
ಭಾರತೀಯ ರೈಲ್ವೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Aug 09, 2021 | 7:55 PM

ನವದೆಹಲಿ: ಹೈದರಾಬಾದ್​ನಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ತಮ್ಮ ಚಿನ್ನದ ಸರಗಳು, ಹಣವನ್ನು ಕಳೆದುಕೊಂಡಿದ್ದರು. ಹೀಗಾಗಿ, ಆ ನಷ್ಟಕ್ಕೆ ಪರಿಹಾರವಾಗಿ ಪ್ರಯಾಣಿಕಳಿಗೆ 17.5 ಲಕ್ಷ ರೂ. ಹಣ ನೀಡಬೇಕೆಂದು ಭಾರತೀಯ ರೈಲ್ವೆಗೆ ಹೈದರಾಬಾದ್​ನ ಜಿಲ್ಲಾ ಗ್ರಾಹಕರ ಆಯೋಗ ಆದೇಶ ನೀಡಿದೆ.

2017ರಲ್ಲಿ ಹೈದರಾಬಾದ್​ನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಶೀತಲ್ ಕುಲಕರ್ಣಿ ಎಂಬ ಮಹಿಳೆಯ ಚಿನ್ನ ಮತ್ತು ಹಣವನ್ನು ಕಳುವು ಮಾಡಲಾಗಿತ್ತು. ಹೈದರಾಬಾದ್​ನಲ್ಲಿ ವಾಸವಾಗಿರುವ ಆಕೆ ಈ ಬಗ್ಗೆ ಗ್ರಾಹಕರ ಆಯೋಗದಲ್ಲಿ ದೂರು ಸಲ್ಲಿಸಿದ್ದರು. ನಾನು 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 3 ಲಕ್ಷ ರೂ. ಹಣವನ್ನು ಬೆಂಗಳೂರಿಗೆ ರೈಲಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದೆ. ನಮ್ಮ ಊರಿನಲ್ಲಿ ಎಂಗೇಜ್​ಮೆಂಟ್​ ಇದ್ದುದರಿಂದ ಚಿನ್ನ ಹಾಗೂ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದೆ ಎಂದು ಶೀತಲ್ ಹೇಳಿದ್ದಾರೆ.

ನಿಮ್ಮ ಲಗೇಜುಗಳಿಗೆ ನೀವೇ ಜವಾಬ್ದಾರರು ಎಂದು ರೈಲ್ವೆ ಅಧಿಕಾರಿಗಳು ಈ ಕುರಿತು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ, ಗ್ರಾಹಕರ ಹಕ್ಕುಗಳ ಆಯೋಗಕ್ಕೆ ಶೀತಲ್ ಕುಲಕರ್ಣಿ ದೂರು ನೀಡಿದ್ದರು. ಅದರಂತೆ ಆಯೋಗವು ಆ ಪ್ರಯಾಣಿಕಳಿಗೆ ಪರಿಹಾರವಾಗಿ ಆಕೆ ಕಳೆದುಕೊಂಡ ಚಿನ್ನಕ್ಕೆ 14,01,078 ರೂ. ಮತ್ತು ಬೆಳ್ಳಿಯ ವಸ್ತುಗಳಿಗೆ 50,000 ರೂ. ಸೇರಿದಂತೆ ಆಕೆಯ ಮಾನಸಿಕ ಒತ್ತಡ ಹಾಗೂ ಕಾನೂನಿನ ಖರ್ಚಿಗೆ 5,000 ರೂ. ಜೊತೆಗೆ ಆಕೆ ಕಳೆದುಕೊಂಡ 3 ಲಕ್ಷ ರೂ. ಹಣವನ್ನು ಸೇರಿಸಿ ನೀಡಬೇಕೆಂದು ಆದೇಶಿಸಿದೆ.

2017ರ ಆಗಸ್ಟ್​ 12ರಂದು ಶೀತಲ್ ತನ್ನ ಕುಟುಂಬಸ್ಥರೊಂದಿಗೆ ಕಚೇಗುಡ- ಯಶವಂತಪುರ ಎ್ಸ್​ಪ್ರೆಸ್​ ರೈಲಿನಲ್ಲಿ ಬೆಂಗಳೂರಿಗೆ ಹೊರಟಿದ್ದರು. ಮನೆಗೆ ಹೋಗಿ ನೋಡಿದಾಗ ಅವರ ಬ್ಯಾಗ್​ನಲ್ಲಿದ್ದ ಹಣ ಹಾಗೂ ಚಿನ್ನ, ಬೆಳ್ಳಿ ವಸ್ತುಗಳು ಕಳ್ಳತನವಾಗಿರುವುದು ಗೊತ್ತಾಗಿತ್ತು. ಈ ಬಗ್ಗೆ ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಅವರು ದೂರು ನೀಡಿದ್ದರು. ಆದರೆ, ಪೊಲೀಸರು ಯಾವ ಆಸಕ್ತಿಯನ್ನೂ ತೋರಲಿಲ್ಲ. ಹೀಗಾಗಿ, ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದರು.

ರೈಲಿನಲ್ಲಿ ರಿಸರ್ವೇಷನ್​ ಮಾಡಿಸಿದ್ದ ಕಂಪಾರ್ಟ್​ಮೆಂಟ್​ನಲ್ಲಿಯೇ ಈ ಕಳ್ಳತನ ನಡೆದಿರುವುದಕ್ಕೆ ರೈಲ್ವೆ ಇಲಾಖೆಯೇ ಹೊಣೆ. ಎಸ್​ಸಿಆರ್ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಈ ಕಳ್ಳತನ ನಡೆದಿದೆ ಎಂದು ಆ ಮಹಿಳೆ ದೂರು ನೀಡಿದ್ದರು. ಆಕೆಯ ದೂರಿಗೆ ಯಾವುದೇ ಕ್ರಮ ಕೈಗೊಳ್ಳದ ಪೊಲೀಸರ ವರ್ತನೆ ಹಾಗೂ ರೈಲ್ವೆ ಅಧಿಕಾರಿಗಳ ಬೇಜವಾಬ್ದಾರಿಯನ್ನು ಗಮನಿಸಿದ ಗ್ರಾಹಕರ ಆಯೋಗ ಸಂತ್ರಸ್ತೆಗೆ ರೈಲ್ವೆ ಇಲಾಖೆಯಿಂದ 17.5 ಲಕ್ಷ ಪರಿಹಾರ ನೀಡಲು ಸೂಚಿಸಿದೆ.

ಇದನ್ನೂ ಓದಿ: Bengaluru Metro: ಗಮನಿಸಿ, ಆಗಸ್ಟ್ 11,12 ರಂದು ವಿಜಯನಗರ-ಮೈಸೂರು ರಸ್ತೆಯ ಮೆಟ್ರೋ ಮಾರ್ಗದಲ್ಲಿ ಸೇವೆ ಇರದು

Bengaluru Night Curfew: ಆಗಸ್ಟ್​ 16ರವರೆಗೆ ಬೆಂಗಳೂರಿನಲ್ಲಿ ನೈಟ್​ ಕರ್ಫ್ಯೂ ಜಾರಿ; ವಿವರ ಇಲ್ಲಿದೆ

(Indian Railways ordered to pay Rs 17.5 lakh to passenger for stolen luggage in Hyderabad-Bengaluru Train)

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ