ನರ್ಸ್​ ಹಿಂದೆ ಹೋಗಿರೋ ರೇಣುಕಾಚಾರ್ಯ ಮೊದಲು ಕಿಸ್ ಕೊಡೋದನ್ನ ನಿಲ್ಲಿಸಲಿ -ವಿಜಯಾನಂದ ಕಾಶಪ್ಪನವರ್​

ನರ್ಸ್​ ಹಿಂದೆ ಹೋಗಿರೋ ರೇಣುಕಾಚಾರ್ಯ ಮೊದಲು ಕಿಸ್ ಕೊಡೋದನ್ನ ನಿಲ್ಲಿಸಲಿ -ವಿಜಯಾನಂದ ಕಾಶಪ್ಪನವರ್​
ರೇಣುಕಾಚಾರ್ಯ (ಎಡ); ವಿಜಯಾನಂದ ಕಾಶಪ್ಪನವರ್​ (ಬಲ)

Vijayanand Kashappanavar: ನರ್ಸ್​ಗೆ ರೇಣುಕಾಚಾರ್ಯ ಕಿಸ್ ಕೊಟ್ಟಿರೋದನ್ನ ನೋಡಿದ್ದೆ. ನರ್ಸ್​ ಹಿಂದೆ ಹೋಗಿರೋರು ರೇಣುಕಾಚಾರ್ಯ. ರೇಣುಕಾಚಾರ್ಯ ಮೊದಲು ಕಿಸ್ ಕೊಡೋದನ್ನ ನಿಲ್ಲಿಸಲಿ. ಆ ಮೇಲೆ ನಮ್ಮ ಬಗ್ಗೆ ಮಾತನಾಡಲಿ ಎಂದು ಕಾಶಪ್ಪನವರ್ ಹೊನ್ನಾಳಿ ಶಾಸಕರಿಗೆ ತಿರುಗೇಟು ಕೊಟ್ಟರು.

KUSHAL V

|

Feb 16, 2021 | 11:36 PM

ನೆಲಮಂಗಲ: ರೇಣುಕಾಚಾರ್ಯ ಯಾರು ನಮ್ಮ ಬಗ್ಗೆ ಮಾತನಾಡೋಕೆ? ರಾಜ್ಯವೇ ರೇಣುಕಾಚಾರ್ಯರ ಇತಿಹಾಸ ನೋಡಿದೆ ಎಂದು ಪಟ್ಟಣದಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್​ ಟಾಂಗ್ ಕೊಟ್ಟರು.

ನರ್ಸ್​ಗೆ ರೇಣುಕಾಚಾರ್ಯ ಕಿಸ್ ಕೊಟ್ಟಿರೋದನ್ನ ಇಡೀ ರಾಜ್ಯವೇ ನೋಡಿದ್ದೆ. ನರ್ಸ್​ ಹಿಂದೆ ಹೋಗಿರೋರು ರೇಣುಕಾಚಾರ್ಯ. ರೇಣುಕಾಚಾರ್ಯ ಮೊದಲು ಕಿಸ್ ಕೊಡೋದನ್ನ ನಿಲ್ಲಿಸಲಿ. ಆ ಮೇಲೆ ನಮ್ಮ ಬಗ್ಗೆ ಮಾತನಾಡಲಿ ಎಂದು ಕಾಶಪ್ಪನವರ್ ಹೊನ್ನಾಳಿ ಶಾಸಕರಿಗೆ ತಿರುಗೇಟು ಕೊಟ್ಟರು.

ಬಿಜೆಪಿ ಶಾಸಕ ರೇಣುಕಾಚಾರ್ಯಗೆ ಬದ್ಧಿ ಭ್ರಮಣೆಯಾಗಿದೆ. ಮಾಜಿ ಶಾಸಕರಿಗೆ ಏನು ಕೆಲಸವೆಂದು ಆತ ಕೇಳಿದ್ದಾರೆ. ಅವರು ಮಾಜಿ ಶಾಸಕರಾದಾಗ ಏನು ಮಾಡುತ್ತಿದ್ದರು? ಇಷ್ಟು ದಿನ ಸಿಎಂ, ಪುತ್ರನನ್ನು ಟೀಕಿಸ್ತಿದ್ರು, ಈಗ ಬಿಟ್ಟಿದ್ದಾರೆ ಎಂದು ಶಾಸಕ ರೇಣುಕಾಚಾರ್ಯ ವಿರುದ್ಧ ಕಾಶಪ್ಪನವರ್ ಆಕ್ರೋಶ ಹೊರಹಾಕಿದರು. ವಿಜಯಾನಂದ ಕಾಶಪ್ಪನವರ್ ಸಿಎಂ‌ ವಿರುದ್ಧ ಹೇಳಿಕೆ ನೀಡೋದನ್ನ ನಿಲ್ಲಿಸಲಿ ಎಂದು ಹೊನ್ನಾಳಿ ಬಿಜೆಪಿ ಶಾಸಕ ರೇಣುಕಾಚಾರ್ಯ ಈ ಹಿಂದೆ ಹೇಳಿಕೆ ನೀಡಿದ್ದರು.

‘ಹಿಂದುಳಿದ ಆಯೋಗಕ್ಕೆ ಮೀಸಲಾತಿ ವಿರುದ್ಧ ದೂರು ನೀಡಿದ್ದಾರೆ’ ಹಿಂದುಳಿದ ಆಯೋಗಕ್ಕೆ ಮೀಸಲಾತಿ ವಿರುದ್ಧ ದೂರು ನೀಡಿದ್ದಾರೆ. ಜಯಪ್ರಕಾಶ್​ ಹೆಗಡೆಯವರಿಗೆ 2A ನಲ್ಲಿರುವ ಸಮುದಾಯ ಹಾಗೂ ಲಿಂಗಾಯತ ಒಳಪಂಗಡಗಳು ದೂರು ನೀಡಿದ್ದಾರಂತೆ. ರಾಜಕೀಯ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ. ನಾನು ಅವರಲ್ಲಿ ಮನವಿ ಮಾಡುತ್ತೇನೆ, ಲಿಂಗಾಯತ ಒಳಪಂಗಡ ಸ್ವಾಮೀಜಿ, ಮುಖಂಡರಿಗೆ ಮನವಿ ಮಾಡುತ್ತೇನೆ ನಿಮಗೆ ಕೊಡುವಾಗ ನಾವು ಬೇಡ ಅಂದಿಲ್ಲ. ಅನೇಕ ಲಿಂಗಾಯತ ಒಳಪಂಗಡಕ್ಕೆ ಮೀಸಲಾತಿ ಸಿಕ್ಕಿದೆ. ರಾಜಕೀಯ ಉದ್ದೇಶದಿಂದ ದೂರು ನೀಡುವುದು ತಪ್ಪು. ಇದೆ ರೀತಿ ಮುಂದುವರಿಸಿದರೆ ಮುಂದೊಂದು ದಿನ ನಿಮ್ಮ ವಿರುದ್ಧ ನಮ್ಮ ಸಮುದಾಯ ನಿಲ್ಲುತ್ತೆ ಎಂದು ಮಾಜಿ ಶಾಸಕ ಎಚ್ಚರಿಕೆ ಕೊಟ್ರು.

ಇದನ್ನೂ ಓದಿ: ಏ ಹಿಂದಿ ಮೇ ನಕೊ: ದೆಹಲಿಯಲ್ಲೂ ಹಿಂದಿಯಲ್ಲಿ ಮಾತಾಡಲ್ಲ ಎಂದ ಸಿದ್ದರಾಮಯ್ಯ

Follow us on

Related Stories

Most Read Stories

Click on your DTH Provider to Add TV9 Kannada