ಡಿಕೆಶಿ ಅಣ್ಣ ಹೊನ್ನಾಳಿ ಕೋಟೆ ಭೇದಿಸೋಕೆ ಸಾಧ್ಯವೇ ಇಲ್ಲ, ನಾನು ರಾಜಕೀಯಕ್ಕೋಸ್ಕರ ಜಾತ್ರೆ ಮಾಡಲಿಲ್ಲ- ಶಾಸಕ ರೇಣುಕಾಚಾರ್ಯ

ಹೊನ್ನಾಳಿ ಕೋಟೆ ಭೇದಿಸಲು ಯಾರಿಂದಲೂ ಸಾಧ್ಯವಿಲ್ಲ. ನಾನೇನೂ ಭಂಡತನದ ಪರಮಾವಧಿ ಪ್ರದರ್ಶನ ಮಾಡಿಲ್ಲ. ಹೋರಿ ಬೆದರಿಸುವ ಜಾತ್ರೆಯಲ್ಲಿ ಕೊವಿಡ್ ಹರಡಿಲ್ಲ. ಮೇಕೆದಾಟು ಪಾದಯಾತ್ರೆಗೆ ಹೊರಗಿಂದ ಜನ ಬಂದಿದ್ದಾರೆ - ಮುಖ್ಯಮಂತ್ರಿ ಬೊಮ್ಮಾಯಿ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಸಮಜಾಯಿಷಿ

ಡಿಕೆಶಿ ಅಣ್ಣ ಹೊನ್ನಾಳಿ ಕೋಟೆ ಭೇದಿಸೋಕೆ ಸಾಧ್ಯವೇ ಇಲ್ಲ, ನಾನು ರಾಜಕೀಯಕ್ಕೋಸ್ಕರ ಜಾತ್ರೆ ಮಾಡಲಿಲ್ಲ- ಶಾಸಕ ರೇಣುಕಾಚಾರ್ಯ
ಎಂಪಿ.ರೇಣುಕಾಚಾರ್ಯ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jan 11, 2022 | 1:10 PM

ಬೆಂಗಳೂರು: ಹೊನ್ನಾಳಿ ಬಲಮುರಿ ಗ್ರಾಮದಲ್ಲಿ ಹೋರಿ ಬೆದರಿಸೋ ಹಬ್ಬ ಇತ್ತು. ಜಾಸ್ತಿ ಸಂಖ್ಯೆಯಲ್ಲಿ ಸುಮಾರು ಒಂದೂವರೆ ಲಕ್ಷ ಜನ ಸೇರಿದ್ದರು ಒಪ್ಕೋತಿನಿ, ನಾನೂ ಗಾಬರಿ ಆದೆ ಜನರನ್ನು ನೋಡಿ. ನನಗೂ ಮುಜುಗರ ಆಯ್ತು. ಹಾಗಾಗಿ ವಿಷಯ ಗೊತ್ತಾದ ತಕ್ಷಣ ನಾನು ನಾಡಿನ ಸಮಸ್ತ ಜನತೆಗೆ ಬಹಿರಂಗ ಕ್ಷಮೆ ಯಾಚಿಸಿದ್ದೇನೆ. ಈ ಕಾರ್ಯಕ್ರಮ ದಿಢೀರ್ ಆಗಿದ್ದಲ್ಲ, 20 ದಿನಗಳ ಹಿಂದೆ ಆಯೋಜನೆ ಮಾಡಿದ್ದು. ಕಾರ್ಯಕ್ರಮ ಮುಂದೂಡಬೇಕಾಗಿತ್ತು, ಮುಂದೂಡಿ ಅಂತ ನಾನು ಹೇಳಿದ್ದೆ. ಶನಿವಾರ ಬೆಳಗ್ಗೆ ಯುವಕರು ಬಂದಿದ್ದರು. ಕಾರ್ಯಕ್ರಮ ಮುಂದೂಡಿ, ಮುಜುಗರ ಆಗತ್ತೆ ಅಂತಾನೂ ಹೇಳಿದೆ. ನಾಡಿನ ಜನತೆ, ಪಕ್ಷದ ಮುಖಂಡರು ಎಲ್ಲರೂ ಹೇಳಿದ್ದರು. ಯುವಕರು ಕೇಳಲಿಲ್ಲ. ನನ್ನ ತಪ್ಪಿನ ಅರಿವಾಗಿ ಕ್ಷಮೆ ಕೇಳಿದ್ದೇನೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಸಮಜಾಯಿಷಿ ರೂಪದಲ್ಲಿ ತಮ್ಮ ಕ್ಷೇತ್ರದಲ್ಲಿ ನಡೆದಿದ್ದ ಕೋವಿಡ್​ ರೂಲ್ಸ್​ ಬ್ರೇಕ್ ಬಗ್ಗೆ ಮಾತನಾಡಿದ್ದಾರೆ.

ಡಿಕೆಶಿ ಅಣ್ಣ ಹೊನ್ನಾಳಿ ಕೋಟೆ ಭೇದಿಸೋಕೆ ಸಾಧ್ಯವೇ ಇಲ್ಲ. ಡಿ.ಕೆ.ಶಿವಕುಮಾರ್ ಅಧಿಕಾರಸ್ಕೋಸ್ಕರ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ನಾನು ರಾಜಕೀಯಕ್ಕೋಸ್ಕರ ಜಾತ್ರೆಯಲ್ಲಿ ಭಾಗಿಯಾಗಲಿಲ್ಲ. ಡಿಕೆಶಿ ಅಣ್ಣ ನೀವು ಅಧಿಕಾರದಲ್ಲಿದ್ದಾಗ ನಮ್ಮ ಮೇಲೆ ಕೇಸ್ ಮಾಡಿದ್ದಿರಿ. ನಿಮ್ಮ ಅಧಿಕಾರದಲ್ಲಿ ನಂಗೆ ಬೆಂಕಿ ಹಚ್ಚಿ ಸುಡಲು ಬಂದಿದ್ರು. ಡಿ.ಕೆ.ಶಿವಕುಮಾರ್ ನೀವು ನನ್ನ ತರಹ ಕ್ಷಮೆ ಕೇಳಿ. ಹೊನ್ನಾಳಿ ಕೋಟೆ ಭೇದಿಸಲು ಯಾರಿಂದಲೂ ಸಾಧ್ಯವಿಲ್ಲ. ನಾನೇನೂ ಭಂಡತನದ ಪರಮಾವಧಿ ಪ್ರದರ್ಶನ ಮಾಡಿಲ್ಲ. ಹೋರಿ ಬೆದರಿಸುವ ಜಾತ್ರೆಯಲ್ಲಿ ಕೊವಿಡ್ ಹರಡಿಲ್ಲ. ಮೇಕೆದಾಟು ಪಾದಯಾತ್ರೆಗೆ ಹೊರಗಿಂದ ಜನ ಬಂದಿದ್ದಾರೆ. ಕ್ಷೇತ್ರದ ಜನ ಹೇಳಿದ್ರೆ ಬಾವಿಗೆ ಬೀಳೋದಕ್ಕೂ ನಾನು ರೆಡಿ. ರಾಜಕಾರಣ ಮಾಡುವಾಗ ನಾನೂ ರಾಜಕಾರಣ ಮಾಡ್ತೀನಿ. ಸರ್ಕಾರ ಬೇಕಿದ್ದರೆ ನನ್ನ ಮೇಲೂ ಕೇಸ್ ಹಾಕಲಿ. ನನ್ನ ಮೇಲೆ ಕೇಸ್ ಹಾಕಿ ಅಂತ ಅಧಿಕಾರಿಗಳಿಗೆ ಹೇಳಿದ್ದೇನೆ. ಹೊನ್ನಾಳಿ ಜನರು ನನ್ನನ್ನ ಹೊನ್ನಾಳಿ ಹುಲಿ ಅಂತ ಕರೆಯುತಾರೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

ಇದನ್ನೂ ಓದಿ: ಕೊವಿಡ್ ನಿಯಮ ಉಲ್ಲಂಘಿಸಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗಿಯಾದ ಎಂಪಿ ರೇಣುಕಾಚಾರ್ಯ; ಬಳಿಕ ಕ್ಷಮೆಯಾಚನೆ

Published On - 1:07 pm, Tue, 11 January 22

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್