AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Metro: ಗಮನಿಸಿ, ಆಗಸ್ಟ್ 11,12 ರಂದು ವಿಜಯನಗರ-ಮೈಸೂರು ರಸ್ತೆಯ ಮೆಟ್ರೋ ಮಾರ್ಗದಲ್ಲಿ ಸೇವೆ ಇರದು

Namma Metro: ಮೈಸೂರು ರಸ್ತೆಯಿಂದ ಕೆಂಗೇರಿವರೆಗಿನ ಮೆಟ್ರೋ ಮಾರ್ಗದ ಕೆಲಸ ನಡೆಯುವ ಕಾರಣ ಈ ಮಾರ್ಗದಲ್ಲಿ ಎರಡು ದಿನಗಳ ಕಾಲ ಸೇವೆ ಲಭ್ಯವಿರುವುದಿಲ್ಲ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Bengaluru Metro: ಗಮನಿಸಿ, ಆಗಸ್ಟ್ 11,12 ರಂದು ವಿಜಯನಗರ-ಮೈಸೂರು ರಸ್ತೆಯ ಮೆಟ್ರೋ ಮಾರ್ಗದಲ್ಲಿ ಸೇವೆ ಇರದು
ಸಾಂಕೇತಿಕ ಚಿತ್ರ
TV9 Web
| Updated By: Skanda|

Updated on:Aug 09, 2021 | 7:46 AM

Share

ಬೆಂಗಳೂರು: ಆಗಸ್ಟ್ 11, 12ರಂದು ಎರಡು ದಿನಗಳ ಕಾಲ ವಿಜಯನಗರ-ಮೈಸೂರು ರಸ್ತೆಯ ಮೆಟ್ರೋ ಮಾರ್ಗ ಸ್ಥಗಿತಗೊಳ್ಳಲಿದೆ. ನೂತನ ಮಾರ್ಗದ ಕೆಲಸದ ನಿಮಿತ್ತ ಮೆಟ್ರೋ ಸೇವೆ (Bengaluru Metro) ಸ್ಥಗಿತಗೊಳ್ಳಲಿದೆ. ಮೈಸೂರು ರಸ್ತೆಯಿಂದ ಕೆಂಗೇರಿವರೆಗಿನ ಮೆಟ್ರೋ ಮಾರ್ಗದ ಕೆಲಸ ನಡೆಯುವ ಕಾರಣ ಈ ಮಾರ್ಗದಲ್ಲಿ ಎರಡು ದಿನಗಳ ಕಾಲ ಸೇವೆ ಲಭ್ಯವಿರುವುದಿಲ್ಲ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಗಸ್ಟ್ 9ರಂದು ಎಸ್​ಎಸ್​ಎಲ್​ಸಿ ಫಲಿತಾಂಶ ಬೆಂಗಳೂರು: ಆಗಸ್ಟ್ 9, ಸೋಮವಾರ ಎಸ್ಎಸ್ಎಲ್​ಸಿ ಫಲಿತಾಂಶ ಪ್ರಕಟಿಸುವುದಾಗಿ ನೂತನ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ (BC Nagesh) ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದಾರೆ. ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಈ ಮಾಹಿತಿಯನ್ನು ಖಚಿತಪಡಿಸಿದರು. ಸೋಮವಾರ ಸಂಜೆ 3.30ಕ್ಕೆ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಿಗದಿಪಡಿಸಲಾಗಿದೆ ಎಂದು ಸಹ ಅವರು ತಿಳಿಸಿದರು. ಈಬಾರಿಯ ಎಸ್​ಎಸ್​ಎಲ್​ಸಿ ಪರೀಕ್ಷೆಗೆ 99.65% ವಿದ್ಯಾರ್ಥಿಗಳು ಹಾಜರಾಗಿದ್ದರು. ಈಬಾರಿ ಕೊರೊನಾ ಹಿನ್ನೆಲೆಯಲ್ಲಿ ಜೂನ್ 19, ಜೂನ್ 22ರಂದು  2 ದಿನ ಮಾತ್ರ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆದಿತ್ತು.  ಈಬಾರಿಯ ಎಸ್​ಎಸ್​ಎಲ್​ಸಿ ಪರೀಕ್ಷೆಗೆ 99.65% ವಿದ್ಯಾರ್ಥಿಗಳು ಹಾಜರಾಗಿದ್ದರು.

ಫಲಿತಾಂಶ ಪ್ರಕಟವಾದ ನಂತರ ನಿಮ್ಮ ಎಸ್​ಎಸ್​ಎಲ್​ಸಿ ರಿಸಲ್ಟ್ ವೀಕ್ಷಿಸಲು ಹೀಗೆ ಮಾಡಿ 1. ಕರ್ನಾಟಕ ಸರ್ಕಾರದ ಅಧಿಕೃತ ವೆಬ್​ಸೈಟ್ sslc.karnataka.gov.in ಕ್ಲಿಕ್ ಮಾಡಿ 2. ಸ್ಕ್ರೀನ್​ನಲ್ಲಿ ರಿಸಲ್ಟ್​ ಲಿಂಕ್ ಕಾಣಿಸಿಕೊಳ್ಳುತ್ತದೆ. ಆ ಲಿಂಕ್ ಅನ್ನು ಕ್ಲಿಕ್ ಮಾಡಿ 3. ನಿಮ್ಮ ರೋಲ್ ನಂಬರ್ ಅನ್ನು ಹಾಕಿ ಲಾಗಿನ್ ಆಗಿ 4. ರೋಲ್ ನಂಬರ್ ಜೊತೆಗೆ ಅಲ್ಲಿ ಕೇಳುವ ನಿಮ್ಮ ಇತರೆ ಮಾಹಿತಿಗಳನ್ನೂ ತುಂಬಿರಿ 5. ಫಲಿತಾಂಶವನ್ನು ವೀಕ್ಷಿಸಲು ನಿಮ್ಮ ಮಾಹಿತಿಯನ್ನು ಸಬ್ಮಿಟ್ ಮಾಡಿ 6. ತಾತ್ಕಾಲಿಕ ಅಂಕಪಟ್ಟಿ ಆನ್​ಲೈನ್​ನಲ್ಲೇ ಲಭ್ಯವಾಗಲಿದ್ದು, ಅಲ್ಲಿಂದಲೇ ಡೌನ್​ಲೋಡ್ ಮಾಡಿಕೊಳ್ಳುವುದಕ್ಕೆ ಅವಕಾಶ ಇದೆ.

ಮರುಮೌಲ್ಯಮಾಪನಕ್ಕೆ ಅವಕಾಶ ಇದೆಯಾ? ಫಲಿತಾಂಶದ ಬಗ್ಗೆ ಅಸಮಾಧಾನವಿದ್ದಲ್ಲಿ ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು. ಒಂದುವೇಳೆ ಮರುಪರೀಕ್ಷೆ ಬರೆಯಲು ಇಚ್ಛಿಸಿದಲ್ಲಿ ಎರಡನೇ ಬಾರಿಗೆ ಅರ್ಜಿ ಸಲ್ಲಿಸಬಹುದು. ಅದಕ್ಕೆ ಶಿಕ್ಷಕರ ಸಹಾಯ ಪಡೆದು ಅಗತ್ಯವಿರುವ ದಾಖಲೆಗಳನ್ನು ಭರ್ತಿ ಮಾಡಿ ಮನವಿ ಮಾಡಬಹುದು.

ಇದನ್ನೂ ಓದಿ: 

ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ ಟೈರ್ ಪಂಕ್ಚರ್

ಸಿಎಂ ಬಸವರಾಜ ಬೊಮ್ಮಾಯಿ – ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಭೇಟಿ; ನದಿ ನೀರು ಹಂಚಿಕೆ ಕುರಿತು ಮಾತುಕತೆ

(Bengaluru Metro no service on the Metro line on Vijayanagar to Mysuru Road on August 11 and 12)

Published On - 9:08 pm, Sat, 7 August 21