‘ತಮಿಳುನಾಡಿನ ಮೇಲೆ ಮೃದು ಧೋರಣೆ ತಳೆಯುವುದಿಲ್ಲ‘ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟನೆ

ತಮಿಳುನಾಡಿನಲ್ಲಿ ಸದ್ಯದಲ್ಲೇ ಚುನಾವಣೆ ನಡೆಯಲಿದೆ ಎಂದು ಮೃದು ಧೋರಣೆ ತಾಳುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಅಲ್ಲಿನ ಚುನಾವಣೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಈ ಕುರಿತು ಸೃಷ್ಟಿಯಾಗುವ ಊಹಾಪೋಹಗಳಿಗೆ ಉತ್ತರ ಕೊಡಲು ಆಗುವುದಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿವರಿಸಿದರು.

  • TV9 Web Team
  • Published On - 14:19 PM, 26 Feb 2021
‘ತಮಿಳುನಾಡಿನ ಮೇಲೆ ಮೃದು ಧೋರಣೆ ತಳೆಯುವುದಿಲ್ಲ‘ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟನೆ
ಗೃಹ ಸಚಿವ ಬಸವರಾಜ ಬೊಮ್ಮಾಯಿ

ಬೆಂಗಳೂರು: ನೀರಿನ ವಿಚಾರವಾಗಿ ವ್ಯಕ್ತಿಗಳು ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಆದರೂ ತಮಿಳುನಾಡು ಸರ್ಕಾರ ವ್ಯಕ್ತಿಯಿಂದ ಕೇಸ್ ಹಾಕಿಸಿದೆ. ಹೀಗಾಗಿ, ಸುಪ್ರಿಂ ಕೋರ್ಟ್​ಗೆ ಈ ಪ್ರಕರಣವನ್ನು ತೆಗೆದುಕೊಂಡು ಹೋಗಲು ನಾವೇ ತೀರ್ಮಾನಿಸಿದ್ದೇವೆ ಎಂದು ಬೆಂಗಳೂರಿನ ವಿಕಾಸಸೌಧದಲ್ಲಿ ಇಂದು ನಡೆದ ಜಲ ವಿವಾದದ ಕುರಿತ ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ವೈಗೈ, ವೆಲ್ಲಾರು, ಗುಂಡಾರು ನದಿ ಜೋಡಣೆ ವಿಚಾರದ ಕುರಿತು ವಿವರಿಸಿದ ಅವರು, ತಮಿಳುನಾಡು ಸರ್ಕಾರ ಯೋಜನೆಗೆ ಅಡಿಗಲ್ಲು ಹಾಕಿದೆ. ಇದು ಹೆಚ್ಚುವರಿ ಕಾವೇರಿ ನೀರು ಬಳಕೆ ಮಾಡುವ ಯೋಜನೆಯಾಗಿದ್ದು, ಹೆಚ್ಚುವರಿ ನೀರು ಇನ್ನೂ ಸರಿಯಾಗಿ ಹಂಚಿಕೆಯಾಗಿಲ್ಲ. ಈ ಮೊದಲೇ ತಮಿಳುನಾಡು ಸರ್ಕಾರ ಯೋಜನೆ ಆರಂಭಿಸಿದೆ. ಇದು ತಮಿಳುನಾಡು ಕಾನೂನಿನ ವಿರುದ್ಧವಾಗಿ ತೆರಳುತ್ತಿರುವುದನ್ನು ಸೂಚಿಸುತ್ತದೆ. ತಮಿಳುನಾಡಿನ ಈ ನಡೆಯನ್ನು ಕರ್ನಾಟಕ ಸರ್ಕಾರ ವಿರೋಧಿಸುತ್ತದೆ. ಅಲ್ಲದೇ ಕಾನೂನು ಹೋರಾಟ ಮುಂದುವರೆಸಲಿದ್ದೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಹಾದಾಯಿ ವಿಚಾರದಲ್ಲಿ 3 ರಾಜ್ಯದಲ್ಲಿ ಓರ್ವ ನೋಡಲ್ ಅಧಿಕಾರಿ ನೇಮಕ ಮಾಡಲಾಗಿದೆ. ನದಿ ಪಾತ್ರ ಕೆಳಗಡೆ ಇದ್ದು, ಲಿಂಕಿಂಗ್ ಪ್ಯಾನಲ್ ಮೇಲಿದೆ. ಕರ್ನಾಟಕ ಯಾವುದೇ ಡೈವರ್ಶನ್ ಮಾಡಿಲ್ಲ. ಅವರು ತನಿಖೆ ಮಾಡಲು ನಮ್ಮ ಯಾವುದೇ ಅಭ್ಯಂತರ ಇಲ್ಲ ಎಂದು ಅವರು ತಿಳಿಸಿದರು. ಸ್ವತಂತ್ರ ಪೂರ್ವದ ಅನೇಕ ಯೋಜನೆ ದುಸ್ಥಿತಿಯಲ್ಲಿದ್ದು, ತಮಿಳುನಾಡು ಅವುಗಳನ್ನು ಸರಿಪಡಿಸಿಕೊಳ್ಳಲೂ ಬಿಡದೇ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ತಮಿಳುನಾಡಿನಲ್ಲಿ ಸದ್ಯದಲ್ಲೇ ಚುನಾವಣೆ ನಡೆಯಲಿದೆ ಎಂದು ಮೃದು ಧೋರಣೆ ತಾಳುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಅಲ್ಲಿನ ಚುನಾವಣೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಈ ಕುರಿತು ಸೃಷ್ಟಿಯಾಗುವ
ಊಹಾಪೋಹಗಳಿಗೆ ಉತ್ತರ ಕೊಡಲು ಆಗುವುದಿಲ್ಲ ಎಂದು ವಿವರಿಸಿದರು.

ಕೃಷ್ಣಾ ನದಿ ಕುರಿತು ಮಹಾರಾಷ್ಟ್ರದ ಜತೆ ವಾದ ಮಂಡಿಸಿದ್ದು, ಆದಷ್ಟು ಬೇಗ ಇಯರಿಂಗ್ ಮಾಡಿಸಿ, ಗೆಜೆಟ್ ನೋಟಿಪಿಕೇಷನ್ ಮಾಡಿಸಲು ತಯಾರಿ ನಡೆಸಿದ್ದೇವೆ. ಗಡಿಯಲ್ಲಿನ ಜಲ ವಿವಾದಗಳಲ್ಲಿ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಮಹದಾಯಿ, ಕಾವೇರಿ ವಿಚಾರವಾಗಿ ರಾಜ್ಯದ ಹಿತಾಸಕ್ತಿ ಮುಖ್ಯ. ರಾಜ್ಯದ ಹಿತಾಸಕ್ತಿಗಾಗಿ ಹೋರಾ ನಡೆಸುತ್ತೇವೆ. ನಮ್ಮ ರಾಜ್ಯಕ್ಕೆ ಧಕ್ಕೆಯಾಗುವ ವಿಚಾರ ಬಂದರೆ ಸುಮ್ಮನಿರುವುದಿಲ್ಲ. ರಾಜ್ಯದ ಹಿತಾಸಕ್ತಿಗೋಸ್ಕರ ನಾವು ಕಾನೂನು ಹೋರಾಟ ಮಾಡುತ್ತೇವೆ. ನಮ್ಮ ರಾಜ್ಯಕ್ಕೆ ದಕ್ಕೆಯಾಗುವ ವಿಚಾರ ಬಂದರೇ ನಾವೂ ಸುಮ್ಮನೇ ಇರೋದಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು