ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ ಟೈರ್ ಪಂಕ್ಚರ್
Basavaraj Bommai: ಹುಬ್ಬಳ್ಳಿ ಏರ್‌ಪೋರ್ಟ್ ಬಳಿ ನಿಲ್ಲಿಸಿದ್ದ ವೇಳೆ ಟೈರ್ ಪಂಕ್ಚರ್ ಆಗಿದೆ. ಹೀಗಾಗಿ, ಸಿಎಂ ತೆರಳುವುದಕ್ಕೆ ಸಿಬ್ಬಂದಿ ಬೇರೆ ಕಾರು ವ್ಯವಸ್ಥೆ ಮಾಡಿದ್ದಾರೆ.
ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೆರಳಬೇಕಿದ್ದ ಕಾರು ಟೈರ್ ಪಂಕ್ಚರ್ ಆದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿ ಏರ್‌ಪೋರ್ಟ್ ಬಳಿ ನಿಲ್ಲಿಸಿದ್ದ ವೇಳೆ ಟೈರ್ ಪಂಕ್ಚರ್ ಆಗಿದೆ. ಹೀಗಾಗಿ, ಸಿಎಂ ತೆರಳುವುದಕ್ಕೆ ಸಿಬ್ಬಂದಿ ಬೇರೆ ಕಾರು ವ್ಯವಸ್ಥೆ ಮಾಡಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದ ಮುಂಭಾಗ ಘಟನೆ ನಡೆದಿದೆ. ಇದರಿಂದ ಕೆಲಕಾಲ ಭದ್ರತಾ ಸಿಬ್ಬಂದಿ ಗಲಿಬಿಲಿಗೊಂಡ ಸನ್ನಿವೇಶವೂ ನಡೆದಿದೆ ಎಂದು ತಿಳಿದುಬಂದಿದೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಎಲ್ಲರಿಗೂ ಕೇಳಿದ ಖಾತೆ ನೀಡಲು ಆಗಲ್ಲ ಎಂದು ಆನಂದ್ ಸಿಂಗ್ ಅಸಮಾಧಾನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾಳೆ ಸಚಿವ ಆನಂದ್ ಸಿಂಗ್ ಜತೆ ಚರ್ಚೆ ಮಾಡುತ್ತೇನೆ. ಸಂಪುಟ ರಚನೆಯಾದಾಗ ಅಸಮಾಧಾನ ಸಹಜ. ಸಚಿವ ಆನಂದ್ ಸಿಂಗ್ ನನ್ನ ಹಳೆಯ ಸ್ನೇಹಿತ ಎಂದು ತಿಳಿಸಿದ್ದಾರೆ. ಅವರು ಯಾವ ಖಾತೆ ಕೇಳಿದ್ರು ಅನ್ನೋದು ಬಹಿರಂಗಪಡಿಸಲಾಗಲ್ಲ. ಈ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದು ಹೇಳಿದ್ದಾರೆ.
ಹೆಚ್.ಡಿ. ದೇವೇಗೌಡ ಭೇಟಿಯ ಹಿಂದೆ ಯಾವುದೇ ರಾಜಕೀಯವಿಲ್ಲ. ದೇವೇಗೌಡರ ಜತೆ ರಾಜಕೀಯ ವಿಚಾರಗಳನ್ನು ಚರ್ಚಿಸಿಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಪ್ರೀತಂಗೌಡ ಯುವ ಉತ್ಸಾಹಿ ಶಾಸಕರಿದ್ದಾರೆ. ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ನನ್ನ ಯುವ ಸ್ನೇಹಿತ. ಅವರು ಯಾವುದೇ ರೀತಿ ತಪ್ಪು ತಿಳಿದುಕೊಳ್ಳೋದು ಬೇಡ. ಪ್ರೀತಂಗೌಡ ಉತ್ಸಾಹದಲ್ಲಿ ಹೇಳಿಕೆಯನ್ನು ನೀಡಿದ್ದಾರೆ. ಪ್ರೀತಂಗೌಡ ನಾಳೆ ಬಂದಾಗ ಚರ್ಚೆ ಮಾಡುತ್ತೇನೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ನಾನು ಕಳೆದ 15 ವರ್ಷದಿಂದ ಬಿಜೆಪಿಯಲ್ಲಿದ್ದೇನೆ. ನಾನು ಅಪ್ಪಟ ಬಿಜೆಪಿ ಕಾರ್ಯಕರ್ತ. ನಾನು ಬಿಜೆಪಿ ಸಿಎಂ ಕೂಡ ಹೌದು ಎಂದು ಬೊಮ್ಮಾಯಿ ಹೇಳಿದ್ದಾರೆ. ಸಿಎಂ ಬೊಮ್ಮಾಯಿ ಜನತಾ ಪರಿವಾರದವರೆಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಹೀಗೆ ಅಸಂಬದ್ಧ ಹೇಳಿಕೆ ನೀಡಬಾರದು ಎಂದು ತಿರುಗೇಟು ನೀಡಿದ್ದಾರೆ.
ರಾಜಶೇಖರ ಸಿಂಧೂರ ಸಾವಿನಿಂದ ಬಹಳ ದುಖಃವಾಗಿದೆ. ನಾನು ಓರ್ವ ಆತ್ಮೀಯ ಗೆಳೆಯನನ್ನ ಕಳೆದುಕೊಂಡಿದ್ದೆನೆ. ವೈಯಕ್ತಿವಾಗಿಯೂ ನಂಗೆ ಬಹಳ ನಷ್ಟವಾಗಿದೆ. ಅವರು ಶಿಗ್ಗಾಂವಿ-ಸವಣೂರು ಕ್ಷೇತ್ರದ ಅಭೀವೃದ್ದಿ ಬಗ್ಗೆ ಕನಸು ಕಂಡಿದ್ದರು. ಅವರ ಅಂತ್ಯಕ್ರಿಯೇಗೆ ಹೊಗುತ್ತಿದ್ದೇನೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಬೋಮ್ಮಾಯಿ ಹೇಳಿದ್ದಾರೆ.
ಇದನ್ನೂ ಓದಿ: 29 ಸಚಿವರಿಗೆ ಖಾತೆ ಹಂಚಿಕೆ; ಹಣಕಾಸು ಮತ್ತು ಬೆಂಗಳೂರು ಅಭಿವೃದ್ಧಿ ಖಾತೆ ತನ್ನಲ್ಲಿಯೇ ಉಳಿಸಿಕೊಂಡ ಸಿಎಂ ಬೊಮ್ಮಾಯಿ
ನನಗೆ ಬೇಕಾದ ಖಾತೆ ಸಿಕ್ಕಿಲ್ಲ, 2-3 ದಿನಗಳಲ್ಲಿ ಮುಂದಿನ ನಿರ್ಧಾರ ತಿಳಿಸುವೆ: ನೂತನ ಸಚಿವ ಎಂಟಿಬಿ ನಾಗರಾಜ್
(CM Basavaraj Bommai Car Tyre Puncture near Hubballi Air port and CM Bommai on Cabinet Ministers Opinion)
Published On - 4:24 pm, Sat, 7 August 21