ಸಚಿವ ಡಾ. ಸುಧಾಕರ್ ದೇವಲೋಕದಿಂದ ಇಳಿದು ಬಂದಿಲ್ಲ.. ಶಾಸಕ ರೇಣುಕಾಚಾರ್ಯ ಕೆಂಡಾಮಂಡಲ
ಆರೋಗ್ಯ ಇಲಾಖೆಗೆ ಸಂಬಂಧಿಸಿದ ಹೊನ್ನಾಳಿ ಕ್ಷೇತ್ರದ ಕೆಲ ಕೆಲಸದ ಬಗ್ಗೆ ರೇಣುಕಾಚಾರ್ಯ ಅವರು ಡಾ.ಕೆ.ಸುಧಾಕರ್ ಬಳಿ ತಿಳಿಸಿದ್ದರು. ಇದೇ ವಿಚಾರವಾಗಿ ಪದೇಪದೆ ಮನವಿ ಮಾಡಿದರೂ ಸುಧಾಕರ್ ಸ್ಪಂದಿಸದಿದ್ದಕ್ಕೆ ರೇಣುಕಾಚಾರ್ಯ ಕೋಪಗೊಂಡಿದ್ದಾರೆ. ಸಚಿವ ಡಾ.ಕೆ.ಸುಧಾಕರ್ ಶಾಸಕರ ಕೈಗೇ ಸಿಗುವುದಿಲ್ಲ. ಆದ್ರೆ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ನಾವು ಸುಮ್ಮನಿರುವುದಿಲ್ಲ ಎಂದು ರೇಣುಕಾಚಾರ್ಯ ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರು: ಬಿಜೆಪಿಯಲ್ಲಿ ಸಚಿವರು ಮತ್ತು ಶಾಸಕರ ಮಧ್ಯೆ ಶೀತಲ ಸಮರ ಶುರುವಾಗಿದ್ದು ಡಾ.ಕೆ.ಸುಧಾಕರ್ ಪಿಎಗಳು ಫೋನ್ ಸ್ವೀಕರಿಸುತ್ತಿಲ್ಲ. ಅವರೇನು ದೇವಲೋಕದಿಂದ ಇಳಿದು ಬಂದಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸಚಿವ ಸುಧಾಕರ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಈ ಬಗ್ಗೆ ಮಾತನಾಡಿದ ರೇಣುಕಾಚಾರ್ಯ ತಮ್ಮದೇ ಪಕ್ಷದ ಸಚಿವ ಸುಧಾಕರ್ ನಡೆಯನ್ನು ಖಂಡಿಸಿ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಆರೋಗ್ಯ ಇಲಾಖೆಗೆ ಸಂಬಂಧಿಸಿದ ಹೊನ್ನಾಳಿ ಕ್ಷೇತ್ರದ ಕೆಲ ಕೆಲಸದ ಬಗ್ಗೆ ರೇಣುಕಾಚಾರ್ಯ ಅವರು ಡಾ.ಕೆ.ಸುಧಾಕರ್ ಬಳಿ ತಿಳಿಸಿದ್ದರು. ಇದೇ ವಿಚಾರವಾಗಿ ಪದೇಪದೆ ಮನವಿ ಮಾಡಿದರೂ ಸುಧಾಕರ್ ಸ್ಪಂದಿಸದಿದ್ದಕ್ಕೆ ರೇಣುಕಾಚಾರ್ಯ ಕೋಪಗೊಂಡಿದ್ದಾರೆ. ಸಚಿವ ಡಾ.ಕೆ.ಸುಧಾಕರ್ ಶಾಸಕರ ಕೈಗೇ ಸಿಗುವುದಿಲ್ಲ. ಆದ್ರೆ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ನಾವು ಸುಮ್ಮನಿರುವುದಿಲ್ಲ ಎಂದು ರೇಣುಕಾಚಾರ್ಯ ಆಕ್ರೋಶ ಹೊರ ಹಾಕಿದ್ದಾರೆ. ಕೆಲ ಸಚಿವರು ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕು. ಸಚಿವ ಡಾ.ಕೆ.ಸುಧಾಕರ್ ನನ್ನ ಫೋನ್ ಸ್ವೀಕರಿಸುತ್ತಿಲ್ಲ. ಹಾಗೂ ಸುಧಾಕರ್ ಪಿಎಗಳು ಸಹ ನನ್ನ ಫೋನ್ ಸ್ವೀಕರಿಸುತ್ತಿಲ್ಲ. ಅವರೇನು ದೇವಲೋಕದಿಂದ ಇಳಿದು ಬಂದಿಲ್ಲವೆಂದು ಸುಧಾಕರ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ಸಚಿವ ಡಾ.ಸುಧಾಕರ್ ವಿರುದ್ಧ ರೇಣುಕಾಚಾರ್ಯ ಕಿಡಿ ಸುಧಾಕರ್ಗೆ ಎರಡೆರಡು ಖಾತೆ ಕೇಳುವುದಕ್ಕೆ ಆಗುತ್ತೆ. ನಮ್ಮ ಬೇಡಿಕೆಗಳಿಗೆ ಸ್ಪಂದಿಸುವುದಕ್ಕೆ ಇವರಿಗೆ ಆಗಲ್ವಾ?ಡಾ.ಕೆ.ಸುಧಾಕರ್ ಒಬ್ಬರಿಂದಲೇ ಈ ಸರ್ಕಾರ ಬಂದಿಲ್ಲ. ಇವರಷ್ಟೇ ಅಲ್ಲ ಐದರಿಂದ ಆರು ಸಚಿವರು ಶಾಸಕರ ಕೈಗೇ ಸಿಗುತ್ತಿಲ್ಲ. ಇವರೇನು ಬಿಟ್ಟಿ ಗೆದ್ದು ಬಂದಿಲ್ಲವೆಂದು ಸಚಿವರ ವಿರುದ್ಧ ಶಾಸಕ ರೇಣುಕಾಚಾರ್ಯ ಗರಂ ಆಗಿದ್ದಾರೆ. ನಾನು ಎರಡು ಭಾರಿ ಜೈಲಿಗೆ ಹೋಗಿ ಬಂದಿದ್ದೇನೆ. ಪಕ್ಷ ಸಂಘಟನೆಯ ಕೆಲಸ ಮಾಡಿ ಮೂರು ಭಾರಿ ಗೆದ್ದಿದ್ದೇನೆ. ಆದ್ರೆ ಪಕ್ಷಕ್ಕಾಗಿ ಕೆಲವರ ಕೊಡುಗೆ ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ. ನನಗೆ ಅವಮಾನ ಮಾಡಿದ್ದಾರೆ, ಇದನ್ನು ಖಂಡಿಸುತ್ತೇನೆ ಎಂದು ಆಕ್ರೋಶದಿಂದ ಹೇಳಿದ್ದಾರೆ.
ಇದನ್ನೂ ಓದಿ: ನರ್ಸ್ ಹಿಂದೆ ಹೋಗಿರೋ ರೇಣುಕಾಚಾರ್ಯ ಮೊದಲು ಕಿಸ್ ಕೊಡೋದನ್ನ ನಿಲ್ಲಿಸಲಿ -ವಿಜಯಾನಂದ ಕಾಶಪ್ಪನವರ್